ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜೆ.ಪಿ. ನಗರದ 'ನಮ್ಮ ಅಡ್ಡ'ದಲ್ಲಿ ಸಾವಯವ ತಿಂಡಿ ಸಿಗತ್ತೆ ಕಣ್ರೀ

|
Google Oneindia Kannada News

ಬೆಂಗಳೂರು, ಅಗಸ್ಟ್ 29: ಜೆ.ಪಿ. ನಗರದ ಎರಡನೇ ಹಂತದಲ್ಲಿ 'ನಮ್ಮ ಅಡ್ಡ' ಹೆಸರಿನ ಹೋಟೆಲ್ ಇದೆ. ರಾಸಾಯನಿಕಮುಕ್ತ ಆಹಾರವನ್ನೇ ತಯಾರಿಸ್ತೀವಿ ಎಂದ ಹಟ ತೊಟ್ಟಿರುವ ಈ ಹೋಟೆಲ್ ನವರು, ಸಾವಯವ ಉತ್ಪನ್ನಗಳಿಂದಲೇ ತಯಾರದ ತಿಂಡಿಗಳನ್ನು ಉಣಬಡಿಸುತ್ತಾರಂತೆ.

ಸಾವಯವ ತರಕಾರಿ, ಹಣ್ಣು ಹಾಗೂ ಧಾನ್ಯಗಳನ್ನು ಬಳಸಿ ರುಚಿಕಟ್ಟಾಗಿ ಶುದ್ಧ ಆಹಾರ ತಯಾರಿಸಿ ಬೆಂಗಳೂರಿಗರಿಗೆ ಉಣಬಡಿಸುವ ಉದ್ದೇಶದಿಂದ ನಮ್ಮ ಅಡ್ಡ' ರೆಸ್ಟೋರೆಂಟ್ ತೆರೆಯಲಾಗಿದೆ. ಇದರ ಪ್ರಮುಖ ಉದ್ದೇಶ ಸಾವಯವ ಕೃಷಿಯಲ್ಲಿ ತೊಡಗಿರುವವರನ್ನು ಪ್ರೋತ್ಸಾಹಿಸುವುದು, ಬೆಂಗಳೂರಿನ ನಾಗರಿಕರಿಗೆ ರಾಸಾಯನಿಕಮುಕ್ತ ಶುದ್ಧ ಹಾಗೂ ರುಚಿಕರ ಆಹಾರ ದೊರಕಿಸುವುದು ಎನ್ನುತ್ತಾರೆ 'ನಮ್ಮ ಅಡ್ಡ' ವ್ಯವಸ್ಥಾಪಕ ನಿರ್ದೇಶಕ ವಿವೇಕ್ ಎಸ್. ಪಾಟೀಲ್.[ಹೆಣ್ಮಕ್ಕಳೇ ಸೇರಿ ಬೆಂಗಳೂರಿನಲ್ಲಿ ಶುರು ಮಾಡಿದ್ದಾರೆ ಫುಡ್ ಟ್ರಕ್]

'ನಮ್ಮ ಅಡ್ಡ'ದಲ್ಲಿ ಅಕ್ಕಿ ರೊಟ್ಟಿ, ರಾಗಿರೊಟ್ಟಿ, ರವಾ ಇಡ್ಲಿ, ದೋಸಾ, ಚೌಚೌ ಬಾತ್, ನವಣೆಯಿಂದ ತಯಾರಿಸುವ ವಾಂಗಿ ಬಾತ್, ಪುಳಿಯೋಗರೆ, ಪಲಾವ್, ಬೋಂಡಾ, ನಾನಾ ರೀತಿಯ ಬಜ್ಜಿಗಳು, ಪಡ್ಡು, ಮೀಟ್ ಗ್ರಾಸ್ ಜ್ಯೂಸ್, ಜ್ಯೂಸ್ ಫಾರ್ ಫ್ಯಾಟ್, ಜ್ಯೂಸ್ ಫಾರ್ ಅಲರ್ಜಿ, ಜ್ಯೂಸ್ ಫಾರ್ ಶುಗರ್ ಇನ್ನಿತರ 15ಕ್ಕೂ ಹೆಚ್ಚು ವಿಧದ ಆರೋಗ್ಯಭರಿತ ಜ್ಯೂಸ್ ಗಳು ಲಭ್ಯವಿರುತ್ತವೆ.

ಬಿಸ್ಸಿಬಿಸ್ಸಿ ಪಡ್ಡು

ಬಿಸ್ಸಿಬಿಸ್ಸಿ ಪಡ್ಡು

ನಮ್ಮ ಅಡ್ಡದಲ್ಲಿ ಒಲೆಯ ಮೇಲೆ ಬೆಂದು ತಿನ್ನಲು ತಯಾರಾದ ಬಿಸ್ಸಿಬಿಸ್ಸಿ ಪಡ್ಡು

ಅವರಿಬ್ಬರು ಜ್ಯೂಸ್ ಕುಡೀತಿದಾರೆ..

ಅವರಿಬ್ಬರು ಜ್ಯೂಸ್ ಕುಡೀತಿದಾರೆ..

ನಮ್ಮ ಅಡ್ಡದಲ್ಲಿ ಜ್ಯೂಸ್ ಕುಡಿಯುತ್ತಿರುವ ಮರುಳಸಿದ್ದಪ್ಪ, 'ಮುಖ್ಯಮಂತ್ರಿ' ಚಂದ್ರು ಹಾಗೂ ತಿಂಡಿ ಸವಿಯುತ್ತಿರುವ ಸುಂದರರಾಜ್.

ಯಾಕಿಷ್ಟು ಆಶ್ಚರ್ಯ?

ಯಾಕಿಷ್ಟು ಆಶ್ಚರ್ಯ?

ಹೋಟೆಲ್ ಉದ್ಘಾಟನೆ ಮಾಡಿದ ನಟಿ, ವಿಧಾನಪರಿಷತ್ ಸದಸ್ಯೆ ತಾರಾ ಅವರಿಗೆ ಅದೇಕಿಷ್ಟು ಆಶ್ಚರ್ಯವೋ

ನನಗೆ ದೋಸೆ ಮಾಡೋಕೆ ಬರಲ್ವಾ?

ನನಗೆ ದೋಸೆ ಮಾಡೋಕೆ ಬರಲ್ವಾ?

ನಮ್ಮ ಅಡ್ಡ ಹೋಟೆಲ್ ಉದ್ಘಾಟಿಸಿದ ಚಿತ್ರ ನಟಿ, ವಿಧಾನಪರಿಷತ್ ಸದಸ್ಯೆ ತಾರಾ ದೋಸೆ ಮಾಡಿ, ಟ್ರಯಲ್ ನೋಡಿದರು

English summary
'Namma adda' an organic hotel inaugurated at J.P.Nagar, Bengaluru by actress Tara anuradha. Variety of foods and juices which are prepared with organic vegetables and fruits available in the hotel.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X