ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಿಗದಿತ ದಿನಾಂಕದೊಳಗೆ ತೆರಿಗೆ ಪಾವತಿಸಿಲ್ಲವೇ? ಹಾಗಾದರೆ ಇಲ್ಲಿ ಓದಿ...

ಐಟಿಆರ್ ಡೆಡ್ ಲೈನ್ ಮುಟ್ಟದಿದ್ದರೂ ತೆರಿಗೆ ಪಾವತಿಸಬಹುದು. 2016-17ರ ಆರ್ಥಿಕ ವರ್ಷದ ತೆರಿಗೆ ಪಾವತಿಸಬೇಕಾದವರಿಗೆ 2018ರ ಮಾರ್ಚ್ 31ರವರೆಗೂ ಅವಕಾಶವಿರುತ್ತದೆ.

|
Google Oneindia Kannada News

ನವದಹೆಲಿ, ಆಗಸ್ಟ್ 7: ಈ ಹಿಂದಿನ ಹಣಕಾಸು ವರ್ಷದ (2016-17) ತೆರಿಗೆ ರಿಟನ್ಸ್ ಅನ್ನು ಸಲ್ಲಿಸಲು ನೀಡಲಾಗಿದ್ದ ಕಾಲಾವಕಾಶ ಆಗಸ್ಟ್ 5ಕ್ಕೆ ಮುಕ್ತಾಯವಾಗಿದೆ.

ಈ ಹಿಂದೆ, ಜುಲೈ 31ರವರೆಗೆ ಗಡುವು ವಿಧಿಸಲಾಗಿತ್ತು. ಆನಂತರ, ಕೆಲವಾರು ತಾಂತ್ರಿಕ ಕಾರಣಗಳಿಂದಾಗಿ ಈ ಗಡುವನ್ನು ಆಗಸ್ಟ್ 5ರವರೆಗೆ ವಿಸ್ತರಿಸಲಾಗಿತ್ತು.

ಐಟಿ ರಿಟರ್ನ್ಸ್ ಸಲ್ಲಿಕೆ ಕೊನೆ ದಿನಾಂಕ ವಿಸ್ತರಿಸಬೇಕು ಏಕೆ?ಐಟಿ ರಿಟರ್ನ್ಸ್ ಸಲ್ಲಿಕೆ ಕೊನೆ ದಿನಾಂಕ ವಿಸ್ತರಿಸಬೇಕು ಏಕೆ?

ಆದರೂ, ಬಹುತೇಕ ಮಂದಿ ಈ ಗಡುವಿನೊಳಗೆ ತೆರಿಗೆ ರಿಟರ್ನ್ಸ್ ಅನ್ನು ಸಲ್ಲಿಸಿಲ್ಲ. ಅಂಥವರು ಕೆಲ ಕ್ಲಿಷ್ಟ ಪರಿಣಾಮಗಳನ್ನು ಎದುರಿಸಬೇಕಾಬಹುದಾದರೂ, ಡೆಡ್ ಲೈನ್ ಮುಗಿದ ಬಳಿಕವೂ ರಿಟರ್ನ್ಸ್ ಸಲ್ಲಿಸಲು ಅವಕಾಶವಂತೂ ಇದೆ.

ಅವಧಿ ಮೀರಿದ ರಿಟರ್ನ್ಸ್ ಫೈಲ್ ಮಾಡುವ ವಿಧಾನ, ಸಾಮಾನ್ಯವಾಗಿ ರಿಟರ್ನ್ಸ್ ಫೈಲ್ ಮಾಡುವ ವಿಧಾನದಂತೆಯೇ ಇರುತ್ತದೆ. ಯಾವುದೇ ವ್ಯತ್ಯಾಸವಿರುವುದಿಲ್ಲ. ಆದಾಯ ತೆರಿಗೆ ಇಲಾಖೆಯ ಇ-ಪೋರ್ಟಲ್ ಗೆ ಲಾಗಿನ್ ಆಗಿ, ನಿಮಗೆ ಸರಿಹೊಂದುವ ಐಟಿಆರ್ ಅರ್ಜಿಯನ್ನು ಆಯ್ಕೆ ಮಾಡಿಕೊಂಡು ಅದನ್ನು ತುಂಬಿ, ಅಲ್ಲಿ ನೀಡಲಾಗಿರುವ ಸೂಚನೆಗಳನ್ನು ಪಾಲಿಸುವ ಮೂಲಕ ನೀವು ನಿಮ್ಮ ತೆರಿಗೆ ತುಂಬಬಹುದು.

