ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಮ್ಮ ಮೆಟ್ರೋ ಗ್ರೀನ್ ಲೈನ್ ಸಂಚಾರ ಮತ್ತೆರಡು ವಾರ ವಿಳಂಬ!

ರೈಲ್ವೇ ಭದ್ರತಾ ಆಯುಕ್ತರ ಪ್ರಮಾಣ ಪತ್ರ ಜೂನ್ ಎರಡನೇ ವಾರದಲ್ಲಿ ಸಿಗಲಿರುವುದರಿಂದ ಮೆಟ್ರೋ ಸಂಚಾರ ಇನ್ನೆರಡು ವಾರ ವಿಳಂಬಗೊಳ್ಳಲಿದೆ ಎಂದು ಬಿಎಂಆರ್ ಸಿಎಲ್ ಹೇಳಿದೆ.

By ಒನ್ ಇಂಡಿಯಾ ಪ್ರತಿನಿಧಿ
|
Google Oneindia Kannada News

ಬೆಂಗಳೂರು, ಮೇ 31: ಬೆಂಗಳೂರಿಗರ ಸಹನೆಯ ಪರೀಕ್ಷೆ ಮಾಡುತ್ತಿರುವ 'ನಮ್ಮ ಮೆಟ್ರೊ' ಯೋಜನೆಯ ಮೊದಲ ಹಂತ ಅಂತಿಮಗೊಂಡಿದ್ದೀಗ ಹಳೇ ಸುದ್ದಿ. ಎಲ್ಲವೂ ಅಂದುಕೊಂಡಂತೇ ಆಗಿದ್ದರೆ ಜೂನ್ 1 ರಿಂದ ನಾಗಸಂದ್ರದಿಂದ ಯಲಚೇನಹಳ್ಳಿಯವರೆಗಿನ 24.2 ಕಿ.ಮೀ. ಮೆಟ್ರೋ ಮಾರ್ಗದಲ್ಲಿ ರೈಲು ಸಂಚಾರ ಆರಂಭವಾಗಬೇಕಿತ್ತು.

ಆದರೆ ರೈಲ್ವೇ ಭದ್ರತಾ ಆಯುಕ್ತರ ಪ್ರಮಾಣ ಪತ್ರ ಜೂನ್ ಎರಡನೇ ವಾರದಲ್ಲಿ ಸಿಗಲಿರುವುದರಿಂದ ಈ ಭಾಗದ ಮೆಟ್ರೋ ಸಂಚಾರ ಇನ್ನೆರಡು ವಾರ ವಿಳಂಬಗೊಳ್ಳಲಿದೆ ಎಂದು ಬೆಂಗಳೂರು ಮೆಟ್ರೋ ರೈಲ್ವೆ ಕಾರ್ಪೊರೇಶನ್ ಲಿಮಿಟೆಡ್ (ಬಿಎಂಆರ್ ಸಿಎಲ್) ಹೇಳಿದೆ.[ಗಮನಿಸಿ ಈ ಮಾರ್ಗದಲ್ಲಿ ಮೇ 29ರಿಂದ 31ರವರೆಗೆ ಮೆಟ್ರೊ ರೈಲು ಸಂಚಾರ ಇಲ್ಲ]

Most awaited Namma metro project of Bengaluru will be delayed again

ಅಲ್ಲದೆ, ಈ ಮಾರ್ಗದಲ್ಲಿ ಇಂದು (ಮೇ 31) ರಂದು ಹೈ ಸ್ಪೀಡ್ ಟ್ರೇನ್ ಪರೀಕ್ಷೆ ಕೂಡ ನಡೆಯಲಿದೆ. ನ್ಯಾಶನಲ್ ಕಾಲೇಜು-ಯಲಚೇನಹಳ್ಳಿ, ಸಂಪಿಗೆ ರಸ್ತೆ-ಕೆ.ಆರ್.ರಸ್ತೆ ಮಾರ್ಗದ ಪರಿಶೀಲನೆ ಈಗಾಗಲೇ ಮುಗಿದಿದ್ದು, ರೈಲ್ವೆ ಭದ್ರತಾ ಆಯುಕ್ತರ ಗ್ರೀನ್ ಸಿಗ್ನಲ್ ಗಾಗಿ, ಗ್ರೀನ್ ಲೈನ್ ಮೆಟ್ರೋ ಉಪಯೋಗ ಪಡೆಯಲಿರುವ 3 ರಿಂದ 5 ಲಕ್ಷ ಜನರು ಕಾತರದಿಂದ ಕಾಯುತ್ತಿದ್ದಾರೆ.

English summary
Most awaited Namma metro project of Bengaluru will be delayed again! It may take two weeks to get certificate from Metro railway security commissioner, BMRCL sources said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X