ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಾಸ್ತಿ ಕಲ್ಲು – ಒಂದು ಪೀಡಿತ ಪ್ರೇಮ ಕಥೆ, ತಪ್ಪದೇ ನೋಡಿ

By Mahesh
|
Google Oneindia Kannada News

ಬೆಂಗಳೂರು, ಏಪ್ರಿಲ್ 22: ಜಟ್ಟ, ಮೈತ್ರಿ ಚಲನಚಿತ್ರ ಖ್ಯಾತಿಯ ಗಿರಿರಾಜ್ ಬಿಎಂ ಅವರ ನಿರ್ದೇಶನದ 'ಮಾಸ್ತಿಕಲ್ಲು' ನಾಟಕದ ಪ್ರದರ್ಶನ ಏಪ್ರಿಲ್ 23ರಂದು ಕಮಲಾನಗರದ ಕೆಇಎ ರಂಗಮಂದಿರದಲ್ಲಿ ಆಯೋಜಿಸಲಾಗಿದೆ.

ಸತಿ ಪದ್ಧತಿಯ ಶೋಷಣೆಯ ವಿವಿಧ ನೋವುಗಳ ನೋಟವನ್ನು ತೆರೆದಿಡುವ ಈ ನಾಟಕ, ರಾಜಜಾಸ್ಥಾನದಲ್ಲಿ ನಡೆದ ರೂಪಾ ಕನ್ವರ್ ಎಂಬುವರ ಸತಿ ಸಹಗಮನದ ಕಥೆಗೆ ಹತ್ತಿರವಾಗಿದ್ದರೂ, ನಮ್ಮ ನಾಟಕವು ಒಂದು ಪ್ರೇಮಕಥೆಯಾಗಿ ವಿಭಿನ್ನತೆಯನ್ನು ತನ್ನದಾಗಿಸಿಕೊಂಡಿದೆ. ನಮ್ಮ ನಾಟಕವನ್ನು ಡಾ||ಶಿವರಾಂ ಕಾರಂತರ 'ಸರಸಮ್ಮನ ಸಮಾಧಿ' ಕಾದಂಬರಿಯ ಪ್ರೇರಣೆಯಿಂದಲೂ ರಚಿಸಲಾಗಿದೆ.

ರೂಪಾ ಕನ್ವರ್ ಅವರ ಪರಿಸ್ಥಿತಿಗೆ ಒಳಗಾದಾಗ ವಿವಿಧ ಪಾತ್ರಗಳು ಹೇಗೆ ವರ್ತಿಸಬಹುದು ಎಂಬುದನ್ನು ತೋರಿಸುವ ಪ್ರಯತ್ನ ಇದಾಗಿದೆ. ವಿವಿಧ ಪ್ರೀತಿ, ತ್ಯಾಗಗಳ ಕಥೆಗಳಿಗೆ ಸಾಕ್ಷಿಯಾಗಿ ನಿಂತಿರುವ ಹಲವು ಮಾಸ್ತಿ ಕಲ್ಲುಗಳ ಪ್ರತೀಕವಾಗಿ ನಮ್ಮ ನಾಟಕದ ಹೆಸರನ್ನು ಮಾಸ್ತಿ ಕಲ್ಲು ಎಂದಿರಿಸಿದ್ದೇವೆ. ಈ ರೀತಿಯ ಒಂದು ಕಥೆಯೆ ನಮ್ಮ ನಾಟಕದ ಸಾರ.

Masti Kallu Kannada Play

ಮಾಸ್ತಿ ಕಲ್ಲು- ಪ್ರಕಸಂ ಸಂಸ್ಥೆಯ 16ನೇ ಪ್ರಯೋಗವಾಗಿದ್ದು, ಗಿರಿರಾಜ್ ಬಿ.ಎಂ ಇದನ್ನು ರಚಿಸಿ ನಿರ್ದೇಶಿಸಿದ್ದಾರೆ. ನಾಟಕದ ಪ್ರಧಾನ ಪಾತ್ರಧಾರಿಯಾದ ಚಂದ್ರಯ್ಯನ ಜೀವನೋದ್ದೇಶವಾದ ಪ್ರೇತಗಳ ಅನ್ವೇಷಣೆ ಅವನನ್ನು ಹಲವು ಮಾನವಾತೀತ ಹಾಗು ರೋಮಾಂಚನಕಾರಿ ಅನುಭವ ಹಾಗು ಸನ್ನಿವೇಷಗಳಿಗೆ ಗುರಿಪಡಿಸುತ್ತದೆ. ಈ ಎಲ್ಲಾ ಸನ್ನಿವೇಷಗಳು ಪ್ರೇಕ್ಷಕರಿಗೆ ವಿಭಿನ್ನ ಅನುಭವ ನೀಡಲಿದೆ ಎಂಬ ನಂಬಿಕೆ ನಮ್ಮದು.

