ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜೈಲಿನ ಹೆಬ್ಬಾಗಿಲಿನಿಂದಲೇ ಖೈದಿ ಎಸ್ಕೇಪ್

|
Google Oneindia Kannada News

ಬೆಂಗಳೂರು, ಏ. 12 : ಸೈಕೋ ಜೈಶಂಕರ್ ಗೋಡೆ ಏರಿ ಪರಪ್ಪನ ಅಗ್ರಹಾರ ತಪ್ಪಿಸಿಕೊಂಡಿದ್ದರೆ ಇಲ್ಲೊಬ್ಬ ಚಾಣಾಕ್ಷ ಪೊಲೀಸರ ಎದುರೇ ರಾಜಾರೋಷವಾಗಿ ಜೈಲಿನಿಂದ ಹೆಬ್ಬಾಗಿಲ ಮೂಲಕವೇ ಪರಾರಿಯಾಗಿದ್ದಾನೆ!

ಜೈಲಿನಿಂದ ಪರಾರಿಯಾದ ಕೈದಿಯನ್ನು ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಚಿತ್ರದುರ್ಗ ಜಿಲ್ಲೆಯ ಮಂಜುನಾಥ (33) ಎಂದು ಗುರುತಿಸಲಾಗಿದೆ. ಶುಕ್ರವಾರ ಸಂಜೆ ಸಂದರ್ಶಕರಿಗೆ ಕೊಡುವ ಗೇಟ್‌ಪಾಸ್‌ಅನ್ನು ಬಳಸಿಕೊಂಡು ಮುಂಜುನಾಥ ಪರಾರಿಯಾಗಿದ್ದು ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.[ಸೈಕೋ ಜೈಶಂಕರ್ ಸೆರೆಸಿಕ್ಕಿದ್ದು ಹೇಗೆ?]

jail

ಶುಕ್ರವಾರ ಸಂಜೆ ಕೈದಿಗಳ ಮಾಹಿತಿ ಕಲೆಹಾಕುವಾಗ ಮಂಜುನಾಥ ತಪ್ಪಿಸಿಕೊಂಡಿರುವುದು ಗೊತ್ತಾಗಿದೆ. ತಕ್ಷಣ ಹಿರಿಯ ಅಧಿಕಾರಿಗಳಿಗೆ ಮಾಹಿತಿ ರವಾನಿಸಲಾಗಿದೆ. ಇತರ ಸಂದರ್ಶಕರಂತೆ ಮಂಜುನಾಥ ಜೈಲಿನಿಂದ ಹೊರ ಹೋಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಮಾಹಿತಿ ಕಲೆಹಾಕಲಾಗಿದೆ.

ಪರಾರಿಯಾಗಿದ್ದು ಹೇಗೆ?
ಕೈದಿ ಮಂಜುನಾಥನಿಗೆ ಜೈಲಿನ ಸಿಬ್ಬಂದಿಗಳೇ ಸಹಕಾರ ನೀಡಿರಬಹುದೇ? ಆತನಿಗೆ ಪಾಸ್ ಸಿಕ್ಕಿದಾದರೂ ಹೇಗೆ? ಸಾಮಾನ್ಯ ಉಡುಪುಗಳು ಆತನಿಗೆ ಎಲ್ಲಿಂದ ಬಂದವು? ಎಂಬ ಅನೇಕ ಪ್ರಶ್ನೆಗಳು ಇದೀಗ ಉದ್ಭವವಾಗಿದೆ.

ಸಂಜೆ 4.30ಕ್ಕೆ ಬ್ಯಾರಕ್‌ಗಳಿಂದ ಕೈದಿಗಳನ್ನು ಜೈಲು ಆವರಣಕ್ಕೆ ಬಿಡಲಾಗಿತ್ತು. ಆಗ ಇಸ್ತ್ರಿ ವಿಭಾಗಕ್ಕೆ ತೆರಳಿರುವ ಮಂಜುನಾಥ್, ಜೈಲು ಸಮವಸ್ತ್ರ ಕಳಚಿ ಬಣ್ಣದ ಪ್ಯಾಂಟು-ಶರ್ಟ್‌ ಧರಿಸಿಕೊಂಡಿದ್ದಾನೆ. ಅಲ್ಲಿಂದ ಆಡಳಿತ ಕಚೇರಿಗೆ ತೆರಳಿದ ಆತ, ಕೈದಿಗಳ ಭೇಟಿಗೆ ಬರುವ ಸಂದರ್ಶಕರ ಗುರುತಿಗೆ ಕೈ ಮೇಲೆ ಹಾಕುವ ಮುದ್ರೆಯನ್ನು ತನ್ನ ಎಡಗೈ ಮೇಲೆ ಒತ್ತಿಕೊಂಡಿದ್ದಾನೆ.[ಸೈಕೋ ಶಂಕರ್ ಯಾರು]

ನಂತರ ಮುಖ್ಯಪ್ರವೇಶ ದ್ವಾರದ ಮೂಲಕ ಹೊರ ನಡೆಯುತ್ತಿದ್ದ ಆತನನ್ನು, ಸಿಬ್ಬಂದಿ ತಡೆದಾಗ ಆಗ, 'ಪೆರೋಲ್ ಅವಧಿ ಪೂರ್ಣಗೊಳ್ಳಲು ಒಂದು ವಾರ ಬಾಕಿ ಇತ್ತು. ಹೀಗಾಗಿ ಪೆರೋಲ್ ವಿಸ್ತರಿಸುವಂತೆ ಅರ್ಜಿ ಸಲ್ಲಿಸಲು ಮಧ್ಯಾಹ್ನ ಜೈಲಿಗೆ ಬಂದಿದ್ದೆ. ನೀವೇ ಕೈ-ಮೇಲೆ ಸೀಲು ಹಾಕಿ ಒಳಗೆ ಬಿಟ್ಟಿದ್ದಿರಿ' ಎಂದಿದ್ದಾನೆ. ಇದನ್ನು ನಂಬಿದ ಸಿಬ್ಬಂದಿ, ಆತನನ್ನು ಹೊರಹೋಗಲು ಬಿಟ್ಟಿದ್ದಾರೆ.

2013ರ ಸೆಪ್ಟಂಬರ್‌ನಲ್ಲಿ ಘೋಷಿತ ರೇಪ್‌ ಅಪರಾಧಿ ಜೈಶಂಕರ್‌ ಪರಪ್ಪನ ಅಗ್ರಹಾರದ ಎತ್ತರದ ಗೋಡೆ ಏರಿ ಅಲ್ಲಿಂದ ಹೊರಗೆ ಹಾರಿ ಪರಾರಿಯಾಗಿದ್ದ. ಆದರೆ ಕೆಲವೇ ದಿನಗಳಲ್ಲಿ ಆತನನ್ನು ಪೊಲೀಸರು ಹುಡುಕಿ ಬಂಧಿಸುವಲ್ಲಿ ಸಫ‌ಲರಾಗಿದ್ದರು.

English summary
Manjunath, a 3o-year old murder convict serving a life term, escaped from the central prison posing as a visitor to the facility at Parappana Agrahara in Bangalore on Friday evening. He hails from Gulayanahatti in Karnataka's Chitrdurga district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X