ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪರಿಸರಕ್ಕಾಗಿ ಕಾಪ್ ರೆಡ್ಡಿ ಹಾಗೂ ಕ್ರಿಕೆಟರ್ ಕರುಣ್ ನಿಂದ ಸೈಕಲ್‍ಥಾನ್

By Mahesh
|
Google Oneindia Kannada News

ಬೆಂಗಳೂರು, ಜೂನ್ 07: ದಕ್ಷಿಣ ಭಾರತದ ಪ್ರೀಮಿಯಮ್ ಮಾಲ್ ಆಗಿರುವ ಮಂತ್ರಿ ಸ್ಕ್ವೇರ್ ಪರಿಸರ ಸಂರಕ್ಷಣೆ ಸಂದೇಶ ಸಾರಲು ಸೈಕಲ್‍ಥಾನ್ ಹಮ್ಮಿಕೊಂಡಿತ್ತು. "ಪರಿಸರಕ್ಕಾಗಿ ಅಂಬೆಗಾಲು- ಸಸ್ಯಕ್ಕಾಗಿ ಪೆಡಲ್' (ದಿ ಎನ್ವಿರಾನ್‍ಮೆಂಟ್ ಕ್ರಾಲ್- ಪೆಡಲ್ ಫಾರ್ ದ ಪ್ಲಾನೆಟ್) ಹೆಸರಿನಲ್ಲಿ ಆಯೋಜಿಸಿದ್ದ ಸೈಕಲ್‍ಥಾನ್ ನಲ್ಲಿ ಬೆಂಗಳೂರಿನ ಕ್ರಿಕೆಟಿಗ ಕರುಣ್ ನಾಯರ್ ಸೇರಿದಂತೆ 100ಕ್ಕೂ ಹೆಚ್ಚು ಸೈಕಲ್ ಸವಾರರು ಪಾಲ್ಗೊಂಡಿದ್ದರು.

ಮಂತ್ರಿ ಸ್ಕ್ವೇರ್ ನಲ್ಲಿ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಮೊದಲ ಚೆಕ್ ಪೋಸ್ಟ್ ಆಗಿ ಮಲ್ಲೇಶ್ವರದ 18ನೇ ಕ್ರಾಸ್ ನ ಸರ್ಕಾರಿ ಪದವಿ ಪೂರ್ವ ವಿವಿ ಕಾಲೇಜು ಬಳಿ ತೆರಳಲಾಯಿತು. ಇಲ್ಲಿ ಶೇಷಾದ್ರಿಪುರ ಚಾರಿಟೆಬಲ್ ಟ್ರಸ್ಟ್ ಅನಾಥಾಶ್ರಮದ ಮಕ್ಕಳ ಜತೆ ಸೇರಿ ಗಿಡಗಳನ್ನು ನೆಡಲಾಯಿತು. ನಂತರದ ಇಸ್ಕಾನ್ ದೇವಾಲಯ ಸಮೀಪದ ಪಿಟ್ ಸ್ಟಾಪ್‍ಬಳಿ ಗಿಡ ನೆಡಲಾಯಿತು.

Mantri Square Celebrates World Environment Day with -“The Environment Crawl- Pedal for the Planet”

ಕೊನೆಯ ನಿಲ್ದಾಣ ಮಂತ್ರಿ ಸ್ಕ್ವೇರ್ ನ ಆಯತಾಕಾರದ ಪಾರ್ಕ್. ಮಾಲ್ ಎದುರಿಗೇ ಇರುವ ಈ ಪಾರ್ಕ್‍ನಲ್ಲಿನ ಗಿಡಗಳಿಗೆ ಭಾಗವಹಿಸಿದ್ದವರೆಲ್ಲಾ ನೀರೆರೆದರು.

ಮಂತ್ರಿ ಸ್ಕ್ವೇರ್‍ನ ಮಾಲ್ ವ್ಯವಸ್ಥಾಪನೆ ವಿಭಾಗದ ಮುಖ್ಯಸ್ಥ ಮಿ. ಮಜದ್ ಮಸ್ಹಫೀಜ್: ಈ ಹಿಂದೆ ಬೆಂಗಳೂರು ನಗರ ಉದ್ಯಾನನಗರಿ ಎಂದು ಕರೆಸಿಕೊಂಡಿತ್ತು. ಆದರೆ, ಇಂದು ತನ್ನ ಹಸಿರನ್ನು ಕಳೆದುಕೊಳ್ಳುತ್ತಿದೆ. ನಾವು ಮಂತ್ರಿ ಸ್ಕ್ವೇರ್ ಮೂಲಕ ಪರಿಸರ ಸಂರಕ್ಷಣೆಯ ಮಹತ್ವವನ್ನು ಸಾರುವ ಜವಾಬ್ದಾರಿಯನ್ನು ವಹಿಸಿಕೊಂಡಿದ್ದೇವೆ. ಅಲ್ಲದೇ ನಗರದ ಕಾರ್ಬನ್ ಹೆಜ್ಜೆಗುರುತನ್ನು ಅಳಿಸಹಾಕಲು ಸಹಕರಿಸುವಂತೆ ಪ್ರತಿಯೊಬ್ಬರ ಬಳಿಯೂ ತೆರಳಿ ಮನವಿ ಮಾಡುತ್ತೇವೆ.