ಆನ್ ಲೈನ್ ನಲ್ಲಿ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಹೇಗೆ?ಆನ್ ಲೈನ್ ನಲ್ಲಿ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಹೇಗೆ?

ಹೀಗೆ, ಡೈಡ್ ಲೈನ್ ಮೀರಿದವರು ತಿಳಿಯಲೇಬೇಕಾದ ಅಥವಾ ತಿಳಿದವರು ಮತ್ತೊಮ್ಮೆ ನೆನಪು ಮಾಡಿಕೊಳ್ಳಬೇಕಾದ ವಿಚಾರಗಳನ್ನು ಇಲ್ಲಿ ನೀಡಲಾಗಿದೆ.

ಹೆಚ್ಚುವರಿ ಅವಧಿ ಸೌಲಭ್ಯವಿದೆ

ಹೆಚ್ಚುವರಿ ಅವಧಿ ಸೌಲಭ್ಯವಿದೆ

ನಿಗದಿತ ದಿನಾಂಕದೊಳಗೆ ಐಟಿ ರಿಟರ್ನ್ಸ್ ಪಾವತಿಸಿಲ್ಲವಾದರೆ ಚಿಂತೆ ಬೇಡ. ನಿಮ್ಮ ಆದಾಯ ತೆರಿಗೆ ರಿಟರ್ನ್ಸ್ ಅನ್ನು ನೀವು ಈ ಹಣಕಾಸು ವರ್ಷದ ಕೊನೆಯವರೆಗೂ ಸಲ್ಲಿಸಬಹುದು. ಅದನ್ನೂ ಮೀರಿದರೆ, ನಿಮ್ಮ ಐಟಿ ರಿಟರ್ನ್ಸ್ ಅನ್ನು ನೀವು ಮುಂದಿನ ಹಣಕಾಸು ವರ್ಷದವರೆಗೆ ಸಲ್ಲಿಸಬಹುದು. ಅಂದರೆ, 2015-16ನೇ ಸಾಲಿನ ತೆರಿಗೆ ರಿಟರ್ನ್ಸ್ ಅನ್ನು ನೀವು ಇಲಾಖೆಗೆ ಸಲ್ಲಿಸದೇ ಬಾಕಿ ಇರಿಸಿಕೊಂಡಿದ್ದಲ್ಲಿ, ನೀವು ಅದನ್ನು 2016-17ರವರೆಗೂ ಸಲ್ಲಿಸಲು ಅವಕಾಶವಿರುತ್ತದೆ. ಅಂದರೆ, ಮಾರ್ಚ್ 31, 2017ರವರೆಗೆ ಸಲ್ಲಿಸಲು ಅವಕಾಶವಿರುತ್ತದೆ.

ಮಾರ್ಚ್ 31ರೊಳಗೆ ಪಾವತಿ ಮಾಡಿ

ಮಾರ್ಚ್ 31ರೊಳಗೆ ಪಾವತಿ ಮಾಡಿ

2016-17ನೇ ಸಾಲಿನ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಯಾಗಿರದಿದ್ದರೆ, ನೀವು ನಿಮ್ಮ ರಿಟರ್ನ್ಸ್ ಅನ್ನು ಮಾರ್ಚ್ 31, 2018ರೊಳಗೆ ಸಲ್ಲಿಸಲು ಅವಕಾಶವಿರುತ್ತದೆ.

ನಿಯಮಗಳೇನು ಹೇಳುತ್ತವೆ?

ನಿಯಮಗಳೇನು ಹೇಳುತ್ತವೆ?

ಆದಾಯದ ತೆರಿಗೆಯನ್ನು ನಿಗದಿತ ದಿನಾಂಕದೊಳಗೆ ಪಾವತಿಸಿಲ್ಲವಾದರೆ, ಆ ತೆರಿಗೆದಾರರ ಮೇಲೆ ಆದಾಯ ತೆರಿಗೆ ನಿಯಮಗಳ ಪರಿಚ್ಛೇದ 234ಎ ಹಾಗೂ 234ಬಿ ಅನ್ವಯ ದಂಡ ವಿಧಿಸಲಾಗುತ್ತದೆ. ಅಲ್ಲದೆ, ಗಡುವಿನ ನಂತರ ಪಾವತಿಸುವ ತೆರಿಗೆಗಳ ಮೇಲೆ ತಿಂಗಳಿಗೆ ಶೇ. 1ರಷ್ಟು ಬಡ್ಡಿಯನ್ನೂ ಸೇರಿಸಿ ತೆರಿಗೆದಾರರು ಹಣ ಕಟ್ಟಬೇಕಾಗುತ್ತದೆ.

