ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸೂಕ್ತ ರಕ್ಷಣೆಗೆ ಒತ್ತಾಯಿಸಿ ಬೆಂಗಳೂರಿನಲ್ಲಿ ವೈದ್ಯರಿಂದ ಪ್ರತಿಭಟನೆ

By Sachhidananda Acharya
|
Google Oneindia Kannada News

ಬೆಂಗಳೂರು, ಜೂನ್ 2: ವೈದ್ಯಕೀಯ ಕಾಲೇಜಿನ ವೈದ್ಯರು ಮತ್ತು ಅಧ್ಯಾಪಕರ ಸಂಘ ಬೆಂಗಳೂರಿನಲ್ಲಿ ಪ್ರತಿಭಟನೆ ಹಮ್ಮಿಕೊಂಡಿದೆ.

ಇತ್ತೀಚೆಗೆ ವೈದ್ಯರ ಮೇಲೆ ರೋಗಿಗಳ ಕುಟುಂಬಸ್ಥರು ಮತ್ತು ಗೆಳೆಯರು ನಡೆಸುತ್ತಿರುವ ದಾಳಿಗಳನ್ನು ಖಂಡಿಸಿ ಈ ಪ್ರತಿಭಟನೆ ನಡೆಸಲಾಗುತ್ತಿದೆ. ಪ್ರತಿಭಟನೆ ವೇಳೆ ನಮಗೆ ಸೂಕ್ತ ರಕ್ಷಣೆ ಕೊಡಿ ಎಂದು ವೈದ್ಯರು ಒತ್ತಾಯಿಸಿದ್ದಾರೆ.[ಮಹಾರಾಷ್ಟ್ರ: ಮುಷ್ಕರ ನಿರತ 301 ವೈದ್ಯರ ಅಮಾನತು]

Medical College Doctors protesting in Bengaluru, demanding adequate security

ಬೆದರಿಕೆಯಡಿಯಲ್ಲಿ ವೈದ್ಯರು ಕಾರ್ಯ ನಿರ್ವಹಿಸಲು ಸಾಧ್ಯವಿಲ್ಲ, ವೈದ್ಯರನ್ನು ರಕ್ಷಿಸಿ ಮೊದಲಾದ ಭಿತ್ತಿಪತ್ರಗಳನ್ನು ಪ್ರತಿಭಟನೆಯಲ್ಲಿ ನಿರತ ವೈದ್ಯರು ಪ್ರದರ್ಶಿಸಿದ್ದಾರೆ.

Medical College Doctors protesting in Bengaluru, demanding adequate security

ಇತ್ತೀಚೆಗೆ ಪಕ್ಕದ ಮಹಾರಾಷ್ಟ್ರದಲ್ಲೂ ವೈದ್ಯರ ಮೇಲಿನ ದಾಳಿಗಳು ಹೆಚ್ಚಾದ ಹಿನ್ನಲೆಯಲ್ಲಿ ಸೂಕ್ತ ರಕ್ಷಣೆ ನೀಡುವಂತೆ ಒತ್ತಾಯಿಸಿ ಅಲ್ಲಿನ ವೈದ್ಯರು ರಾಜ್ಯದಾದ್ಯಂತ ನಿರಂತರ ಪ್ರತಿಭಟನೆಗಳನ್ನು ನಡೆಸಿದ್ದರು. ಇದಕ್ಕೆ ಬೆಂಗಳೂರಿನ ವೈದ್ಯರೂ ಬೆಂಬಲ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಜನರ ಆಕ್ರೋಶ

ಒಂದೆಡೆ ವೈದ್ಯರು ಪ್ರತಿಭಟನೆಗೆ ನಡೆಸುತ್ತಿದ್ದರೆ ಜನರ ಮಾತ್ರ ವೈದ್ಯರು ಮಾಡುತ್ತಿರುವ ಸುಲಿಗೆ ಬಗ್ಗೆ ಧ್ವನಿ ಎತ್ತಿದ್ದಾರೆ. ಈ ಬಗ್ಗೆ ಟ್ವಿಟ್ಟರಿನಲ್ಲಿ ಹೆಚ್ಚಿನವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಮ್ಮ ಮೇಲಿನ ದಾಳಿಯನ್ನು ಪ್ರಶ್ನಿಸುವವರು ಗ್ರಾಹಕರಿಂದ ಸುಲಿಗೆ ಮಾಡುವುದರ ಬಗ್ಗೆ ಯಾಕೆ ಧ್ವನಿ ಎತ್ತುತ್ತಿಲ್ಲ ಎಂದು ಟ್ವೀಟಿಗರು ಪ್ರಶ್ನಿಸಿದ್ದಾರೆ.

English summary
Medical College Doctors and Teachers Association protest in Bengaluru, demanding adequate security to them after a doctor's assault by a patient's relative.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X