ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪೂರ್ವ-ಪಶ್ಚಿಮ ಕಾರಿಡಾರ್‌ನಲ್ಲಿ ಮೆಟ್ರೋ ಪ್ರಾಯೋಗಿಕ ಪರೀಕ್ಷೆ

|
Google Oneindia Kannada News

ಬೆಂಗಳೂರು, ನವೆಂಬರ್ 25 : ಪೂರ್ವ-ಪಶ್ಚಿಮ ಕಾರಿಡಾರ್‌ನ 18 ಕಿ.ಮೀ.ಮಾರ್ಗದಲ್ಲಿ ನಮ್ಮ ಮೆಟ್ರೋ ರೈಲಿನ ಪರೀಕ್ಷಾರ್ಥ ಸಂಚಾರ ನಡೆಯುತ್ತಿದೆ. ಬೈಯಪ್ಪನಹಳ್ಳಿಯಿಂದ ಮೈಸೂರು ರಸ್ತೆಯ ನಾಯಂಡಹಳ್ಳಿವರೆಗಿನ ಮಾರ್ಗವಿದಾಗಿದೆ.

ಈ ಮಾರ್ಗದಲ್ಲಿ ಹಲವು ಬಾರಿ ಹಂತ-ಹಂತವಾಗಿ ಪರೀಕ್ಷಾರ್ಥ ಸಂಚಾರ ನಡೆಸಲಾಗಿದೆ. ಆದರೆ, ನವೆಂಬರ್ 23 ರಿಂದ 28ರ ತನಕ ಬಿಎಂಆರ್‌ಸಿಎಲ್ ತಜ್ಞರ ಜೊತೆ ಸೇರಿ ಪ್ರಾಯೋಗಿಕ ಸಂಚಾರವನ್ನು ನಡೆಸುತ್ತಿದೆ. 2016ರ ಜನವರಿ ವೇಳೆಗೆ ಈ ಮಾರ್ಗವನ್ನು ಸಾರ್ವಜನಿಕರ ಸಂಚಾರಕ್ಕೆ ಮುಕ್ತಗೊಳಿಸುವ ಗುರಿಯನ್ನು ಮೆಟ್ರೋ ನಿಗಮ ಹೊಂದಿದೆ. [ಮೆಟ್ರೋ ವೇಳಾಪಟ್ಟಿ ಬದಲಾವಣೆ]

18 ಕಿ.ಮೀ.ಗಳ ಈ ಮಾರ್ಗದಲ್ಲಿ 5 ಕಿ.ಮೀ. ಸುರಂಗ ಮಾರ್ಗವಿದೆ. ಚಿನ್ನಸ್ವಾಮಿ ಕ್ರೀಡಾಂಗಣದಿಂದ ಮಾಗಡಿ ರಸ್ತೆ ತನಕ ಸುರಂಗದಲ್ಲಿ ರೈಲು ಸಂಚಾರ ನಡೆಸುತ್ತಿದೆ. ಪೂರ್ವ-ಪಶ್ಚಿಮ ಕಾರಿಡಾರ್‌ಗೆ ಬಿಎಂಆರ್‌ಸಿಎಲ್ ನೇರಳೆ ಮಾರ್ಗವೆಂದು ಹೆಸರಿಟ್ಟಿದ್ದು, ಈ ಮಾರ್ಗದಲ್ಲಿ ನೇರಳೆ ಬಣ್ಣದ ರೈಲುಗಳು ಸಂಚರಿಸುತ್ತಿವೆ. [ಮೆಟ್ರೋಕ್ಕೆ ಶಂಕರಣ್ಣ ಹೆಸರು: ಇದು ಓದುಗರ ತೀರ್ಮಾನ]

ಪೂರ್ವ-ಪಶ್ಚಿಮ ಕಾರಿಡಾರ್‌ನ ಮಾರ್ಗದಲ್ಲಿ ಈಗ ನಡೆಯುತ್ತಿರುವ ಪ್ರಾಯೋಗಿಕ ಪರೀಕ್ಷೆ ನಿರ್ಣಾಯಕವಾದದ್ದು. ಈ ಸಂಚಾರದ ವರದಿಯ ಆಧಾರದ ಮೇಲೆಯೇ ರೈಲ್ವೆ ಸುರಕ್ಷತಾ ಆಯುಕ್ತರು ಮಾರ್ಗವನ್ನು ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸಲು ಒಪ್ಪಿಗೆ ನೀಡಲಿದ್ದಾರೆ. ಪ್ರಾಯೋಗಿಕ ಸಂಚಾರದ ಮಾಹಿತಿ ಚಿತ್ರಗಳಲ್ಲಿ....

