ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಳೆಗೆ ಬೆಚ್ಚಿದ ಬೆಂಗಳೂರಿಗರಿಗೆ ಬೆಸ್ಕಾಂ ಸಹಾಯವಾಣಿಗಳು!

ಮುಂಗಾರು ಮಳೆಗೆ ಬೆಚ್ಚಿ ಬೀಳುತ್ತಿರುವ 'ಗಾರ್ಡನ್ ಸಿಟಿ' ಬೆಂಗಳೂರಿನಲ್ಲಿ ಮಳೆ ಜತೆಗೆ ಪವರ್ ಕಟ್ ಸಮಸ್ಯೆ ತಲೆದೋರುವುದು ಸಾಮಾನ್ಯ ಸಂಗತಿ. ಆದರೆ, ಈ ಬಾರಿ ಬೆಸ್ಕಾಂ ಸಹಾಯವಾಣಿಗೆ ಮಿತಿ ಮೀರಿ ದೂರುಗಳು ಬಂದಿವೆ.

By Mahesh
|
Google Oneindia Kannada News

ಬೆಂಗಳೂರು, ಮೇ 27: ಮುಂಗಾರು ಮಳೆಗೆ ಬೆಚ್ಚಿ ಬೀಳುತ್ತಿರುವ 'ಗಾರ್ಡನ್ ಸಿಟಿ' ಬೆಂಗಳೂರಿನಲ್ಲಿ ಮಳೆ ಜತೆಗೆ ಪವರ್ ಕಟ್ ಸಮಸ್ಯೆ ತಲೆದೋರುವುದು ಸಾಮಾನ್ಯ ಸಂಗತಿ. ಆದರೆ, ಈ ಬಾರಿ ಬೆಂಗಳೂರು ವಿದ್ಯುತ್ಛಕ್ತಿ ಸರಬರಾಜು ಸಂಸ್ಥೆ(ಬೆಸ್ಕಾಂ) ಯ ಸಹಾಯವಾಣಿಗೆ ಮಿತಿ ಮೀರಿ ಕರೆಗಳು ಬಂದಿವೆ. ಈ ನಿಟ್ಟಿನಲ್ಲಿ ಸಹಾಯವಾಣಿಗಳ ಸಂಖ್ಯೆಯನ್ನು ಹೆಚ್ಚಳ ಮಾಡುವುದಾಗಿ ಇಂಧನ ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ.

ಮರದ ಕೊಂಬೆ ಬಿದ್ದು ಪವರ್ ಕಟ್ ಸಮಸ್ಯೆಯಾಗುವುದನ್ನು ಪರಿಹರಿಸಲು ಬೆಂಗಳೂರಿನ ದಕ್ಷಿಣ ಹಾಗೂ ಪೂರ್ವ ಭಾಗದಲ್ಲಿ ತಂಡಗಳನ್ನು ರಚಿಸಲಾಗಿದೆ. ಖಾಸಗಿ ಸಂಸ್ಥೆ ಸಹಭಾಗಿತ್ವ ಇದಕ್ಕಿದೆ. ಮರದ ಕೊಂಬೆಯೊಂದು ಬಿದ್ದರೆ, ಆ ರಸ್ತೆಯ ಎಲ್ಲಾ ಕೊಂಬೆಗಳಿಗೆ ಕತ್ತರಿ ಬೀಳುತ್ತದೆ.

Monsoon alert : BESCOM to introduce more helpline numbers

ಬೆಸ್ಕಾಂ, ಬಿಬಿಎಂಪಿ ಸಹಯೋಗದಿಂದ ಮರ ಹನನ ಕಾರ್ಯ ನಿರಂತರವಾಗಿ ಸಾಗಿದೆ. 'ನಾಲ್ಕು ಹನಿ ಬಿದ್ದರೆ ಸಾಕು, ಪವರ್ ಕಟ್ ಮಾಮೂಲಿ' ಎಂಬ ಡೈಲಾಗ್ ಕೇಳಿ ಬರುತ್ತದೆ ಇದಕ್ಕೆ ಮೂಲ ಸೌಕರ್ಯ, ಸಿಬ್ಬಂದಿ ಕೊರತೆ ಇದೆ ಎಂದು ಬೆಸ್ಕಾಂ ಎಂಡಿ ರಾಜೇಂದ್ರ್ ಕುಮಾರ್ ಚೋಳನ್ ಹೇಳುತ್ತಾರೆ.

