ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

#MigrationSaku ಐಟಿ ಹಾಗೂ ಬಿಟಿ ಕನ್ನಡಿಗರಿಂದ ಅಭಿಯಾನ

By Mahesh
|
Google Oneindia Kannada News

ಬೆಂಗಳೂರು, ಜೂನ್ 07: IT & BT ಕನ್ನಡಿಗರು ಮತ್ತೊಮ್ಮೆ ಕನ್ನಡ ಪರ ಆನ್ ಲೈನ್ ಅಭಿಯಾನಕ್ಕೆ ಮುಂದಾಗಿದ್ದಾರೆ. #VenkayyaSakayya ಅಭಿಯಾನದ ಯಶಸ್ಸಿನ ನಂತರ #MigrationSaku ಎಂಬ ಹ್ಯಾಶ್ ಟ್ಯಾಗ್ ನೊಂದಿಗೆ ಟ್ವಿಟ್ಟರ್ ನಲ್ಲಿ ಅಭಿಯಾನ ಆರಂಭಿಸಿದ್ದಾರೆ.

ಸಾಮಾಜಿಕ ಜಾಲತಾಣದ ಕನ್ನಡಿಗರೆಲ್ಲ ಸೇರಿಕೊಂಡು ಕರ್ನಾಟಕದಲ್ಲಿ ಅಕ್ರಮವಾಗಿ ನುಸುಳಿರುವ ಬಾಂಗ್ಲಾದೇಶಿ ಮತ್ತು ಇತರ ಅಕ್ರಮ ವಲಸಿಗರ ವಿರುದ್ದ ಬುಧವಾರ (ಜೂನ್ 8) ಬೆಳಗ್ಗೆ #MigrationSaku ಎಂಬ ಹ್ಯಾಶ್ ಟ್ಯಾಗ್ ನೊಂದಿಗೆ ಟ್ವಿಟ್ಟರ್ ಟ್ರೆಂಡ್ ಮಾಡಲು ಮುಂದಾಗಿದ್ದಾರೆ. [#Venakkayyasakaya ಎಂದು ರೊಚ್ಚಿಗೆದ್ದ ಐಟಿ ಕನ್ನಡಿಗರು]

#MigrationSaku, A campaign on Twitter to stop illegal migration

ಇದು ಪಕ್ಷಾತೀತವಾದಂತ ಹೋರಾಟ, ಅಕ್ರಮವಾಗಿ ರಾಜ್ಯದೊಳಗೆ ನುಗ್ಗಿ ಅಂತರಿಕ ಬದ್ರತೆಗೆ ಸವಾಲಾಗುತ್ತಿರುವ ಅಕ್ರಮ ವಲಸಿಗರ ವಿರುದ್ದದ ಈ ಹೋರಾಟಕ್ಕೆ ಎಲ್ಲರು ಕೈ ಜೋಡಿಸಿ ಕರ್ನಾಟಕ ಮತ್ತು ಕನ್ನಡಿಗರನ್ನ ರಕ್ಷಿಸಿ ಎಂದು ಐಟಿ ಕನ್ನಡಿಗರ ತಂಡದವರು ಹೇಳಿದ್ದಾರೆ.

ಭಾರತ ದೇಶದಲ್ಲಿ ಅದರಲ್ಲೂ ಕರ್ನಾಟಕ ರಾಜ್ಯದಲ್ಲಿ ಅನಿಯಂತ್ರಿತ ವಲಸೆಯಿಂದಾಗಿ ದಿನದಿಂದ ದಿನಕ್ಕೆ ಅನೇಕ ಭದ್ರತೆಯ ಸವಾಲುಗಳನ್ನ ಕರ್ನಾಟಕದ ಜನತೆ ಎದಿರುಸುತ್ತಿದ್ದಾರೆ, ಉತ್ತರ ಭಾರತೀಯರ ಅನಿಯಂತ್ರಿತ ವಲಸೆ ಇಂದಾಗಿ ಅವರ ಜೊತೆ ಅನೇಕ ಸುಮಾರು 5 ಲಕ್ಷಕ್ಕಿಂತ ಹೆಚ್ಚು ಬಾಂಗ್ಲಾ ವಲಸಿಗರು ಇಂದು ಕರ್ನಾಟಕವನ್ನ ಪ್ರವೇಶಿಸಿ ಅಂತರಿಕ ಭದ್ರತೆ ಮತ್ತು ಸಾಮಾಜಿಕ ಅಸಮತೋಲನಕ್ಕೆ ಕಾರಣವಾಗುತ್ತಿದೆ.

#MigrationSaku, A campaign on Twitter to stop illegal migration

ಬೆಂಗಳೂರು, ಕೊಡಗು, ಚಿಕ್ಕಮಗಳೂರು ಮತ್ತು ಹಾಸನ ಸೇರಿದಂತೆ ಅನೇಕ ಕಡೆಗೆ ನುಸುಳಿ ಅಕ್ರಮವಾಗಿ ಬಿಡಾರ ಹೂಡಿದ್ದಾರೆ, ಇವರನ್ನು ಹೊರ ಹಾಕದಿದ್ದರೆ ಮುಂದೊಂದು ದಿನ ಕರ್ನಾಟಕ ಮತ್ತೊಂದು ಅಸ್ಸಾಂ, ಮುಂಬೈ ಆಗದೆ ಇರದು, ಹೀಗಾಗಿ ನಮ್ಮೆಲ್ಲ ಕನ್ನಡ ಬಂಧುಗಳು ಇದರ ಜೊತೆ ಸೇರಿ ಸರಕಾರವನ್ನ ಎಚ್ಚರಿಸಬೆಕಾಗಿದೆ, ಕರ್ನಾಟಕ ಮತ್ತು ಕೇಂದ್ರ ಮಂತ್ರಿಗಳನ್ನ ಇದರಲ್ಲಿ ಟ್ಯಾಗ್ ಮಾಡಿ ಅವರಿಗೆ ವಸ್ತುಸ್ಥಿತಿಯನ್ನ ಅರ್ಥ ಮಾಡಿಸಬೇಕಾಗಿದೆ,

ಜೊತೆಗೆ ಕರ್ನಾಟಕದ ಜನತೆಯಲ್ಲೂ ಅಕ್ರಮ ವಲಸಿಗರ ವಿರುದ್ದ ಎದ್ದೇಳಿಸಬೀಕಾಗಿದೆ. ನಾಳೆ ಬೆಳಿಗ್ಗೆ 6 ಗಂಟೆಯಿಂದಲೇ ಸಾಮಾಜಿಕ ಜಾಲತಾಣದಲ್ಲಿ ಇದರ ವಿರುದ್ಧ ಸಮರ ಸಾರಿ #MigrationSaku ಎಂಬ ಹ್ಯಾಶ್ ಟ್ಯಾಗ್ ನೊಂದಿಗೆ.

English summary
#MigrationSaku: IT and BT Kannadigas are doing a campaign on micro blogging site Twitter to stop illegal migration. IT Kannadigas group successfully campaigned against M Venkaiah Naidu with #VenkayyaSakayya Tag.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X