ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನೀರು ಸಂರಕ್ಷಣೆಗೆ ಜಲಮಂಡಳಿಯ ಹೊಸ ತಂತ್ರ

By Vanitha
|
Google Oneindia Kannada News

ಬೆಂಗಳೂರು, ಜು. 01 : ನೀರು ಪೂರೈಕೆ ಹಾಗೂ ಸೋರಿಕೆ ಬೆಂಗಳೂರನ್ನು ತೀವ್ರತರವಾಗಿ ಕಾಡುತ್ತಿರುವ ಒಂದು ಬೃಹತ್ತಾದ ಸಮಸ್ಯೆ. ಇದನ್ನು ನಿವಾರಿಸಲು ನೀರು ಪೂರೈಕೆ ಮತ್ತು ಒಳಚರಂಡಿ ಮಂಡಳಿ ಒಂದು ಉತ್ತಮ ಯೋಜನೆ ರೂಪಿಸಿ ಕಾರ್ಯಗತಗೊಳಿಸಲು ಮುಂದಾಗಿದೆ.

ನಾಗರೀಕ ಪ್ರತಿನಿತ್ಯ 38 %ನಷ್ಟು ನೀರಿನ ಪೂರೈಕೆಯಾಗುತ್ತದೆ ಮತ್ತು ಸುಮಾರು 1,375 ಎಮ್‌ಎಲ್‌ಡಿ (million litres per day) ನೀರು ಅನಾವಶ್ಯಕ ಸೋರಿಕೆಯಾಗುತ್ತದೆ. ಇದನ್ನು ಉತ್ತಮ ನಿರ್ವಹಣೆ ಮೂಲಕ ನಿವಾರಿಸಲು ಸಾಧ್ಯ ಎಂದು ನಿರ್ಧರಿಸಿದ ನೀರು ಪೂರೈಕೆ ಮತ್ತು ಒಳಚರಂಡಿ ಮಂಡಳಿ ಈ ಸಮಸ್ಯೆಗೆ ಸಂಬಂಧಿಸಿದಂತೆ ಮಾತ್ರವಲ್ಲ ಅಭಿವೃದ್ಧಿ ಚೌಕಟ್ಟಿಗೆ ಸಂಬಂಧಿಸಿದ ಆಸ್ತಿ, ನೆಲಮಟ್ಟದ ಜಲಾಶಯಗಳು ಹಾಗೂ ಒಳಚರಂಡಿ ಘಟಕಗಳಲ್ಲೂ ವಿಭಿನ್ನ ಬದಲಾವಣೆ ತರಲು ಪ್ರಯತ್ನ ಮಾಡುತ್ತಿದೆ.

Master plan to help BWSSB save water

2003 ರಲ್ಲಿ, ಮಂಡಳಿಯು 2025 ರ ಹೊತ್ತಿಗೆ ಬೆಂಗಳೂರು ನೀರು ಪೂರೈಕೆ ಮತ್ತು ಪರಿಸರ ನೈರ್ಮಲೀಕರಣ ಯೋಜನೆಗೆ ಸಂಬಂಧಪಟ್ಟಂತೆ, ಆಸ್ಟ್ರೇಲಿಯಾ ಏಜೆನ್ಸಿ ಫಾರ್ ಇಂಟರ್ ನ್ಯಾಷನಲ್ ಡೆವಲಪ್ ಮೆಂಟ್ ನ ಪ್ರಾಯೋಜಕತ್ವದಲ್ಲಿ ಯೋಜನೆ ತಯಾರಿಸಿತ್ತು. ಈ ಯೋಜನೆಗೆ ಸುಮಾರು 11 ಕೋಟಿ ರೂ ವೆಚ್ಚ ತಗುಲಲಿದ್ದು, 2016 ರ ಆಗಸ್ಟ್ ಕ್ಕೆ ಅನುಷ್ಠಾನಗೊಳ್ಳುವ ಸಾಧ್ಯತೆ ಇದೆ ಎಂದು ಬಿಡಬ್ಲ್ಯೂಎಸ್ಎಸ್ ಬಿ ಯ ಎಕ್ಸಿಕ್ಯೂಟಿವ್ ಇಂಜಿನಿಯರ್ ಪಿ.ಎನ್ ರವೀಂದ್ರ ಯೋಜನೆಯ ಮಾಹಿತಿ ನೀಡಿದ್ದಾರೆ.

ಇತ್ತೀಚೆಗಷ್ಟೇ ಸಿಂಗಪೂರಿನ ಸಿಎಚ್2ಎಮ್ ಹಿಲ್ ಎಂಬ ಕಂಪನಿ ಯೋಜನೆ ರೂಪಿಸಲು ಮುಂದಾಗಿದೆ. ಈ ಹೊಸ ಯೋಜನೆ ವಿಶ್ವಾಸಾರ್ಹ ಹಾಗೂ ಸುಸ್ಥಿರವಾದುದಾಗಿರುವುದಲ್ಲದೇ, ಪರಿಣಾಮಕಾರಿ ಬಂಡವಾಳ ಹೂಡಿಕೆಗೆ ಸಹಾಯಕವಾಗಲಿದೆ ಎಂದು ತಿಳಿಸಿದ್ದಾರೆ.ಅಲ್ಲದೇ ನೀರು ಸಂರಕ್ಷಣೆ , ಪುನರ್ಬಳಕೆ, ಮಳೆನೀರು ಕೊಯ್ಲು ಈ ಎಲ್ಲಾ ಪರಿಸರ ಸ್ನೇಹಿ ಕಾರ್ಯಕ್ಕೆ ಇದು ನೆರವಾಗಲಿದೆ ಎಂದು ಹೇಳಿದ್ದಾರೆ.

English summary
The bwssb have decided to solve the water supply and water leakages. This project cost over Rs. 11 crore would be ready for implementation by August 2016.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X