ನಮ್ಮ ಮೆಟ್ರೋ 2ನೇ ಹಂತಕ್ಕೆ ಭೂ ಸ್ವಾಧೀನ ಆರಂಭ

Subscribe to Oneindia Kannada

ಬೆಂಗಳೂರು, ಮಾರ್ಚ್ 04 : ಎರಡನೇ ಹಂತದ ನಮ್ಮ ಮೆಟ್ರೋ ಯೋಜನೆ ಕಾಮಗಾರಿ ಆರಂಭಿಸಲು ಬಿಎಂಆರ್‌ಸಿಎಲ್ ಸಿದ್ಧತೆ ನಡೆಸುತ್ತಿದೆ. ಬೈಯಪ್ಪನಹಳ್ಳಿ-ವೈಟ್ ಫೀಲ್ಡ್‌ ನಡುವಿನ ಮಾರ್ಗದಲ್ಲಿ ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳಲು ಅಧಿಸೂಚನೆ ಹೊರಡಿಸಿದೆ.

61 ನಿಲ್ದಾಣಗಳನ್ನು ಒಳಗೊಂಡಿರುವ 72 ಕಿ.ಮೀ ಉದ್ದದ ನಮ್ಮ ಮೆಟ್ರೋ 2ನೇ ಹಂತದ ಯೋಜನೆಗೆ ಕೇಂದ್ರದ ಸಾರ್ವಜನಿಕ ಹೂಡಿಕೆ ಮಂಡಳಿ (ಪಿಐಬಿ) ಈಗಾಗಲೇ ಒಪ್ಪಿಗೆ ನೀಡಿದೆ. ಬೈಯಪ್ಪನಹಳ್ಳಿ- ವೈಟ್‌ಫೀಲ್ಡ್‌ ನಡುವಿನ 15.50 ಕಿ.ಮೀ. ಮಾರ್ಗವೂ ಎರಡನೇ ಹಂತದಲ್ಲಿ ಸೇರಿದೆ. [ಆಸ್ತಿದಾರರಿಗೆ ಆತಂಕ ತಂದ ಮೆಟ್ರೋ]

namma metro

15 ಕಿ.ಮೀ.ಮಾರ್ಗದಲ್ಲಿ ಮಹದೇವಪುರ-ಬೈಯಪ್ಪನಹಳ್ಳಿ ನಡುವಿನ 64 ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳಲು ಬಿಎಂಆರ್‌ಸಿಎಲ್ ಅಧಿಸೂಚನೆ ಹೊಡಿಸಿದೆ. ಆಸ್ತಿ ಸ್ವಾಧೀನಕ್ಕೆ ಪಡೆದುಕೊಳ್ಳಲಿರುವ ಬಿಎಂಆರ್‌ಸಿಎಲ್ ಅದರ ಮೌಲ್ಯದ ವರದಿಯನ್ನು ಕೆಐಎಡಿಬಿಗೆ ಸಲ್ಲಿಸಲಿದ್ದು, ಅದು ಪರಿಹಾರವನ್ನು ಹಂಚಿಕೆ ಮಾಡಲಿದೆ. [ಮೆಟ್ರೋ ಎರಡನೇ ಹಂತಕ್ಕೆ ಒಪ್ಪಿಗೆ ಸಿಕ್ತು]

ನಮ್ಮ ಮೆಟ್ರೋ 2ನೇ ಹಂತದ ಯೋಜನೆಯಲ್ಲಿ ಮೊದಲನೇ ಹಂತದ ಯೋಜನೆಯನ್ನು ವಿಸ್ತರಣೆ ಮಾಡಲಾಗುತ್ತದೆ. ಆರ್.ವಿ. ರಸ್ತೆ- ಬೊಮ್ಮಸಂದ ( 18.82 ಕಿ.ಮೀ.) ಗೊಟ್ಟಿಗೆರೆ-ಐಐಎಂಬಿ-ನಾಗವಾರ (21.85 ಕಿ.ಮೀ.) ಬೈಯಪ್ಪನಹಳ್ಳಿ- ವೈಟ್‌ಫೀಲ್ಡ್‌ (15.50 ಕಿ.ಮೀ.) ಮೈಸೂರು ರಸ್ತೆ ಟರ್ಮಿನಲ್‌- ಕೆಂಗೇರಿ ( 6.45 ಕಿ.ಮೀ.) ಹೆಸರಘಟ್ಟ ಕ್ರಾಸ್‌- ಅಂತರರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರ (3.77 ಕಿ.ಮೀ.) ಮಾರ್ಗಗಳು 2ನೇ ಹಂತದಲ್ಲಿವೆ. [ಮೆಟ್ರೋಕ್ಕೆ ಶಂಕರಣ್ಣ ಹೆಸರು: ಇದು ಓದುಗರ ತೀರ್ಮಾನ]

ಬೆಂಗಳೂರಿನಲ್ಲಿ ಈಗಾಗಲೇ 42.3 ಕಿ.ಮೀ. ಮೊದಲನೇ ಹಂತದ ಮೆಟ್ರೋ ರೈಲು ಮಾರ್ಗದ ಕಾಮಗಾರಿ ನಡೆಯುತ್ತಿದೆ. ಎರಡನೇ ಹಂತದಲ್ಲಿ 72. ಕಿ.ಮೀ. ರೈಲು ಮಾರ್ಗ ನಿರ್ಮಾಣಕ್ಕೆ 26,405 ಕೋಟಿ ರೂ. ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ.

English summary
Bangalore Metro Rail Corporation Ltd (BMRCL)issued notification for acquiring properties on one segment of the Whitefield-Baiyappanahalli stretch, of Namma metro phase 2nd project. Phase II will provide train connectivity along 72 km with 61 stations.
Please Wait while comments are loading...