ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದೇಶದ ಅತಿದೊಡ್ಡ ವಿಜ್ಞಾನ ಹಬ್ಬಕ್ಕೆ ಮೈಸೂರು ಸಿದ್ಧ

By ಡಾ. ಅನಂತ ಕೃಷ್ಣನ್. ಎಂ
|
Google Oneindia Kannada News

ಮೈಸೂರು, ಡಿಸೆಂಬರ್, 10: ಸಾಂಸ್ಕೃತಿಕ ನಗರಿ ಮೈಸೂರು ವಿಜ್ಞಾನ ಹಬ್ಬಕ್ಕೆ ಸಿದ್ಧವಾಗುತ್ತಿದೆ. 'ದಿ ಇಂಡಿಯನ್ ಸೈನ್ಸ್ ಕಾಂಗ್ರೆಸ್ 'ನ 103 ನೇ ಸಮಾವೇಶ ಮೈಸೂರು ವಿಶ್ವವಿದ್ಯಾನಿಲಯದ ಆತಿಥ್ಯದಲ್ಲಿ ನಡೆಯಲಿದೆ. 2016 ರ ಜನವರಿ 3 ರಿಂದ 7ರವೆಗೆ ಸಮಾವೇಶ ನಡೆಯಲಿದೆ.

ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದಾರೆ. ಸಮಾವೇಶಕ್ಕೆ ಭರದ ತಯಾರಿ ನಡೆಯುತ್ತಿದೆ ಎಂದು ಮೈಸೂರು ವಿವಿ ವೈಸ್ ಚಾನ್ಸಲರ್ ಕೆ ಎಸ್ ರಂಗಪ್ಪ ಒನ್ ಇಂಡಿಯಾಕ್ಕೆ ತಿಳಿಸಿದರು.[ಮುಂದಿನ ವರ್ಷ ಮಂಗಳನ ಮೇಲೆ 'ರಷ್ಯಾ' ಮಂಗಗಳ ಸಂಸಾರ]

34 ವರ್ಷದ ನಂತರ ಮೈಸೂರು ಇಂಥದ್ದೊಂದು ಐತಿಹಾಸಿಕ ಸಮಾವೇಶಕ್ಕೆ ಸಿದ್ಧವಾಗುತ್ತಿದೆ. ಅಲ್ಲದೇ ವಿಶ್ವ ವಿದ್ಯಾಲಯ ಸಹ ಶತಮಾನೋತ್ಸವ ಸಂಭ್ರಮವನ್ನು ಎದುರು ನೋಡುತ್ತಿದೆ ಎಂದು ಹೇಳಿದರು. ವಿಜ್ಞಾನ ಸಮಾವೇಶದ ಅಪ್ ಡೇಟ್ಸ್ ಗಳನ್ನು ಮುಂದೆ ಪಡೆದುಕೊಳ್ಳಿ....

ಭಾರತದ ಅಭಿವೃದ್ಧಿಗೆ ವಿಜ್ಞಾನ

ಭಾರತದ ಅಭಿವೃದ್ಧಿಗೆ ವಿಜ್ಞಾನ

ಈ ವರ್ಷ ವಿಶ್ವವಿದ್ಯಾಲಯ ಭಾರತದ ಅಭಿವೃದ್ಧಿಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಎಂಬ ಆಧಾರದಲ್ಲಿ ಕೆಲಸ ಮಾಡುತ್ತಿದೆ. ಬಾಹ್ಯಾಕಾಶ ಸಂಶೋಧನೆಯಲ್ಲಿ ಭಾರತ ನಿರಂತರ ಸಾಧನೆ ಮಾಡುತ್ತಿದ್ದು ಅದಕ್ಕೆ ಪೂರಕವಾಎದ ವಿಚಾರಗಳನ್ನು ಬಿಂಬಿಸಲಾಗುತ್ತಿದೆ ಎಂದು ತಿಳಿಸಿದರು.

