ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಏ. 29, 30 ರಂದು ಸಿರಿಧಾನ್ಯ ಅಡುಗೆ ಸ್ಪರ್ಧೆ: ನೀವೂ ಭಾಗವಹಿಸಿ!

ಕೃಷಿ ಇಲಾಖೆ ಆಯೋಜಿಸಿರುವ ಸಿರಿಧಾನ್ಯ ಮೇಳದಲ್ಲಿ ಸಿರಿಧಾನ್ಯದಿಂದ ತಯಾರಿಸಿದ ಅಡುಗೆ ಸ್ಪರ್ಧೆ ನಡೆಯಲಿದೆ.ಆಸಕ್ತರು ಭಾಗವಹಿಸಬಹುದು.

By ಒನ್ ಇಂಡಿಯಾ ಪ್ರತಿನಿಧಿ
|
Google Oneindia Kannada News

ಬೆಂಗಳೂರು, ಏಪ್ರಿಲ್ 21: ಆರೋಗ್ಯಕ್ಕೆ ಉತ್ತಮ ಎಂದು ನಿಮ್ಮ ಮನೆಯಲ್ಲಿ ಪ್ರತಿದಿನ ಮಿಲ್ಲೆಟ್ ಅಡುಗೆ ಮಾಡುತ್ತೀರಾ? ನಿಮ್ಮ ಅಡುಗೆ ಚಮಾತ್ಕಾರವನ್ನು ನಾಲ್ಕಾರು ಜನರಿಗೆ ತೋರಿಸುವ ಆಸೆಯಿದೆಯಾ? ಹಾಗಾದರೆ ಏಪ್ರಿಲ್ 29 ಮತ್ತು 30 ರಂದು ಬೆಂಗಳೂರಿನ ಅರಮನೆ ಮೈದಾನಕ್ಕೆ ಬನ್ನಿ.

ಕರ್ನಾಟಕ ರಾಜ್ಯದ ಕೃಷಿ ಇಲಾಖೆ ವಿವಿಧ ಇಲಾಖೆಗಳ ಸಹಯೋಗದಲ್ಲಿ, ಇದೇ ತಿಂಗಳ 27 ರಿಂದ 30 ರವರೆಗೆ ರಾಷ್ಟ್ರೀಯ ವ್ಯಾಪಾರ ಮೇಳ- ಸಾವಯವ ಮತ್ತು ಸಿರಿಧಾನ್ಯ 2017 ಕಾರ್ಯಕ್ರಮವನ್ನು ಆಯೋಜಿಸಿದೆ.

Millet recipe competion in Bengaluru on 29th and 30th

ಕಾರ್ಯಕ್ರಮದ ಭಾಗವಾಗಿ ಸಿರಿಧಾನ್ಯ ಅಡುಗೆ ಸ್ಪರ್ಧೆಯೂ ಇರಲಿದೆ! ಈ ಸ್ಪರ್ಧೆಗಳು ಏಪ್ರಿಲ್ 29 ಮತ್ತು 30 ರಂದು ನಡೆಯಲಿದ್ದು, ಆಸಕ್ತರು ತಮ್ಮ ಅಡುಗೆಯ ರುಚಿಯನ್ನು ಅಂದು ಎಲ್ಲರಿಗೂ ಉಣಬಡಿಸಬಹುದು! ವಿಜೇತರಿಗೆ 8,000 ರೂ. ನಗದು ಬಹುಮಾನವಿವೆ.

ಸಿಹಿ ತಿಂಡಿ, ಬೇಕರಿ ತಿನಿಸು ಸೇರಿದಂತೆ ಮೂರು ವಿಭಿನ್ನ ಸ್ಪರ್ಧೆಗಳಿದ್ದು, ಸ್ಪರ್ಧೆಗೆ ಹೆಸರನ್ನು ನೋಂದಾಯಿಸಲು ನಾಳೆಯೇ ಕೊನೆಯ ದಿನ (ಏಪ್ರಿಲ್ 22), ಸ್ಪರ್ಧಿಗಳು ತಮ್ಮ ನೋಂದಾವಣೆಯನ್ನು ಖಚಿತಪಡಿಸಲು ಅಥವಾ ಹೆಸರನ್ನು ಹಿಂಪಡೆಯಲು ಏಪ್ರಿಲ್ 24 ಕೊನೆಯ ದಿನವಾಗಿರುತ್ತದೆ. ಹೆಸರನ್ನು ನೋಂದಾಯಿಸಲು ಮತ್ತು ಹೆಚ್ಚಿನ ಮಾಹಿತಿ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

