ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಂಚೆ ಇಲಾಖೆಯಿಂದ 'ನ್ಯಾಷನಲ್ ಪೋಸ್ಟಲ್ ವೀಕ್'

By Vanitha
|
Google Oneindia Kannada News

ಬೆಂಗಳೂರು, ಅಕ್ಟೋಬರ್, 10 : ನಾಗರಿಕ ಸಂವಹನ ಪ್ರಪಂಚದ ಮುಖ್ಯ ಭಾಗವಾಗಿರುವ ಅಂಚೆ ಇಲಾಖೆ ಅಕ್ಟೋಬರ್ 9ರ ಶುಕ್ರವಾರದಿಂದ 'ರಾಷ್ಟ್ರೀಯ ಪೋಸ್ವಲ್ ವೀಕ್' ಆರಂಭಿಸಿದೆ. ಇದರ ಪ್ರಯುಕ್ತ ಅಕ್ಟೋಬರ್ 10ರ ಶನಿವಾರ ಶಾಲಾ ಮಕ್ಕಳಿಗೆ ಪತ್ರ ಬರೆಯುವ ಸ್ಪರ್ಧೆ ಏರ್ಪಡಿಸಿತ್ತು. ಇದರಲ್ಲಿ ವಿವಿಧ ಶಾಲಾ ಮಕ್ಕಳು ಭಾಗವಹಿಸಿ ತಮ್ಮ ಪ್ರತಿಭೆ ವ್ಯಕ್ತಪಡಿಸಿದರು.

ಅಂಚೆ ಇಲಾಖೆ 160 ವರ್ಷ ಪೂರೈಸಿದ ಸಂಭ್ರಮದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಪೋಸ್ವಲ್ ವೀಕ್ ಪ್ರಾರಂಭಿಸಿದೆ. ಈ ನಿಮಿತ್ತ ನಗರದ ಅಂಬೇಡ್ಕರ್ ರಸ್ತೆಯ ಪ್ರಧಾನ ಕಚೇರಿಯಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ನಗರಾದ್ಯಂತ ಪತ್ರ ಸಂಸ್ಕೃತಿ ಬಗ್ಗೆ ಅರಿವು ಮೂಡಿಸಲು ಮುಂದಾಗಿದೆ.[ರಾಮಾಯಣ, ಮಹಾಭಾರತದ ಕತೆ ಹೇಳಲಿವೆ ಅಂಚೆ ಚೀಟಿಗಳು]

National postal week in Bengaluru from October 9th, Friday

ಅಕ್ಟೋಬರ್ 13ರ ಮಂಗಳವಾರ ಆಯ್ದ ಶಾಲೆಗಳಿಗೆ ತೆರಳಿ ಅಂಚೆ ಚೀಟಿ ಸಂಗ್ರಹಣೆ, ಇದರ ಉಪಯೋಗ, ಸಂಗ್ರಹಿಸುವುದು ಹೇಗೆ ಎಂಬುದರ ಕುರಿತಾಗಿ ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸ ನೀಡಲಾಗುವುದು. ಪೋಸ್ಟಲ್ ನ ಕುರಿತಾಗಿ ಸಮಗ್ರ ಜ್ಞಾನವನ್ನು ಜನರಿಗೆ ಹಾಗೂ ಮಕ್ಕಳಿಗೆ ನೀಡುವುದರ ಮೂಲಕ ಪತ್ರ ಸಂಸ್ಕೃತಿ ಜಾಗೃತಗೊಳಿಸುವ ಉದ್ದೇಶ ಹೊಂದಿದ್ದೇವೆ ಎಂದು ಹೆಚ್ಚುವರಿ ಮುಖ್ಯ ಪೋಸ್ಟ್ ಮಾಸ್ಟರ್ ದಿನೇಶ್ ಖರೆ ಹೇಳಿದ್ದಾರೆ.

ಮಂಗಳವಾರ ಬೆಳಿಗ್ಗೆ 10.30ಕ್ಕೆ ಜಿಪಿಒ ಕಚೇರಿಯಿಂದ ಕಬ್ಬನ್ ಪಾರ್ಕಿನಲ್ಲಿ ಕೇಂದ್ರ ಗ್ರಂಥಾಲಯದವರೆಗೆ 'ವಾಕ್ ಆಂಡ್ ಟಾಕ್' ಜಾಥಾ ಹಮ್ಮಿಕೊಂಡಿದ್ದು, ಮಕ್ಕಳಿಗೆ ಪತ್ರ ಬರೆಸಲಾಗುತ್ತದೆ. ಈ ಜಾಥಾದಲ್ಲಿ ಸುಮಾರು 80 ವಿದ್ಯಾರ್ಥಿಗಳು ಹಾಗೂ ಶಿಕ್ಷಕರು, ಜಿಪಿಒ ಸದಸ್ಯರು ಭಾಗವಹಿಸುತ್ತಾರೆ.[ಅಂಚೆ ಇಲಾಖೆಯ ವಿಶೇಷ ಲಕೋಟೆ ಕೊಂಡುಕೊಳ್ಳಿ]

National postal week in Bengaluru from October 9th, Friday

ಪೋಸ್ಟಲ್ ಹಮ್ಮಿಕೊಂಡ ಕಾರ್ಯಕ್ರಮಗಳು :

* ಸಾರ್ವಜನಿಕರೊಂದಿಗೆ ನೇರ ಸಂವಾದ

* ವಿವಿಧ ಶಾಲೆಗಳಿಗೆ ಪೋಸ್ಟಲ್ ಅಧಿಕಾರಿಗಳ ಭೇಟಿ, ಅಂಚೆ ಕಚೇರಿ ಸೇವೆ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡುವುದು

* ಜಿಪಿಒ(Jeneral post office) ಸಿಬ್ಬಂದಿಗೆ ಕೌಶಲ ಕಾರ್ಯಾಗಾರ

* ಉಳಿತಾಯ, ಬ್ಯಾಂಕ್ ಕ್ಯಾಂಪ್, ಫಿಲಾಟ್ಲೆ ದಿನ, ಪೋಸ್ಟಲ್ ಲೈಫ್ ಇನ್ಶೂರೆನ್ಸ್ ಡೇ, ಬ್ಯುಸಿನೆಸ್ ಡೆವಲಪ್ ಮೆಂಟ್

* ಹಿಂದುಳಿದ ಶಾಲೆಗಳಿಗೆ ತೆರಳಿ ಮೊಬೈಲ್ ಫಿಲಾಟ್ಲೆ ಪ್ರದರ್ಶನ

* ಮಕ್ಕಳ ಭಾವಚಿತ್ರಗಳನ್ನು ಬಳಸಿಕೊಂಡು ಮೈ ಸ್ಟಾಂಪ್ ತಯಾರಿಸಿ ಅದರ ಬಗ್ಗೆ ಮಾಹಿತಿ ನೀಡುವುದು

* ಅಂಚೆ ಕಚೇರಿಯ ವಿವಿಧ ವಿಭಾಗಗಳ ಕಾರ್ಯ ವೈಖರಿ ಪರಿಚಯ ಮಾಡಿಸುವುದು

*ಅಕ್ಟೋಬರ್ 12ರಂದು ಗಾಂಧಿ ಭಾವಚಿತ್ರವಿರುವ ಹೊಸ ಸ್ಟಾಂಪ್ ಬಿಡುಗಡೆ

English summary
Bengaluru Main post office has organized National Postal Week from October 9th and give information about Postal facilities, Stamp collection etc.Many school children participated writing letter competation
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X