ಪರೀಕ್ಷಾರ್ಥ ಸಂಚಾರ ಆರಂಭ

ಪರೀಕ್ಷಾರ್ಥ ಸಂಚಾರ ಆರಂಭ

ಪೂರ್ವ-ಪಶ್ಚಿಮ ಕಾರಿಡಾರ್‌ನ ಬೈಯಪ್ಪನಹಳ್ಳಿ-ಮೈಸೂರು ರಸ್ತೆ ಮಾರ್ಗದ ನಡುವೆ ನಮ್ಮ ಮೆಟ್ರೋ ಪರೀಕ್ಷಾರ್ಥ ಸಂಚಾರ ಆರಂಭವಾಗಿದೆ. ಒಟ್ಟು 18 ಕಿ.ಮೀ.ಉದ್ದದ ಈ ಮಾರ್ಗದಲ್ಲಿ ಸುರಂಗದಲ್ಲಿಯೂ ರೈಲು ಸಂಚರಿಸಲಿದೆ.

ಮೆಟ್ರೋಗೆ ಇದು ನಿರ್ಣಾಯಕ ಪರೀಕ್ಷೆ

ಮೆಟ್ರೋಗೆ ಇದು ನಿರ್ಣಾಯಕ ಪರೀಕ್ಷೆ

ಈ ಮಾರ್ಗದಲ್ಲಿ ಹಲವು ಬಾರಿ ಹಂತ ಹಂತವಾಗಿ ಪರೀಕ್ಷಾರ್ಥ ಸಂಚಾರ ನಡೆಸಲಾಗಿದೆ. ಆದರೆ, ಈಗ 18 ಕಿ.ಮೀ. ಮಾರ್ಗದಲ್ಲಿ ಒಟ್ಟಿಗೆ ಸಂಚಾರ ಆರಂಭಿಸಲಾಗಿದ್ದು, ಇದು ಮೆಟ್ರೋಗೆ ನಿರ್ಣಾಯಕ ಪರೀಕ್ಷೆಯಾಗಿದೆ. ಹಲವು ತಜ್ಞರು ಈ ಪರೀಕ್ಷಾರ್ಥ ಸಂಚಾರದಲ್ಲಿ ಪಾಲ್ಗೊಂಡಿದ್ದಾರೆ.

ಎರಡು ಹಂತದಲ್ಲಿ ಪರೀಕ್ಷೆ

ಎರಡು ಹಂತದಲ್ಲಿ ಪರೀಕ್ಷೆ

ಪೂರ್ವ-ಪಶ್ಚಿಮ ಕಾರಿಡಾರ್‌ನ ನೇರಳೆ ಮಾರ್ಗದಲ್ಲಿ ಎರಡು ಹಂತದಲ್ಲಿ ಬೆಳಗ್ಗೆ 6 ರಿಂದ 8 ಹಾಗೂ ರಾತ್ರಿ 8 ರಿಂದ 10 ತನಕ ಎರಡು ಹಂತದಲ್ಲಿ ನೇರಳೆ ಬಣ್ಣದ ಮೆಟ್ರೋ ರೈಲಿನ ಮೂಲಕ ಪರೀಕ್ಷೆ ನಡೆಸಲಾಗುತ್ತಿದೆ. ನವೆಂಬರ್ 28ರ ತನಕ ಈ ಪರೀಕ್ಷೆ ನಡೆಯುತ್ತದೆ.

ಯಾವ-ಯಾವ ಪರೀಕ್ಷೆಗಳು

ಯಾವ-ಯಾವ ಪರೀಕ್ಷೆಗಳು

ರೈಲುಗಳ ವೇಗ, ರೈಲು ಸಂಚಾರದ ಸಮಯದಲ್ಲಿ ಹಳಿಗಳ ಮೇಲೆ ಉಂಟಾಗುವ ಒತ್ತಡ ಮುಂತಾದ ಅಂಶಗಳ ಬಗ್ಗೆ ಪರೀಕ್ಷೆ ನಡೆಯುತ್ತಿದೆ. ಸುರಂಗದಲ್ಲಿ ಗಂಟೆಗೆ 90 ಕೀ.ಮೀ. ವೇಗದಲ್ಲಿ ರೈಲನ್ನು ಓಡಿಸುವ ಮೂಲಕ ಪರೀಕ್ಷೆ ನಡೆಸಲಾಗುತ್ತಿದೆ.

ಸುರಂಗದಲ್ಲಿ ರೈಲು ಸಂಚಾರ

ಸುರಂಗದಲ್ಲಿ ರೈಲು ಸಂಚಾರ

ಒಟ್ಟು 18 ಕಿ.ಮೀ.ಮಾರ್ಗದ ಪೈಕಿ 13 ಕಿ.ಮೀ.ಎತ್ತರಿಸಿದ ಮಾರ್ಗ ಮತ್ತು 5 ಕಿ.ಮೀ.ಸುರಂಗ ಮಾರ್ಗವಿದೆ. ಚಿನ್ನಸ್ವಾಮಿ ಕ್ರೀಡಾಂಗಣದಿಂದ ಮಾಗಡಿ ರಸ್ತೆ ತನಕ ರೈಲು ಸುರಂಗ ಮಾರ್ಗದಲ್ಲಿ ಸಂಚಾರ ನಡೆಸುತ್ತದೆ.

English summary
Bengaluru : Namma metro on November 28 begins trail run on East-West corridor of purple line between Byappanahalli to Mysore road. Trail run will continue till November 28. 2015.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X