Millet recipe competion in Bengaluru on 29th and 30th

ರಾಷ್ಟ್ರೀಯ ವ್ಯಾಪಾರ ಮೇಳ- ಸಾವಯವ ಮತ್ತು ಸಿರಿಧಾನ್ಯ 2017
ರಾಸಾಯನಿಕ ಮುಕ್ತ, ಕಲಬೆರಿಕೆಯಿಲ್ಲದ ಆಹಾರ ಪಡೆಯುವುದೇ ಬಹುದೊಡ್ಡ ಸವಾಲೆನ್ನಿಸಿರುವ ಈ ಕಾಲದಲ್ಲಿ ಸಿರಿಧಾನ್ಯಗಳು ವರವಾಗಿ ಪರಿಚಿತವಾಗಿವೆ. ಅದಕ್ಕೆಂದೇ ತಮ್ಮ ಆರೋಗ್ಯದ ಬಗ್ಗೆ ನೈಜ ಕಾಳಜಿ ಇರುವ ಪ್ರತಿಯೊಬ್ಬರೂ ಇತ್ತೀಚೆಗೆ ಸಿರಿಧಾನ್ಯ ಬಳಸುವುದಕ್ಕೆ ಆರಂಭಿಸಿದ್ದಾರೆ.

ಸಿರಿ ಧಾನ್ಯಗಳ ಬಗ್ಗೆ ಮತ್ತಷ್ಟು ಅರಿವು ಮೂಡಿಸುವ ಸಲುವಾಗಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ರಾಷ್ಟ್ರೀಯ ವ್ಯಾಪಾರ ಮೇಳ- ಸಾವಯವ ಮತ್ತು ಸಿರಿಧಾನ್ಯ 2017 (National Trade Fair - Organics & Millets 2017)ಎಂಬ ಬೃಹತ್ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿದೆ.

ಸಿರಿಧಾನ್ಯದ ಕುರಿತು ಆಸಕ್ತಿ ಇರುವ ರೈತರು, ವ್ಯಾಪಾರಿಗಳು, ಗ್ರಾಹಕರಿಗೆ ಒಂದು ಉತ್ತಮ ವೇದಿಕೆ ನೀಡುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಅಷ್ಟೇ ಅಲ್ಲ, ಸಾವಯವ ಕೃಷಿಕರು ತಮ್ಮ ಉತ್ಪನ್ನಗಳಿಗೆ ಪ್ರಚಾರ ನೀಡಲು, ಪ್ರದರ್ಶಿಸಲು ಮತ್ತು ಮಾರಾಟ ಮಾಡಲು ಇಲ್ಲಿ ಅವಕಅಶ ನೀಡಲಾಗುತ್ತದೆ.

ಕಾರ್ಯಕ್ರಮದಲ್ಲಿ ಸಿರಿಧಾನ್ಯ ಪ್ರದರ್ಶನ, ವ್ಯಾಪಾರಿ-ಗ್ರಾಹಕ ಸಂವಹನ, ರೈತರ ಕಾರ್ಯಾಗಾರ, ಸಾವಯವ ಫುಡ್ ಕೋರ್ಟ್ ಇರಲಿವೆ. ಕರ್ನಾಟಕ ಸರ್ಕಾರದ ಕೃಷಿ ಇಲಾಖೆಯು ವಿವಿಧ ಇಲಾಖೆಗಳ ಸಹಯೋಗದಲ್ಲಿ ನಡೆಸುತ್ತಿರುವ ಈ ಮೇಳದಲ್ಲಿ 200 ಕ್ಕೂ ಹೆಚ್ಚು ಸ್ಟಾಲ್ ಹೂಡಲು ಅವಕಾಶವಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ನಿರೀಕ್ಷಿಸಲಾಗಿದೆ.

English summary
The forgotten millets are gaining momentum. At this juncture, Karnataka agriculture deaprtment has organised a competition of millet recipe in Palace ground, Bangalore, on 29th and 30th of this month (April)
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X