ಯುವ ಪ್ರತಿಭೆಗಳಿಗೆ ವೇದಿಕೆ

ಯುವ ಪ್ರತಿಭೆಗಳಿಗೆ ವೇದಿಕೆ

ವಿಶ್ವ ವಿದ್ಯಾಲಯದ ಪ್ರಾಣಿ ಶಾಸ್ತ್ರ ವಿಭಾಗದ ಪ್ರೋಫೆಸರ್ ಮತ್ತು ವಿಜ್ಞಾನ ಸಮ್ಮೇಳನದ ಕಾರ್ಯದರ್ಶಿ ಎನ್ ಬಿ ರಾಮಚಂದ್ರ ಮಾತನಾಡಿ, 8 ಸಾವಿರ ಜನ ಕಾರ್ಯಕ್ರಮದಲ್ಲಿ ಭಾಗವಹಿಸಲು ಈಗಾಗಲೇ ನೋಂದಣಿ ಮಾಡಿಕೊಂಡಿದ್ದಾರೆ. ಯುವ ವಿಜ್ಞಾನಿಗಳಿಗೆ ತಮ್ಮ ಪ್ರತಿಭಾ ಪ್ರದರ್ಶನಕ್ಕೆ ಇದೊಂದು ಉತ್ತಮ ವೇದಿಕೆ ಕಲ್ಪಿಸಿಕೊಡುವುದರಲ್ಲಿ ಅನುಮಾನವಿಲ್ಲ ಎಂದು ತಿಳಿಸಿರು.

ಕರ್ನಾಟಕಕ್ಕೆ 10ನೇ ಸಾರಿ ಸಮ್ಮೇಳನ ಆತಿಥ್ಯ ಭಾಗ್ಯ

ಕರ್ನಾಟಕಕ್ಕೆ 10ನೇ ಸಾರಿ ಸಮ್ಮೇಳನ ಆತಿಥ್ಯ ಭಾಗ್ಯ

ಮೈಸೂರು ಎರಡನೇ ಬಾರಿ ಸಮ್ಮೇಳನದ ನೇತೃತ್ವ ವಹಿಸುತ್ತಿದೆ. ಬೆಂಗಳೂರಿನಲ್ಲಿ 8 ಸಾರಿ ಸಮ್ಮೇಳನ ನಡೆದಿದೆ. 103ರ ವಿಜ್ಞಾನ ಸಮ್ಮೇಳನಕ್ಕೆ ಚೇತನ ಅಬ್ದುಲ್ ಕಲಾಂ ಅವರನ್ನು ಕಳೆದುಕೊಂಡಿದ್ದೇವೆ. ಆದರೆ ಅವರ ಅಭಿವ್ಯಕ್ತಿ ಸಮ್ಮೇಳನದ ಉದ್ದಕ್ಕೂ ಇರಲಿದೆ ಎಂದು ರಾಮಚಂದ್ರ ಹೇಳಿದರು.

ಭಾರತದ ಇತಿಹಾಸದಲ್ಲಿ ದಾಖಲು

ಭಾರತದ ಇತಿಹಾಸದಲ್ಲಿ ದಾಖಲು

103ನೇ ವಿಜ್ಞಾನ ಸಮ್ಮೇಳನಕ್ಕೆ ಸಕಲ ಸಿದ್ಧತೆಗಳು ಮಾನಸ ಗಂಗೋತ್ರಿ ಆವರಣದಲ್ಲಿ ನಡೆಯುತ್ತಿದ್ದು ಭಾರತದ ಇತಿಹಾಸದಲ್ಲಿ ಮತ್ತೊಂದು ವೈಜ್ಞಾನಿಕ ಚಿಂತನೆಯ ಘಟನೆ ದಾಖಲಾಗಲಿದೆ.

English summary
The City of Palaces - Mysuru - is slowly but steadily warming up to the historic 103rd Indian Science Congress (103ISC) to be held here from January 3-7. University of Mysuru (UOM), which is celebrating its centenary year, is hosting 103ISC in association with the Indian Science Congress Association, Kolkata.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X