ಮೂರು ತಿಂಗಳ ಬಡ್ಡಿ ಖೋತಾ ಆಗುತ್ತೆ ಹುಷಾರು

ಮೂರು ತಿಂಗಳ ಬಡ್ಡಿ ಖೋತಾ ಆಗುತ್ತೆ ಹುಷಾರು

ನೀವು ಮುಂಗಡವಾಗಿ ತೆರಿಗೆ ಕಟ್ಟುವವರಾಗಿದ್ದರೆ (ಟಿಡಿಎಸ್ ಮಾದರಿಯ ತೆರಿಗೆ) ನೀವು ನಿಗದಿತ ಸಮಯದೊಳಗಾಗಿ ನಿಮ್ಮ ತೆರಿಗೆ ಮರುಪಾವತಿಗೆ ಅರ್ಜಿ ಸಲ್ಲಿಸಿದರೆ ಉತ್ತಮ. ನೀವು ನಿಗದಿತ ಗಡುವಿನೊಳಗೆ ಅರ್ಜಿ ಸಲ್ಲಿಸಿದ್ದಲ್ಲಿ, ಏಪ್ರಿಲ್ 1ರಿಂದ ಅನ್ವಯವಾಗುವಂತೆ ನಿಮ್ಮ ಹಣಕ್ಕೆ ಆದಾಯ ತೆರಿಗೆ ಇಲಾಖೆ ಬಡ್ಡಿ ನೀಡುತ್ತದೆ. ಆದರೆ, ನೀವು ಗಡುವು ಮೀರಿದ ನಂತರ, ತೆರಿಗೆ ಮರುಪಾವತಿ ಅರ್ಜಿ ಸಲ್ಲಿಸಿದರೆ, ನಿಮಗೆ ಆಗಸ್ಟ್ 1ರಿಂದ ಅನ್ವಯವಾಗುವಂತೆ ಬಡ್ಡಿ ನೀಡಲಾಗುತ್ತದೆ. ಹಾಗಾಗಿ, ನೀವು ಏಪ್ರಿಲ್ ನಿಂದ ಜುಲೈವರೆಗೆ ಸಿಗಬಹುದಾದ ಬಡ್ಡಿಯ ಸವಲತ್ತಿನಿಂದ ವಂಚಿತರಾಗುತ್ತೀರಿ.

ಕ್ಯಾಪಿಟಲ್ ಲಾಸ್ ಬಗ್ಗೆ ಜಾಗ್ರತೆ ವಹಿಸಿ

ಕ್ಯಾಪಿಟಲ್ ಲಾಸ್ ಬಗ್ಗೆ ಜಾಗ್ರತೆ ವಹಿಸಿ

ಬಂಡವಾಳ ಹೂಡಿಕೆದಾರರಾಗಿದ್ದರೆ, ನಿಮ್ಮ ಆರಂಭಿಕ ಕ್ಯಾಪಿಟಲ್ ಲಾಸ್ ಅನ್ನು ತುಂಬಲು ನಿಮಗೆ ಎಂಟು ಹಣಕಾಸು ವರ್ಷಗಳವರೆಗೆ ಅವಕಾಶವಿರುತ್ತದೆ. ಆದರೆ, ನಿಗದಿತ ಗಡುವಿನೊಳಗೆ ತೆರಿಗೆ ರಿಟರ್ನ್ಸ್ ಸಲ್ಲಿಸಿರದಿದ್ದರೆ, ನಿಮ್ಮ ಕ್ಯಾಪಿಟಲ್ ಲಾಸ್ ಅನ್ನು ನೀವು ಮುಂದಿನ ಎಂಟು ವರ್ಷಗಳೊಳಗೆ ಸಲ್ಲಿಸಲು ಸಾಧ್ಯವಿಲ್ಲ.

English summary
Filing returns after the due date can have repercussions for the taxpayer even if there are no pending tax liabilities. However, if you have missed the deadline, you can file a belated return.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X