ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಹಿಳೆಯರು, ಹಿರಿಯ ನಾಗರಿಕರ ನೆರವಿಗೆ ನಿಂತ ನಮ್ಮ ಮೆಟ್ರೋ

|
Google Oneindia Kannada News

ಬೆಂಗಳೂರು, ಆಗಸ್ಟ್, 22: ಹಿರಿಯ ನಾಗರಿಕರು, ಮಹಿಳೆಯರು ಮತ್ತು ಅಂಗವಿಕಲರ ನೆರವಿಗೆ ಮುಂದಾಗಿರುವ ನಮ್ಮ ಮೆಟ್ರೋ ಅವರಿಗೆ ಸೀಟು ಕಾಯ್ದಿರಿಸಿ ನೀಡಲು ಮುಂದಾಗಿದೆ. ಪ್ರಯಾಣಿಕರ ದಟ್ಟಣೆ ಹೆಚ್ಚಿರುವ ಪರಿಣಾಮ ಮೆಟ್ರೋ ಹಿರಿಯ ನಾಗರಿಕರಿಗೆ ಮತ್ತು ಮಹಿಳೆಯರಿಗೆ ಬಸ್ ನಲ್ಲಿ ಇರುವಂತೆ ಮೀಸಲು ಆಸನಗಳನ್ನು ಕಾಯ್ದಿರಿಸುತ್ತೇನೆ ಎಂದು ಹೇಳಿದೆ.

ಮಕ್ಕಳನ್ನು ಎತ್ತಿಕೊಂಡ ಮಹಿಳೆಯರು, ಅಂಗವಿಕಲರು ಅನುಭವಿಸುತ್ತಿದ್ದ ತೊಂದರೆ ಮನಗಂಡ ಬಿ ಎಂ ಆರ್ ಸಿ ಎಲ್ ಹಿರಿಯ ನಾಗರಿಕರು, ಅಂಗವಿಕಲರು, ಗರ್ಭಿಣಿಯರು ಮತ್ತು ಮಗು ಎತ್ತಿಕೊಂಡಿರುವ ಮಹಿಳೆಯರಿಗೆ ಆಸನಗಳನ್ನು ಮೀಸಲಿರಿಸಿದೆ.[ಮೈಸೂರು ರಸ್ತೆ ಮೆಟ್ರೋ ನಿಲ್ದಾಣದಲ್ಲಿ ಪಾರ್ಕಿಂಗ್‌ಗೆ ಶುಲ್ಕ ಕಟ್ಟಬೇಕು]

Namma Metro starts 'priority seating' campaign

ಬೋಗಿಗಳ ಮೊದಲ ಎರಡು ಹಾಗೂ ಹಿಂದಿನ ಎರಡು ಆಸನಗಳ ಸಾಲು (ತಲಾ ಇಬ್ಬರು ಕೂರುವಂಥದ್ದು) ಮೀಸಲಿರಿಸಲಾಗಿದೆ. ಈ ರೀತಿ ಒಂದು ರೈಲಿನ ಮೂರು ಬೋಗಿಗಳಲ್ಲಿ ಒಟ್ಟು 24 ಆಸನಗಳನ್ನು ಮೀಸಲಿಡಲಾಗುತ್ತದೆ. ಈ ಸೀಟಿನ ಮೇಲ್ಭಾಗದಲ್ಲಿ ಯಾರಿಗೆ ಮೀಸಲಿರಿಸಲಾಗಿದೆ ಎಂಬುದನ್ನು ಕನ್ನಡ ಮತ್ತು ಇಂಗ್ಲಿಷ್ ನಲ್ಲಿ ಬರೆದಿರಲಾಗುತ್ತದೆ.[ನಮ್ಮ ಮೆಟ್ರೋ ನಿಲ್ದಾಣದಲ್ಲಿ ಬಾಡಿಗೆ ಬೈಕ್ ಸೇವೆ ಆರಂಭ]

ಮೀಸಲು ಆಸನದಲ್ಲಿ ಕುಳಿತು ಪ್ರಯಾಣಿಸುವ ಪ್ರಯಾಣಿಕರಿಗೆ ಸದ್ಯಕ್ಕೆ ದಂಡ ವಿಧಿಸಲಾಗುತ್ತಿಲ್ಲ. ಜಾಗೃತಿ ಮತ್ತು ವ್ಯವಸ್ಥೆಯ ಕಟ್ಟುನಿಟ್ಟಿನ ಜಾರಿ ನಂತರ ಯಾವ ಪ್ರಮಾಣದ ದಂಡ ವಸೂಲಿ ಮಾಡಬೇಕು ಎಂದು ತೀರ್ಮಾನಕ್ಕೆ ಬರಲಾಗುವುದು ಎಂದು ಬಿಎಂಆರ್ ಸಿ ಎಲ್ ತಿಳಿಸಿದೆ.

English summary
Bengaluru: The Banglore Metro Rail Corporation Ltd (BMRCL) has launched a ‘priority seating' campaign on its trains, wherein 40 graphic posters have been put up in coaches asking commuters to offer seats to elderly citizens, physically challenged, pregnant women and women with infants.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X