ಬೆಸ್ಕಾಂ ಸಹಾಯವಾಣಿ ಕೇಂದ್ರಕ್ಕೆ ಸರಿ ಸುಮಾರು 20 ಸಾವಿರಕ್ಕೂ ಅಧಿಕ ಕರೆಗಳು ಬಂದಿರುವ ಮಾಹಿತಿ ಇದೆ. ದಿನವೊಂದಕ್ಕೆ ವಿವಿಧ ಬಡಾವಣೆಗಳಿಂದ ಕುಂದು ಕೊರತೆಗಳ ಕರೆಗಳು 6000ಕ್ಕೂ ಅಧಿಕ ಬರುತ್ತಿವೆ. ಸರಿ ಸುಮಾರು 12 ಸಾವಿರ ಸಮಸ್ಯೆಗಳನ್ನು ಬಗೆಹರಿಸಲಾಗಿದೆ

ಬಿಬಿಎಂಪಿ, ಬಿಡಬ್ಲ್ಯೂಎಸ್ಎಸ್ ಬಿ, ಬೆಂಗಳೂರು ಟ್ರಾಫಿಕ್ ಪೊಲೀಸ್, ಬೆಸ್ಕಾಂ, ಬಿಎಂಟಿಸಿ ಸಂಸ್ಥೆಗಳ ಜೊತೆಗೆ ನಾಗರಿಕರು ಕೂಡಾ ಕೈಜೋಡಿಸುವ ಅಗತ್ಯವಿದೆ. ಮುಖ್ಯವಾಗಿ ದಿನನಿತ್ಯ ಹೆಚ್ಚು ಟ್ರಾಫಿಕ್ ಸಮಸ್ಯೆ ಅನುಭವಿಸುತ್ತಿರುವ ವೈಟ್ ಫೀಲ್ಡ್, ಎಲೆಕ್ಟ್ರಾನಿಕ್ ಸಿಟಿ ಕಡೆ ಹೋಗುವ ಉದ್ಯೋಗಿಗಳು ನೆರವಾಗಬೇಕಿದೆ.

* 12 ಹೊಸ ಮೊಬೈಲ್ ಸಹಾಯವಾಣಿ ವಿಸ್ತರಣೆ
* 1912 ಹಾಲಿ 30 ಲೈನ್ ಗಳಿಗೆ ಹೆಚ್ಚುವರಿ 15 ಲೈನ್ ಸೇರ್ಪಡೆ

* ಫೇಸ್ ಬುಕ್ ಲಿಂಕ್:

* ಟ್ವಿಟ್ಟರ್:
* ವಾಟ್ಸಾಪ್: 9449844640
* ಸಹಾಯವಾಣಿ: 1912
* ಎಸ್ಎಂ ಎಸ್ : 58888

* ಪೂರ್ವ ವಲಯ: 94808 16108/09/10
* ಪಶ್ಚಿಮ ವಲಯ: 94808 16111/12/13
* ಉತ್ತರ ವಲಯ: 94808 16114/15/16
* ದಕ್ಷಿಣ ವಲಯ: 94808 16117/18/19
* ಸಂಪರ್ಕ ವಿವರಗಳು: ಎಲ್ಲಾ ಸಂಪರ್ಕ ಸಂಖ್ಯೆಗಳು ಈ ಪುಟದಲ್ಲಿ ಸಿಗಲಿವೆ.

English summary
Karnataka Energy Minister DK Shivkumar said that 12 mobile helpline numbers would be introduced from Saturday in all the four divisions in the city. Over the next two months, 15 additional lines will be introduced to the 1912 helpline number, which presently has 30 lines, the minister added.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X