ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆಂಜನೇಯ ಕುಟುಂಬದ ಲಂಚದ ಸುದ್ದಿ ಪ್ರಸಾರಕ್ಕೆ ಅಡ್ಡಿ

By Mahesh
|
Google Oneindia Kannada News

ಬೆಂಗಳೂರು, ನ.08: ಸಮಾಜ ಕಲ್ಯಾಣ ಸಚಿವ ಆಂಜನೇಯ ಮತ್ತು ಅವರ ಕುಟುಂಬದ ವಿರುದ್ಧ ಪ್ರಸಾರವಾಗಿರುವ ಲಂಚ ಪ್ರಕರಣ ಸುದ್ದಿಗೆ ಬ್ರೇಕ್ ಹಾಕಲಾಗಿದೆ. ಕುಟುಕು ಕಾರ್ಯಾಚರಣೆ ಸುದ್ದಿ ಪ್ರಸಾರ ಮಾಡದಂತೆ ಟಿವಿ ಮಾಧ್ಯಮಗಳಿಗೆ ನಗರದ ಸೆಷನ್ಸ್ ನ್ಯಾಯಾಲಯ ಆದೇಶ ನೀಡಿದೆ.

ಆದರೆ ಮಾಧ್ಯಮಗಳಲ್ಲಿ ವರದಿ ಪ್ರಕಟಗೊಳ್ಳುತ್ತಿರುವುದರ ವಿರುದ್ಧ ಕಿಡಿ ಕಾರಿದ್ದ ಸಚಿವರು ಹಾಗೂ ಅವರ ಪತ್ನಿ ವಿಜಯಾ ಅವರು ಸುದ್ದಿ ಪ್ರಸಾರಕ್ಕೆ ತಡೆಕೋರಿ 17ನೇ ಹೆಚ್ಚುವರಿ ಸಿಟಿ ಸಿವಿಲ್ ಹಾಗೂ ಸೆಷನ್ಸ್ ಜಡ್ಜ್ ಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಾಲಯ, ಸುದ್ದಿ ಪ್ರಸಾರ, ವರದಿ, ಮರು ಪ್ರಸಾರ ಮಾಡದಂತೆ ನಿರ್ಬಂಧ ಹೇರಿದೆ.

Minister Anjaneya and his family Bribe allegation Court issues stay order to Media

ಕುಟುಕು ಕಾರ್ಯಾಚರಣೆ ಸೇರಿದಂತೆ ಯಾವುದೇ ಸುದ್ದಿಯನ್ನು ಪ್ರಸಾರ ಅಥವಾ ಪ್ರಕಟಿಸದಂತೆ ಸೆಷನ್ಸ್ ನ್ಯಾಯಾಲಯ ಶನಿವಾರ ನೀಡಿರುವ ಆದೇಶವನ್ನು ದಲಿತ ಸಂಘಟನೆಗಳು ಸ್ವಾಗತಿಸಿವೆ.

ಸಚಿವ ಆಂಜನೇಯ ಅವರು ತಮ್ಮ ಇಲಾಖೆ ಅಧಿಕಾರಿಯನ್ನೇ ಬಳಸಿಕೊಂಡು, ತಮ್ಮ ಪತ್ನಿ ಮೂಲಕ ಲಂಚ ಪಡೆಯುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿತ್ತು. ಅಲ್ಲದೆ ಮಾಧ್ಯಮಗಳಲ್ಲಿ ಆಂಜನೇಯ ಅವರ ಮನೆಯಲ್ಲಿ ಅಧಿಕಾರಿ ಎಂದು ಹೇಳಲಾಗುವ ವ್ಯಕ್ತಿಯೊಬ್ಬರು ಹಣ ಇಡುವ ದ್ಯಶ್ಯಗಳು ಟಿವಿ ವಾಹಿನಿಗಳಲ್ಲಿ ಪ್ರಸಾರವಾಗಿತ್ತು.

ಈ ಹಿನ್ನೆಲೆಯಲ್ಲಿ ಪ್ರತಿಪಕ್ಷಗಳು ಆಂಜನೇಯ ಕೂಡಲೇ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದ್ದವು. ಆದರೆ ಸಚಿವರು ಇವೆಲ್ಲವೂ ನನ್ನನ್ನು ರಾಜಕೀಯವಾಗಿ ಮುಗಿಸಲು ನಡೆಸುತ್ತಿರುವ ಪಿತೂರಿ. ನನ್ನಿಂದಾಗಲಿ, ನಮ್ಮ ಕುಟುಂಬ ಸದಸ್ಯರಿಂದಾಗಲಿ ಇಂಥ ಕೃತ್ಯ ನಡೆದಿಲ್ಲ ಎಂದು ತಳ್ಳಿಹಾಕಿದ್ದಾರೆ.

English summary
Bengaluru City court has granted stay order restraining the news channels and newspapers from telecasting or publishing any defamatory or unverified news against Social Welfare Minister Anjaneya and his family.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X