ನಾಟಕ: ಮಾಸ್ತಿಕಲ್ಲು
ಸ್ಥಳ: ಕೆಇಎ ಪ್ರಭಾತ್ ರಂಗಮಂದಿರ, 8ನೇ ಮುಖ್ಯರಸ್ತೆ, ಕಮಲಾನಗರ, ಬೆಂಗಳೂರು. Phone:096320 57799
ದಿನಾಂಕ: ಏಪ್ರಿಲ್ 23, ಶನಿವಾರ.
ಸಮಯ : 7.30 ಸಂಜೆ

ನಿರ್ದೇಶಕರ ನುಡಿ - ಬಿ.ಎಂ. ಗಿರಿರಾಜ್

ಒಂದು ಕೃತಿ ಒಬ್ಬೋಬ್ಬರ ಓದು ಮತ್ತು ಮಾಗುವಿಕೆಯ ಅನುಸಾರವಾಗಿ ಅವರವರಿಗೆ ಬೇರೆ ಬೇರೆ ಅರ್ಥಗಳನ್ನ ಕೋಡುತ್ತದೆ. ಕಾರಂತರ ಬರಹಗಳು ನಮ್ಮ ಅನುಭವ ಮತ್ತು ನಂಬಿಕೆಗಳನ್ನ ಓರೆಗೆ ಹಚ್ಚುತ್ತದೆ. ಹಲವು ಸಲ ಓದಿದಾಗಲೂ ಹಲವು ಅರ್ಥ ಸಾಧ್ಯತೆಗಳನ್ನ ತೋರಿ ನಮ್ಮ ಆಶಾಢಭೂತಿತನಕ್ಕೆ ಬೆಂಕಿ ಇಡುತ್ತದೆ. 60 ವರ್ಷಕ್ಕೂ ಹಿಂದೆ ರಚಿಸಿದ ಕೃತಿ ಇಂದಿಗೂ ahead of its time
ಅಂತ ಅನಿಸಿಕೊಳ್ಳುತ್ತದೆ ಅಂದರೆ ಅದು ಲೇಖಕರ ಪ್ರಜ್ವಲ ಕರ್ತೃಶಕ್ತಿಯೂ ಹೌದು ನಮ್ಮ ಸಮಾಜದ ದುರಂತ ಸ್ಥಿತಿಯೂ ಹೌದು. ಇಂತಹ ದ್ವೈತ ಆಯಾಮವನ್ನ ಅದರ ಘನ ಶಕ್ತಿಯಲ್ಲೇ ರಂಗದ ಮೇಲೆ ತರುವ ಪ್ರಾಮಾಣಿಕ ಪ್ರಯತ್ನ ನಮ್ಮದು.

Masti Kallu Kannada Play

ಪ್ರದರ್ಶನ ಕಲಾ ಸಂಸ್ಥೆ:

ಪ್ರಕಸಂ ಪ್ರದರ್ಶನಕಲೆಗಳ ಪ್ರಚಾರ, ಪಾಲನೆ, ಪೋಷಣೆ, ನಿರೂಪಣೆ ಹಾಗು ನಿರ್ವಹಿಸಲು ಪಣ ತೊಟ್ಟಿರುವ ಸಂಸ್ಥೆ. ಕಲಾಸೇವೆಗಾಗಿ ಪ್ರಕಸಂ ಕೆಂಗಲ್ ಹನುಮಂತಯ್ಯ ಕಲಾಸೌಧದ ನಿರ್ವಹಣೆಯನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಿಂದ ಗುತ್ತಿಗೆಗೆ ಪಡೆದುಕೊಂಡು ಪ್ರದರ್ಶನ ಕಲೆಗಳಾದ ನಾಟಕ, ನೃತ್ಯ, ಸಂಗೀತ ಮತ್ತು ಚಲನಚಿತ್ರಗಳ ಆಯಾಮಗಳ ಪರಿಚಯವನ್ನು ಬಸವನಗುಡಿಯ ಹಾಗು ಬೆಂಗಳೂರಿನ ಸಹೃದಯಿ ನಾಗರೀಕರರಿಗೆ ಪ್ರಸ್ತುತ ಪಡಿಸಿದೆ.

ಯುವಜನರನ್ನು ಪ್ರೋತ್ಸಾಹಿಸಿ ರಂಗಭೂಮಿಗೆ ಹೊಸ ಪ್ರೇಕ್ಷಕವರ್ಗವನ್ನು ಸೃಷ್ಟಿಸಲು ಅನುಪಮ ಪ್ರದರ್ಶನ ಕಲಾ ಪ್ರಯೋಗಗಳನ್ನು ನಿರ್ಮಿಸುತ್ತ ಬಂದಿದೆ. ಈ ರಂಗಮಂಚದ ಮೇಲೆ ಪ್ರಪಂಚದ ಎಲ್ಲಾ ಭಾಗಗಳಿಂದ ಕಲಾವಿದರು ಬಂದು ತಮ್ಮ ಅನನ್ಯ ಕಲಾಜ್ಯೋತಿಯನ್ನು ಬೆಳಗಿಸಿದ್ದಾರೆ. ಜನವರಿ 2010ರಿಂದ ಜನವರಿ 2014ರವರಗೆ 1800ಕ್ಕೂ ಹೆಚ್ಚು ಕಲಾ ಪ್ರದರ್ಶನಗಳಾಗಿವೆ.

ಪ್ರದರ್ಶನ ಕಲಾ ಸಂಸ್ಥೆ, ರಾಮಾಂಜನೇಯ ಗುಡ್ದದ ಆವರಣ, ಹನುಮಂತನಗರ, ಬಸವನಗುಡಿ, ಬೆಂಗಳೂರು - 560019

ದೂರವಾಣಿ: 0725 9998222/333; ಅಂತರ್ಜಾಲದ ವಿಳಾಸ: www.parkasamtrust.org, ಇಮೇಲ್ :[email protected]

English summary
Masti Kallu Kannada Play loosely based the on Kota Shivaram Karanth’s evergreen novel Sarasammana Samadhi. The drama narrates how different women will behave in situations similar to Roopa Kanwar. Masti Kallu is Prakasam's 16th production written and directed by Giriraj BM will be stage on 23rd April at KEA Prabhath Rangamandira, Kamalanagar, Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X