ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಲ್ಲೇಶ್ವರಂ ಟು ನಾಗಸಂದ್ರ= 25 ನಿಮಿಷ

|
Google Oneindia Kannada News

ಬೆಂಗಳೂರು, ಮೇ. 1: ಉದ್ಯಾನ ನಗರಿ ಮತ್ತೊಂದು ಹೆಮ್ಮೆಗೆ ಪಾತ್ರವಾಗಿದೆ. ನಮ್ಮ ಮೆಟ್ರೋ ರೀಚ್ 3 ಬಿಗೆ ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದ್ದಾರೆ.

ಪೀಣ್ಯ ಕೈಗಾರಿಕಾ ಪ್ರದೇಶದಿಂದ ನಾಗಸಂದ್ರವರೆಗೆ ಸಂಚರಿಸಲಿರುವ ಮೆಟ್ರೋಗೆ ಸಿಎಂ ಸಿದ್ದರಾಮಯ್ಯ, ಕೇಂದ್ರ ಸಚಿವರಾದ ವೆಂಕಯ್ಯ ನಾಯ್ಡು, ಸದಾನಂದಗೌಡ ಗ್ರೀನ್ ಸಿಗ್ನಲ್ ನೀಡಿದರು. ಈ ವೇಳೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಉಪಸ್ಥಿತರಿದ್ದರು. ಮೆಟ್ರೋ ಸಂಚಾರ ಮೇ. 1 ರಿಂದಲೇ ಆರಂಭವಾಗಿದೆ.

ಧಿಕ್ಕಾರ ಕೂಗಿದ ನಾಗರೀಕರು
ವೇದಿಕೆಯಲ್ಲಿ ಗಣ್ಯರು ಮಾತನಾಡುತ್ತಿದ್ದರೆ ಮತ್ ತೊಂದೆಡೆ ಪ್ರತಿಭಟನೆ ಕಂಡುಬಂದಿತು. ಸಾಮಾಜಿಕ ಕಾರ್ಯಕರ್ತ ಕಾರ್ಯಕರ್ತ ನರಸಿಂಹಮೂರ್ತಿ ನೇತೃತ್ವದಲ್ಲಿ ಪ್ರತಿಭಟನಾಕಾರರು ಘೋಷಣೆ ಕೂಗಿದರು. ಮೆಟ್ರೋ ನಿಲ್ದಾಣದಲ್ಲಿ ಮೊದಲು ಮೂಲಸೌಕರ್ಯ ಕಲ್ಪಿಸಿ ಎಂದು ಆಗ್ರಹಿಸಿದರು. ಮೆಟ್ರೋ ನಿರ್ಮಾಣಕ್ಕೆ ಜಾಗ ವಶಪಡಿಸಿಕೊಂಡ ಸಂತ್ರಸ್ತರಿಗೆ ಇನ್ನು ಪರಿಹಾರ ಸಿಕ್ಕಿಲ್ಲ. ತೋರಿಕೆಯ ಉದ್ಘಾಟನೆ ಬೇಕಾಗಿಲ್ಲ. ಮೆಟ್ರೋ ನಿಲ್ದಾಣಗಳಲ್ಲಿ ಕುಡಿಯುವ ನೀರಿಲ್ಲ ಎಂಬ ಆರೋಪಗಳನ್ನು ಮಾಡಿದ ಪ್ರತಿಭಟನಾಕಾರರು ವೇದಿಕೆಗೆ ನುಗ್ಗಲು ಯತ್ನಿಸಿದರು. ಪೊಲೀಸರು ಅವರನ್ನು ಬಂಧಿಸಿ ಕರೆದೊಯ್ದರು.

