ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಮಹಿಳೆಯಾಗಿದ್ದರೂ ಕೂಡಾ...'ಮೋದಿ ಹೇಳಿಕೆಗೆ ತಿರುಗೇಟು

By Mahesh
|
Google Oneindia Kannada News

ನವದೆಹಲಿ, ಜೂ.08: ಚೀನಾ, ಕೊರಿಯಾ ಪ್ರವಾಸದ ವೇಳೆ ಪ್ರಧಾನಿ ಮೋದಿ ಅವರ ಭಾಷಣದಲ್ಲಿ ಉಂಟಾದ ವಾಕ್ಯ ದೋಷ ಬಿರುಗಾಳಿ ಎಬ್ಬಿಸಿದ್ದು ನಿಮಗೆಲ್ಲ ನೆನಪಿರಬಹುದು.

ಈಗ ಬಾಂಗ್ಲಾದೇಶ ಪ್ರವಾಸದ ವೇಳೆ ಕೂಡಾ ಮೋದಿ ಅವರ ಹೇಳಿಕೆ ಈಗ ವಿವಾದ ಎಬ್ಬಿಸಿದೆ. ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಅವರನ್ನು ಹೊಗಳುವ ಭರದಲ್ಲಿ ಪ್ರಧಾನಿ ಮೋದಿ ಬಳಸಿದ ಪದಗಳು ಈಗ ಸಾಮಾಜಿಕ ಜಾಲ ತಾಣಗಳಲ್ಲಿ ಚರ್ಚೆಗೆ ಆಹಾರವಾಗಿದೆ.

ಎರಡು ದಿನಗಳ ಬಾಂಗ್ಲಾದೇಶ ಪ್ರವಾಸದ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಸೆಲ್ಫಿ ಚಿತ್ರಗಳನ್ನು ತೆಗೆದುಕೊಳ್ಳಲಿಲ್ಲ. ಪ್ರವಾಸದ ಅಂತ್ಯದಲ್ಲಿ ಮಾತ್ರ ಎನ್ನಾರೈಗಳ ಜೊತೆ ಸಮಾಲೋಚನೆ ನಡೆಸಿದರು. ದೇಗುಲ, ರಾಮಕೃಷ್ಣ ಮಿಷನ್ ಭೇಟಿ ನಿಗದಿಯಂತೆ ಜರುಗಿತು. ನಿರೀಕ್ಷೆಯಂತೆ ಹತ್ತು ಹಲವು ಒಪ್ಪಂದಗಳಿಗೆ ಅಂಕಿತ ಬಿದ್ದಿದೆ. [ಮೋದಿ ಅವರ ಬಾಂಗ್ಲಾ ಪ್ರವಾಸದ ಪ್ರಮುಖ ಕ್ಷಣಗಳು]

ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಅವರು ಭಯೋತ್ಪಾದನೆ ವಿರುದ್ಧ ತೆಗೆದುಕೊಂಡಿರುವ ನಿರ್ಣಯಗಳ ಬಗ್ಗೆ ಮೆಚ್ಚುಗೆ ಸೂಸಿದ ಮೋದಿ ಅವರು 'despite being a woman' ಅವರ ಹೋರಾಟ ಶ್ಲಾಘನೀಯ ಎಂದಿದ್ದರು.

ಢಾಕಾ ವಿಶ್ವವಿದ್ಯಾಲಯದಲ್ಲಿ ಮೋದಿ ಭಾಷಣದ ನಂತರ ಸಾಮಾಜಿಕ ಜಾಲ ತಾಣಗಳಲ್ಲಿ #DespiteBeingAWoman ಎಂಬ ಹ್ಯಾಶ್ ಟ್ಯಾಗ್ ನೊಂದಿಗೆ ಚರ್ಚೆ ಆರಂಭವಾಯಿತು. ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ನಲ್ಲಿ ಬಂದ ಕೆಲ ಟ್ವೀಟ್ಸ್ ಸಂಗ್ರಹ ಇಲ್ಲಿದೆ ಓದಿ...

ಮೋದಿ ಭಾಷಣದಲ್ಲಿ ಹೇಳಿದ್ದೇನು?

ಮೋದಿ ಭಾಷಣದಲ್ಲಿ ಹೇಳಿದ್ದೇನು?

"We know solution for everything, but not terrorism. I am happy that Bangladesh Prime Minister, despite being a woman, has declared zero tolerance for terrorism,"

ಇದು ಮಹಿಳೆಯರ ಘನತೆಗೆ ಧಕ್ಕೆ ತರುವ ಹೇಳಿಕೆ

ಇದು ಮಹಿಳೆಯರ ಘನತೆಗೆ ಧಕ್ಕೆ ತರುವ ಹೇಳಿಕೆ.. ವಾಕ್ಯ ಬಳಕೆ ಪದ ಪ್ರಯೋಗ ಸರಿಯಿಲ್ಲ.

ಪುರುಷ ಪ್ರಧಾನ ಸಮಾಜವಲ್ಲವೇ

ನಮ್ಮದು ಪುರುಷ ಪ್ರಧಾನ ಸಮಾಜವಲ್ಲವೇ ಹೀಗಾಗಿ ಮನಸ್ಥಿತಿ ಬದಲಾಗದು.

ಸುಷ್ಮಾ ಸ್ವರಾಜ್ ಏಕೆ ಬರಲಿಲ್ಲ ಬಾಂಗ್ಲಾಕ್ಕೆ

ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಬಾಂಗ್ಲಾಕ್ಕೆ ಏಕೆ ಬರಲಿಲ್ಲ ಎಂಬುದು ಈಗ ಅರ್ಥವಾಯಿತು ಬಿಡಿ.

ಸೋನಿಯಾ ಗಾಂಧಿ ಹೆಸರು ಪರೋಕ್ಷವಾಗಿ

ಸೋನಿಯಾ ಗಾಂಧಿ ಹೆಸರು ಪರೋಕ್ಷವಾಗಿ ಚರ್ಚೆಗೆ ತಂದ ಸಾರ್ವಜನಿಕರು.

ಸೋನಿಯಾ ಗಾಂಧಿ ಬಗ್ಗೆ ಇನ್ನಷ್ಟು ಟ್ವೀಟ್ಸ್

ಪ್ರಧಾನಿ ಅವರ ಪತ್ನಿ ಪರವಾಗಿ ಕೂಡಾ ಹೋರಾಟ ನಡೆಸಲಿಲ್ಲ.

ಮೋದಿ ಯಾಕೆ ಈ ರೀತಿ ಚಿಂತಿಸುತ್ತಿದ್ದಾರೋ?

ಮೋದಿ ಯಾಕೆ ಈ ರೀತಿ ಚಿಂತಿಸುತ್ತಿದ್ದಾರೋ.. ಅವರಿಗೆ ಗೊತ್ತು.

ಸೆನ್ಸಿಟೀವ್ ವಿಷ್ಯದ ಬಗ್ಗೆ ಸೆನ್ಸಿಬಲ್ ಟ್ವೀಟ್

ಕೆಲವೊಮ್ಮೆ ನನಗೆ ಪುರುಷರ ಮೇಲೆ ಒಲವಾಗುತ್ತದೆ.

English summary
On the second day of his 2-day visit to Bangladesh, Narendra Modi on Sunday, June 7 praised his Sheikh Hasina, the Prime Minister of Bangladesh. #DespiteBeingAWoman has been trending on top on Twitter since Sunday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X