ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರೂ. 50ಕ್ಕೆ ಎಲ್ ಇ ಡಿ ಬಲ್ಬ್: ಮುಂದಿನ ವಾರದಿಂದ ವಿತರಣೆ

|
Google Oneindia Kannada News

ಬೆಂಗಳೂರು, ಅಕ್ಟೋಬರ್, 22: 'ಹೊಸ ಬೆಳಕು' ಯೋಜನೆಯಡಿ ಗ್ರಾಹಕರಿಗೆ ನೀಡುತ್ತಿರುವ ರಿಯಾಯಿತಿ ಬೆಲೆಯ ಎಲ್ ಇ ಡಿ ಬಲ್ಬ್ ಗಳ ದರವನ್ನು ಕಡಿಮೆ ಮಾಡಲು ಇಂಧನ ಇಲಾಖೆ ನಿರ್ಧರಿಸಿದೆ.

ಈ ಕುರಿತು ಇಂಧ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಮಾತನಾಡಿದ್ದು, " ಈ ಹಿಂದೆ ರೂ.100ಕ್ಕೆ ಮಾರಾಟ ಮಾಡುತ್ತಿದ್ದ ಬಲ್ಬ್ ನ್ನು ರೂ.80ಕ್ಕೆ ವಿಕ್ರಯಿಸಲಾಯಿತು. ಬಲ್ಬ್ ಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಉತ್ಪದನಾ ವೆಚ್ಚವೂ ಕಡಿಮೆ ಆಗಿದೆ ಆದ್ದರಿಂದ ರೂ.50ಕ್ಕೆ ಮಾರಾಟ ಮಾಡಲು ಫಿಲಿಪ್ಸ್ ಸೇರಿದಂತೆ ಹಲವು ಕಂಪೆನಿಗಳು ಒಲವು ತೋರಿಸಿವೆ ಎಂದು ಹೇಳಿದರು.

Ministry of Energy decided to distribute LED bulbs for Rs.50

'ಕಡಿಮೆ ದರದಲ್ಲಿ ಸರಬರಾಜು ಮಾಡಲು ಫಿಲಿಪ್ಸ್ ಕಂಪೆನಿಗೆ ಟೆಂಡರ್ ನೀಡಲಾಗಿದೆ. ಇನ್ನೊಂದು ವಾರದಲ್ಲಿ ಬಲ್ಬ್ ಗಳನ್ನು ವಿತರಿಸಲಾಗುವುದು' ಎಂದು ಅವರು ಹೇಳಿದ್ದಾರೆ.

ಬಲ್ಬ್ ಗಳ ಜತೆಗೆ ಟೂಬ್ ಲೈಟ್ ಗಳಿಗೂ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ಒಂದು ಟ್ಯೂಬ್ ಲೈಟ್ ನ ದರವನ್ನು ರೂ.250ಕ್ಕೆ ನಿಗದಿ ಪಡಿಸಲಾಗಿದೆ. ನವೆಂಬರ್ ನಿಂದ ಟೂಬ್ ಲೈಟ್ ಗಳ ವಿತರಣೆ ಮಾಡಲಾಗುವುದು ಎಂದು ಹೇಳಿದರು.

ರಾಜ್ಯದಲ್ಲಿ 1.53ಕೋಟಿ ವಿದ್ಯುತ್ ಬಳಕೆದಾರರಿದ್ದು, ಇನ್ನೂ 3ಕೋಟಿ ಎಲ್ ಇ ಡಿ ಬಲ್ಬ್ ವಿತರಿಸುವ ಗುರಿ ಹೊಂದಲಾಗಿದೆ. ಈಗಾಗಲೇ ನಗರ ಪ್ರದೇಶಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಿತರಿಸಲಾಗಿದೆ. ಮುಂದೆ ಗ್ರಾಮೀಣ ಪ್ರದೇಶಗಳಲ್ಲೂ ಹೆಚ್ಚು ವಿತರಿಸಲಾಗುವುದು ಎಂದು ಹೇಳಿದ್ದಾರೆ.

English summary
The Ministry of Energy of Karnataka Government decided to distribute LED bulbs for at the cost of Rs.50.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X