ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಸರಾಕ್ಕೆ ಗೋಲ್ಡನ್ ಚಾರಿಯಟ್ ಸಂಚಾರ, ದರ ಪಟ್ಟಿ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 07 : ಈ ಬಾರಿಯ ಮೈಸೂರು ದಸರಾಕ್ಕೆ ಪ್ರವಾಸಿಗರು ದೇಶದ ಐಷಾರಾಮಿ ರೈಲು 'ಮಹಾರಾಜಾ ಗೋಲ್ಡನ್ ಚಾರಿಯಟ್' ಮೂಲಕ ಹೋಗಬಹುದು. ಅಕ್ಟೋಬರ್ 1 ರಿಂದ 10ರ ತನಕ ಗೋಲ್ಡನ್ ಚಾರಿಯಟ್ ರೈಲು ಬೆಂಗಳೂರು-ಮೈಸೂರು ನಡುವೆ ಸಂಚಾರ ನಡೆಸಲಿದೆ.

ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಕೆಎಸ್‌ಟಿಡಿಸಿ) ಮತ್ತು ಭಾರತೀಯ ರೈಲ್ವೆ ದಸರಾ ಸಂದರ್ಭದಲ್ಲಿ ಬೆಂಗಳೂರು-ಮೈಸೂರು ನಡುವೆ ಗೋಲ್ಡನ್ ಚಾರಿಯಟ್ ರೈಲು ಸಂಚಾರ ನಡೆಸಲು ಒಪ್ಪಂದ ಮಾಡಿಕೊಂಡಿವೆ. ಪ್ರಯಾಣ ದರ 30 ಸಾವಿರ ರೂ.ಗಳು.[ದಸರಾಕ್ಕೆ ಗೋಲ್ಡನ್ ಚಾರಿಯಟ್ ಸಂಚಾರ]

Mysuru Dasara 2016 : Tourists can travel in Golden Chariot

ದಸರಾ ವಿಶೇಷ ಪ್ಯಾಕೇಜ್‌ ಅನ್ನು ರೈಲ್ವೆ ಸಿದ್ಧಪಡಿಸಿದ್ದು, ಎರಡು ರಾತ್ರಿ ಮತ್ತು ಒಂದು ದಿನದ ಸಂಚಾರಕ್ಕೆ ಪ್ರತಿಯೊಬ್ಬರಿಗೆ 30 ಸಾವಿರ ದರ ನಿಗದಿ ಮಾಡಲಾಗಿದೆ. 2008ರಲ್ಲಿ ರೈಲು ಸಂಚಾರ ಆರಂಭವಾದ ಬಳಿಕ ಇದೇ ಮೊದಲ ಬಾರಿಗೆ ಗೋಲ್ಡನ್ ಚಾರಿಯಟ್‌ನಲ್ಲಿ ವಿಶೇಷ ಪ್ಯಾಕೇಜ್ ಆರಂಭಿಸಲಾಗುತ್ತಿದೆ.[ದಸರಾ ಆನೆಗಳ ಪೈಕಿ ಅರ್ಜುನನೇ ಬಲಶಾಲಿ!]

44 ಐಷಾರಾಮಿ ಕ್ಯಾಬಿನ್‌ಗಳನ್ನು ಹೊಂದಿರುವ ರೈಲಿನಲ್ಲಿ 88 ಜನರು ಪ್ರಯಾಣ ಮಾಡಬಹುದಾಗಿದೆ. ಅಕ್ಟೋಬರ್ 1 ರಂದು ಬೆಂಗಳೂರಿನ ಯಶವಂತಪುರ ರೈಲು ನಿಲ್ದಾಣದಿಂದ ಗೋಲ್ಡನ್ ಚಾರಿಯಟ್ ಮೊದಲು ಸಂಚಾರ ಆರಂಭಿಸಲಿದೆ. ಅಕ್ಟೋಬರ್ 3, 5, 7 ಮತ್ತು 9ರಂದು ಈ ರೈಲು ಬೆಂಗಳೂರು-ಮೈಸೂರು ನಡುವೆ ಸಂಚರಿಸಲಿದೆ.

ಗೋಲ್ಡನ್ ಚಾರಿಯಟ್‌ನಲ್ಲಿ ಮೈಸೂರಿಗೆ ತೆರಳುವ ಪ್ರಯಾಣಿಕರು ದಸರಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೋಡಲು ಅವಕಾಶ ನೀಡಲಾಗುತ್ತದೆ ಮತ್ತು ಶ್ರೀರಂಗಪಟ್ಟಣದ ಪ್ರವಾಸಕ್ಕೆ ಕರೆದುಕೊಂಡು ಹೋಗಲಾಗುತ್ತದೆ. ರೈಲು ಸಂಚಾರಕ್ಕೆ ಈಗಾಗಲೇ ಮುಂಗಡ ಟಿಕೆಟ್ ಬುಕ್ಕಿಂಗ್ ಆರಂಭಿಸಲಾಗದೆ. [ಮುಂಗಡ ಟಿಕೆಟ್ ಬುಕ್ ಮಾಡಲು ವಿಳಾಸ]

English summary
Tourists can travel from Bengaluru to Mysuru for Dasara 2016 in Golden Chariot for Rs. 30,000 per person. KSTDC which operates the train in collaboration with Indian Railways, has announced a special tour package from October 1 to 10, 2016.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X