ಮೆಗಾಸಿಟಿ ಹಗರಣ: ಶಾಸಕ ಯೋಗೇಶ್ವರ್ ವಿರುದ್ಧ ಎಫ್ಐಆರ್

ಮೆಗಾಸಿಟಿ ಡೆವಲಪರ್ಸ್ ಅಂಡ್ ಬಿಲ್ಡರ್ಸ್‌ ಲಿಮಿಟೆಡ್ ವಂಚನೆ ಪ್ರಕರಣ ಮತ್ತೊಮ್ಮೆ ಶಾಸಕ ಸಿ.ಪಿ ಯೋಗೇಶ್ವರ್ ಅವರನ್ನು ಕಾಡುತ್ತಿದೆ. ಯೋಗೇಶ್ವರ್ ಸೇರಿದಂತೆ ಐವರು ಆರೋಪಿಗಳ ವಿರುದ್ಧ ಸಂಪಂಗಿರಾಮನಗರ ಠಾಣೆ ಪೊಲೀಸರು ಎಫ್ಐಆರ್ ಹಾಕಿದ್ದಾರೆ.

By:
Subscribe to Oneindia Kannada

ಬೆಂಗಳೂರು, ಡಿಸೆಂಬರ್ 24: ಮೆಗಾಸಿಟಿ ಡೆವಲಪರ್ಸ್ ಅಂಡ್ ಬಿಲ್ಡರ್ಸ್‌ ಲಿಮಿಟೆಡ್ ವಂಚನೆ ಪ್ರಕರಣ ಮತ್ತೊಮ್ಮೆ ಚನ್ನಪಟ್ಟಣ ಶಾಸಕ ಸಿ.ಪಿ ಯೋಗೇಶ್ವರ್ ಅವರನ್ನು ಕಾಡುತ್ತಿದೆ. ಯೋಗೇಶ್ವರ್ ಸೇರಿದಂತೆ ಐವರು ಆರೋಪಿಗಳ ವಿರುದ್ಧ ಸಂಪಂಗಿರಾಮನಗರ ಠಾಣೆ ಪೊಲೀಸರು ಎಫ್ಐಆರ್ ಹಾಕಿದ್ದಾರೆ.

ಸಾರ್ವಜನಿಕರಿಗೆ ನಿವೇಶನ ಹಂಚಿಕೆ ವಿವಾದ, ಅವ್ಯವಹಾರ ಆರೋಪ ಎದುರಿಸುತ್ತಿರುವ ಶಾಸಕ ಸಿ.ಪಿ.ಯೋಗೇಶ್ವರ್ ಸೇರಿದಂತೆ ಐವರ ವಿರುದ್ಧ ತನಿಖೆ ನಡೆಸಿ, ಎಫ್ಐಆರ್ ದಾಖಲಿಸಿಕೊಳ್ಳಲು 9ನೇ ಎಸಿಎಂಎಂ ನ್ಯಾಯಾಲಯ ಆದೇಶ ಹೊರಡಿಸಿತ್ತು.

Megacity Land Scam : MLA CP Yogeshwar in trouble, FIR filed Sampangi Rama Nagar police

ಫಕ್ರುದ್ದೀನ್ ಎಂಬುವರು ಸಲ್ಲಿಸಿದ್ದ ಖಾಸಗಿ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದ ಸಂಪಂಗಿರಾಮನಗರ ಠಾಣೆ ಪೊಲೀಸರು, ಸಿ.ಪಿ. ಯೋಗೇಶ್ವರ್, ಮಂಜು ಕುಮಾರಿ, ಸಿ.ಪಿ. ಗಂಗಾಧರೇಶ್ವರ್, ಮಹದೇವಯ್ಯ ಮತ್ತು ಎಚ್.ಆರ್. ರಮೇಶ್ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.

ಏನಿದು ಪ್ರಕರಣ: ಬಿಡದಿ ಬಳಿ ವಜ್ರಗಿರಿ ಟೌನ್‌ಶಿಪ್ ಯೋಜನೆಯಲ್ಲಿ ನಿವೇಶನ ಹಂಚಿಕೆ ಮಾಡುವುದಾಗಿ ಯೋಗೇಶ್ವರ್ ಮತ್ತು ಅವರ ಕುಟುಂಬದ ಸದಸ್ಯರ ಒಡೆತನದ ಮೆಗಾಸಿಟಿ ಡೆವಲಪರ್ಸ್ ಅಂಡ್ ಬಿಲ್ಡರ್ಸ್‌ ಲಿಮಿಟೆಡ್ ಕಂಪೆನಿ ಘೋಷಿಸಿತ್ತು. ಇದಕ್ಕಾಗಿ ಸಾರ್ವಜನಿಕರು ಕಂತುಗಳ ರೂಪದಲ್ಲಿ ಹಣ ನೀಡಿದ್ದರು. ಆದರೆ, ಹಣವನ್ನು ಹಿಂತಿರುಗಿಸಿಲ್ಲ ಹಾಗೂ ನಿವೇಶನವನ್ನು ನೀಡಿಲ್ಲ ಎಂದು ಫಕ್ರುದ್ದೀನ್ ದೂರು ನೀಡಿದ್ದರು.

ಖಾಸಗಿ ಟೌನ್‌ಶಿಪ್ ನಿವೇಶನ ಹಂಚಿಕೆ ಹಗರಣದಲ್ಲಿ ಸಿಲುಕಿದ್ದ ವೇಳೆಯಲ್ಲೇ ಬಿಎಸ್ ಯಡಿಯೂರಪ್ಪ ಅವರ ಸಂಪುಟದಲ್ಲಿ ಸಚಿವರಾಗುವ ಭಾಗ್ಯ ಕಂಡಿದ್ದ ಯೋಗೇಶ್ವರ್ ಅವರು ಮಧ್ಯದಲ್ಲಿ 'ಸೈಕಲ್ ' ಸವಾರಿ ಮಾಡಿ ಸಮಾಜವಾದಿ ಎನಿಸಿಕೊಳ್ಳಲು ಯತ್ನಿಸಿದ್ದರು. ಆದರೆ, ನಂತರ ಕಾಂಗ್ರೆಸ್ ಗೆ ಮರಳಿದ್ದನ್ನು ಇಲ್ಲಿ ಸ್ಮರಿಸಬಹುದು.

English summary
Megacity Land Scam : MLA CP Yogeshwar in trouble again. Sampangiramanagar police have filed FIR against Yogeshwar and five other accused.
Please Wait while comments are loading...