ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ ಫೆ.13, 14ರಂದು ನಮ್ಮೂರ ಹಬ್ಬ 2016

|
Google Oneindia Kannada News

ಬೆಂಗಳೂರು, ಫೆಬ್ರವರಿ 05 : ಅಭಿನಂದನ ಟ್ರಸ್ಟ್ ಕರಾವಳಿ ಭಾಗದ ಸಂಸ್ಕೃತಿ, ಆಚರಣೆಗಳನ್ನು ಪ್ರಚುರಪಡಿಸಲು ಫೆ.13 ಮತ್ತು 14ರಂದು ಬೆಂಗಳೂರಿನಲ್ಲಿ 'ನಮ್ಮೂರ ಹಬ್ಬ 2016' ಉತ್ಸವ ಹಮ್ಮಿಕೊಂಡಿದೆ.

ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಆರೋಗ್ಯ ಸಚಿವ ಯು.ಟಿ.ಖಾದರ್ ಅವರು ಉತ್ಸವದ ಬಗ್ಗೆ ಮಾಹಿತಿ ನೀಡಿದರು. 'ಜಯನಗರದಲ್ಲಿರುವ ಚಂದ್ರಗುಪ್ತ ಕ್ರೀಡಾಂಗಣದಲ್ಲಿ ಫೆ.13 ಮತ್ತು 14ರಂದು ನಮ್ಮೂರ ಹಬ್ಬ 2016 ಉತ್ಸವ ನಡೆಯಲಿದೆ' ಎಂದು ಹೇಳಿದರು. [ನಮ್ಮೂರ ಹಬ್ಬ ಫೇಸ್ ಬುಕ್ ಪುಟ]

Nammura Habba

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಟ್ರಸ್ಟ್‌ ಕಾರ್ಯದರ್ಶಿ ಬಿ.ಎನ್.ನರಸಿಂಹ ಅವರು, 'ಉತ್ಸವದಲ್ಲಿ ಕರಾವಳಿಯ ಯಕ್ಷಗಾನ, ಬಯಲಾಟ, ಜೀವನ ಶೈಲಿ ಮತ್ತು ಖಾದ್ಯಗಳ ವೈವಿಧ್ಯತೆಯನ್ನು ಬೆಂಗಳೂರು ನಗರದ ಜನರಿಗೆ ಪರಿಚಯಿಸಲಾಗುವುದು' ಎಂದರು. [ಕರಾವಳಿ ಭಾಗದಲ್ಲಿ ಒಂದು ವರ್ಷದಲ್ಲಿ 217 ಕೊಲೆ]

'ನಮ್ಮೂರ ಹಬ್ಬದಲ್ಲಿ 1 ಲಕ್ಷಕ್ಕೂ ಅಧಿಕ ಜನರು ಭಾಗವಹಿಸಲಿದ್ದು, 200ಕ್ಕೂ ಹೆಚ್ಚು ಕಲಾವಿದರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಳ್ಳಲಿದ್ದಾರೆ. ಈ ವರ್ಷ ಹುಲಿ ಕುಣಿತ ವಿಶೇಷವಾಗಿದೆ' ಎಂದು ನರಸಿಂಹ ಅವರು ತಿಳಿಸಿದರು. ['ಹಳ್ಳಿ ಮನೆ ರೊಟ್ಟಿಸ್' ರುಚಿ ಹಿಂದಿದೆ ಯಶಸ್ಸಿನ ಕಥೆ!]

ವಿವಿಧ ಕಾರ್ಯಕ್ರಮಗಳು : ನಮ್ಮೂರ ಹಬ್ಬದಲ್ಲಿ ಎರಡು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಫೆ.13ರಂದು ಆದರ್ಶ ದಂಪತಿ ಸ್ಪರ್ಧೆ, ಕರಾವಳಿ ವಿಶೇಷ ವೈಭವ ನೃತ್ಯ, ಕರಾವಳಿ ಫ್ಯಾಷನ್ ಶೋ, ಗಾಯನ ಸ್ಪರ್ಧೆ ನಡೆಯಲಿದೆ.

ಫೆ.14ರಂದು ಬಯಲಾಟ, ಮಕ್ಕಳು ಹಾಗೂ ವಯಸ್ಕರಿಗೆ ಚಿತ್ರಕಲಾ ಸ್ಪರ್ಧೆ, ಹಗ್ಗಜಗ್ಗಾಟ, ಕ್ರೀಡಾ ಸ್ಪರ್ಧೆಗಳು ನಡೆಯಲಿವೆ. ಸಂಜೆ 5 ಗಂಟೆಗೆ ಸರಿಗಮಪ ಲಿಟಲ್ ಚಾಂಪ್ಸ್ ಖ್ಯಾತಿಯ ಸಾನ್ವಿ ಶೆಟ್ಟಿ, ಅಭಿನವ್ ಭಟ್ ಮುಂತಾದವರು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

ಖಾದ್ಯಗಳು : ನಮ್ಮೂರ ಹಬ್ಬದಲ್ಲಿ ನೀರು ದೋಸೆ, ಹಾಲುಬಾಯಿ, ಕಾಯಿಕಡಬು, ಗೋಲಿಬಜೆ, ಪತ್ರೋಡೆ, ಉದ್ದಿನ ದೋಸೆ, ಕಡಲ ಏಡಿಯ ಸುಕ್ಕ, ಕೋರಿ ರೊಟ್ಟಿ, ಮೀನು ಹಾಗೂ ಸಿಗಡಿಯ ಖಾದ್ಯಗಳು ದೊರೆಯಲಿವೆ.

ವಿಳಾಸ : ಚಂದ್ರಗುಪ್ತಮೌರ್ಯ ಕ್ರೀಡಾಂಗಣ (ಶಾಲಿನಿ ಗ್ರೌಂಡ್), ಜಯನಗರ 5ನೇ ಬ್ಲಾಕ್, ಬೆಂಗಳೂರು

ಇಂದು ಹಾಗು ನಾಳೆ ಬೆಂಗಳೂರಿನ ಜಯನಗರ ಐದನೇ ಹಂತದಲ್ಲಿರುವ ಶಾಲಿನಿ ಮೈದಾನದಲ್ಲಿ ಕರ್ನಾಟಕ ಕರಾವಳಿಯ ಕಲೆ, ಕ್ರೀಡೆ ಹಾಗು ಖಾದ್ಯಗಳ ಮಹಾಮೇಳವಾದ "ನಮ...

Posted by Nammura Habba -ನಮ್ಮೂರ ಹಬ್ಬ onFriday, February 12, 2016

English summary
Abhinandana Cultural Trust organized Nammura Habba 2016 event at Bengaluru on February 13 and 14. Nammura Habba is a event which brings together Karavali flock residing in Bengaluru. Habba will be held at Chandragupta Maurya Ground Jayanagar 5th block.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X