25 ನಿಮಿಷ ಸಾಕು

ನಾಗಸಂದ್ರ ನಿಲ್ದಾಣದಲ್ಲಿ ರೈಲಿಗೆ ಚಾಲನೆ ನೀಡಿದ ಬಳಿಕ ಪೀಣ್ಯ ಕೈಗಾರಿಕಾ ಪ್ರದೇಶದವರೆಗೆ ಸಿಎಂ ಹಾಗೂ ಕೇಂದ್ರ ಸಚಿವರು ಮೆಟ್ರೋದಲ್ಲಿ ಪ್ರಯಾಣ ಬೆಳೆಸಿದರು. ಸಂಪಿಗೆ ರಸ್ತೆಯಿಂದ ಪೀಣ್ಯ ತಲುಪುತ್ತಿದ್ದ ಮೆಟ್ರೋ ಇನ್ನು ಮುಂದೆ ನಾಗಸಂದ್ರದವರೆಗೆ ಸಂಚರಿಸಲಿದೆ. ರೈಲಲ್ಲಿ ಪ್ರಯಾಣಿಸಿದರೆ ಮಲ್ಲೇಶ್ವರಂ ನಿಂದ ನಾಗಸಂದ್ರವನ್ನು ಕೇವಲ 25 ನಿಮಿಷದಲ್ಲಿ ತಲುಪಬಹುದು.

ಫೆಬ್ರವರಿಯಲ್ಲೇ ಆರಂಭವಾಗಬೇಕಿತ್ತು

ಪೀಣ್ಯ ಕೈಗಾರಿಕಾ ನಿಲ್ದಾಣದಿಂದ ನಾಗಸಂದ್ರವರೆಗಿನ ನಮ್ಮ ಮೆಟ್ರೋ ಕಾಮಗಾರಿ ಡಿಸೆಂಬರ್‌ನಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇತ್ತು, 2015ರ ಫೆಬ್ರವರಿಗೆ ಸಂಚಾರ ಮುಕ್ತಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದರು. ಆದರೆ, ಮೇನಲ್ಲಿ ಸಂಚಾರ ಆರಂಭವಾಗಿದೆ,

10 ನಿಮಿಷಕ್ಕೆ ಒಂದು ರೈಲು

10 ನಿಮಿಷಕ್ಕೆ ಒಂದು ರೈಲು

ಮಲ್ಲೇಶ್ವರಂ ಸಂಪಿಗೆ ರಸ್ತೆಯ ನಿಲ್ದಾಣದಿಂದ ಹೊರಡುವ ಎಲ್ಲಾ ಮೆಟ್ರೋ ರೈಲುಗಳು ನಾಗಸಂದ್ರವರೆಗೆ ಸಂಚರಿಸಲಿವೆ. ಬೆಳಗ್ಗೆ 6 ಗಂಟೆಯಿಂದ ರಾತ್ರಿ 10ರವರೆಗೆ ಪ್ರತಿ ಹತ್ತು ನಿಮಿಷಕ್ಕೊಂದು ರೈಲು ಈ ಮಾರ್ಗದಲ್ಲಿ ಸಂಚಾರ ನಡೆಸಲಿದೆ. ಈ ಮಾರ್ಗದಲ್ಲಿ ಗರಿಷ್ಠ 23 ರೂ., ಕನಿಷ್ಠ 10 ರೂ. ಪ್ರಯಾಣದರವಿದೆ.

ಪ್ರಯಾಣದರವನ್ನು ನಿಗದಿ ಮಾಡಲಾಗಿದೆ.

ಪ್ರಯಾಣದರವನ್ನು ನಿಗದಿ ಮಾಡಲಾಗಿದೆ.

ನಾಗಸಂದ್ರ- ದಾಸರಹಳ್ಳಿ 10 ರೂ.
ನಾಗಸಂದ್ರ- ಜಾಲಹಳ್ಳಿ 13 ರೂ.
ನಾಗಸಂದ್ರ- ಪೀಣ್ಯ ಇಂಡಸ್ಟ್ರಿ 14 ರೂ.
ಸಂಪಿಗೆ ರಸ್ತೆ- ಪೀಣ್ಯ ಇಂಡಸ್ಟ್ರಿ 23 ರೂ.

English summary
After a delay of over one year, the much-awaited Reach 3B of Namma Metro finally opened on May 1. It is an extension of Reach 3 and 3A between Sampige and Peenya Industry. It have three new stations including Jalahalli, Dasarahalli and Nagasandra.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X