ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಟಾಟಾ ಸಂಸ್ಥೆಯಿಂದ 4 ಸಾವಿರ ಹಳ್ಳಿಗರಿಗೆ ನೆರವಾಗುವ ನೀರಿನ ಘಟಕ

By Mahesh
|
Google Oneindia Kannada News

ಬೆಂಗಳೂರು, ಜ. 10: ಟಾಟಾ ಹೌಸಿಂಗ್ ಕಂಪನಿಯಿಂದ ಬೆಂಗಳೂರು ನಗರದ ಐದು ಸ್ಥಳಗಳಲ್ಲಿ ಸ್ಥಾಪಿಸಲಾದ ನೀರು ಸಂಸ್ಕರಣೆ ಘಟಕಗಳನ್ನು ಶಾಸಕ ಎಂ ನಾರಾಯಣ ಸ್ವಾಮಿ ಉದ್ಘಾಟಿಸಿದ್ದಾರೆ.ಘಟಕಗಳ ಸ್ಥಾಪನೆಯಿಂದ 4000ಕ್ಕೂ ಹೆಚ್ಚು ಹಳ್ಳಿಗರಿಗೆ ನೇರವಾಗಿ ಅನುಕೂಲವಾಗಲಿದೆ ಎಂದು ಟಾಟಾ ಸಂಸ್ಥೆ ಹೇಳಿದೆ.

ಈ ಸಮಾರಂಭದಲ್ಲಿ ಜಯರಾಮಯ್ಯ - ಜಿಲ್ಲಾ ಪಂಚಾಯತ್ ಸದಸ್ಯರು, ಎಂ ನಾರಾಯಣ ಸ್ವಾಮಿ - ವಿಧಾನ ಪರಿಷತ್ ಸದಸ್ಯರು ಮತ್ತು ಜಿ ಸೋಮಶೇಖರ್- ಅಧ್ಯಕ್ಷರು, ಹುಸ್ಕೂರ್ ಪಂಚಾಯತ್, ಕೂಡಾ ಅನುಕ್ರಮವಾಗಿ ವಡೇರಹಳ್ಳಿ ಗ್ರಾಮ, ಬೆತ್ತನಗೆರೆ ಗ್ರಾಮ, ಮಠಹಳ್ಳಿ ಗ್ರಾಮ, ನರಸೀಪುರ ಗ್ರಾಮ ಮತ್ತು ತೊರೆಂಗಸಂದ್ರ ಗ್ರಾಮದ ಉದ್ಘಾಟನೆಗಳಲ್ಲಿ ಉಪಸ್ಥಿತರಿದ್ದರು.

MLC Narayan Swamy inaugurates drinking water facility plant in 5 villages in Bengaluru

ಜನರು, ಭೂಮಿ ಮತ್ತು ಲಾಭದ ಸಮತೋಲನದಲ್ಲಿ ಕಂಪನಿಯ ಮೂಲಭೂತ ನಂಬಿಕೆಯನ್ನು ವಿವರಿಸಿದ, ಬ್ರೊಟೀನ್ ಬ್ಯಾನರ್ಜಿ, ಎಂಡಿ ಮತ್ತು ಸಿಇಒ, ಟಾಟಾ ಹೌಸಿಂಗ್:

'ಟಾಟಾ ಹೌಸಿಂಗ್ ಯಾವತ್ತೂ ಜವಾಬ್ದಾರಿಯುತ ಡೆವಲಪರ್ ಆಗಿದ್ದುಕೊಂಡು ವಸತಿ ವಿಭಾಗವನ್ನು ಮುನ್ನಡೆಸಿದೆ, ಇನ್ನೂ ಹಾಗೆಯೇ ಮುಂದುವರಿಯಲಿದೆ. ನಮ್ಮ ಪ್ರಾಜೆಕ್ಟ್ ಗಳ ಸುತ್ತಮುತ್ತಲಿನ ಸಮುದಾಯಕ್ಕೆ ಬದ್ಧರಾಗಿರುತ್ತೇವೆ ಮತ್ತು ನಮಗೆ ಅತೀವ ಬೆಂಬಲ ನೀಡಿದ ಗ್ರಾಮಸ್ಥರಿಗೆ ಹಾಗೂ ಪಂಚಾಯತ್ ಗಳಿಗೆ ಕೃತಜ್ಞರಾಗಿರುತ್ತೇವೆ'' ಎಂದು ಹೇಳಿದರು.

MLC Narayan Swamy inaugurates drinking water facility plant in 5 villages in Bengaluru

ವಾಟರ್ ಪ್ಯೂರಿಫೈರ್ ಗಳ ಅಳವಡಿಕೆ : ಟಾಟಾ ಹೌಸಿಂಗ್ 2015ರ ಜನವರಿ, ಫೆಬ್ರವರಿಯಲ್ಲಿ ಸಮುದಾಯದ ಅಗತ್ಯದ ಮೌಲ್ಯಮಾಪನ ಸಮೀಕ್ಷೆ ನಡೆಸಿತ್ತು ಮತ್ತು ಈ ಪ್ರದೇಶಗಳಲ್ಲಿನ ಅಂತರ್ಜಲದಲ್ಲಿ ಕ್ಲೋರೈಡ್ ಪ್ರಮಾಣ ಅಧಿಕ ಮಟ್ಟದಲ್ಲಿದೆ, ಇದು ಗ್ರಾಮದ ಆರೋಗ್ಯದ ಮೇಲೆ ಋಣಾತ್ಮಕ ಪ್ರಭಾವ ಬೀರುತ್ತದೆ ಎಂದು ಕಂಡುಕೊಂಡಿತ್ತು.

ಐದು ಗ್ರಾಮಗಳಾದ್ಯಂತ ಒಟ್ಟಾರೆ 10,000 ಲೀಟರ್ ಸಾಮರ್ಥ್ಯದ ವಾಟರ್ ಪ್ಯೂರಿಫೈರ್‍ಗಳ ಅಳವಡಿಕೆ (ಆರ್‍ಒ ಮತ್ತು ಯುಎ ಸಿಸ್ಟಮ್ ಘಟಕಗಳು) ಯೊಂದಿಗೆ, ಈ ಗ್ರಾಮಗಳಲ್ಲಿ ಹಳ್ಳಿಗರಿಗೆ ಸುರಕ್ಷಿತ ಕುಡಿಯುವ ನೀರು ಸೌಕರ್ಯವನ್ನು ಒದಗಿಸುವ ಗುರಿ ಹೊಂದಿದೆ. (ಒನ್ ಇಂಡಿಯಾ ಸುದ್ದಿ)

English summary
MLC Narayan Swamy inaugurates drinking water facility plant donated by Tata housing in 5 villages in Bengaluru.Established in 1984, Tata Housing is a closely held public limited company and a subsidiary of TATA Sons Limited. TATA Sons Limited holds 99.86% of equity share capital of the company.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X