ಈ ಒಂದು ಸಾಮಾಜಿಕ ಕಳಕಳಿಯುಳ್ಳ ಹೆಜ್ಜೆಯನ್ನು ಅತ್ಯಂತ ಹೆಮ್ಮೆಯಿಂದ ಇಂದು ಇಡುತ್ತಿದ್ದೇವೆ. ಈ ಕಾರ್ಯಕ್ಕೆ ನಮಗೆ ಕ್ರಿಕೇಟಿಗ ಕರುಣ್ ನಾಯರ್ ಸಹಕಾರ ಸಿಕ್ಕಿದ್ದಕ್ಕೆ ಆಬಾರಿಯಾಗಿದ್ದೇವೆ. ಈ ಕಾರ್ಯವನ್ನು ತಮ್ಮ ಒಂದು ಭಾಗವಾಗಿ ಸ್ವೀಕರಿಸಿ ಇಷ್ಟೊಂದು ಯಶಸ್ವಿಯಾಗಿಸಿಕೊಟ್ಟಿದ್ದಾರೆ ಎಂದರು.

ಪರಿಸರಕ್ಕಾಗಿ ಕಾಪ್ ಹಾಗೂ ಕರುಣ್ ನಿಂದ ಸೈಕಲ್‍ಥಾನ್

ಪರಿಸರ ಸಂರಕ್ಷಣೆಯನ್ನು ದೀರ್ಘಾವಧಿಗೆ ವಿಸ್ತರಿಸುವ ಉದ್ದೇಶದಿಂದ ಸಾರ್ವಜನಿಕ ವಲಯದಲ್ಲಿ ಜಾಗೃತಿ ಮೂಡಿಸಲು ಈ ಸೈಕಲ್‍ಥಾನ್ ಹಮ್ಮಿಕೊಂಡಿದ್ದೇವೆ. ದಿನದಿಂದ ದಿನಕ್ಕೆ ಬದಲಾಗುತ್ತಿರುವ ವಾತಾವರಣ ವೈಪರಿತ್ಯ ಪರಿಹರಿಸಲು ಜತೆಯಾಗಿ ಕೈಜೋಡಿಸುವ ಕಾರ್ಯಕ್ಕೆ ಚಾಲನೆ ನೀಡಿದ್ದೇವೆ.

ಮಂತ್ರಿ ಸ್ಕ್ವೇರ್ ಕುರಿತು: ದೇಶದ ಅತ್ಯಂತ ದೊಡ್ಡ ಶಾಪಿಂಗ್ ಮಾಲ್ ಗಳಲ್ಲಿ ಮಂತ್ರಿ ಸ್ಕ್ವೇರ್ ಕೂಡ ಒಂದು. ಶಾಪಿಂಗ್ ಹಾಗೂ ಮನರಂಜನೆಯ ಒಂದು ಕೇಂದ್ರವಾಗಿ ಬೆಂಗಳೂರಿಗರಿಗೆ ಲಭಿಸಿದೆ. 250ಕ್ಕೂ ಹೆಚ್ಚು ಚಿಲ್ಲರೆ ಮಳಿಗೆಗಳನ್ನು ಒಳಗೊಂಡು ಚಿಲ್ಲರೆ ಮಳಿಗೆಗಳ ಕೇಂದ್ರ ಅನ್ನಿಸಿಕೊಂಡಿದೆ. ಒಟ್ಟು 38 ವಿಧದ 10 ಸಾವಿರಕ್ಕೂ ಹೆಚ್ಚು ಬ್ರಾಂಡ್ ಗಳು ಇಲ್ಲಿ ಶಾಪಿಂಗ್ ಪ್ರಿಯರ ಮನ ತಣಿಸುತ್ತವೆ. ಕರ್ನಾಟಕ ರಾಜ್ಯದ ರಾಜಧಾನಿ ಬೆಂಗಳೂರಿನ ಪ್ರಮುಖ ಭಾಗದಲ್ಲಿ ಒಂದಾಗಿರುವ ಮಲ್ಲೇಶ್ವರದಲ್ಲಿ ಮಂತ್ರಿ ಸ್ಕ್ವೇರ್ ಸ್ಥಾಪಿತವಾಗಿದೆ.

English summary
South India’s premium mall, Mantri Square, hosted a cyclathon today to spread the message for a sustainable environment. The initiative - “The Environment Crawl – Pedal for the planet”, witnessed over 100 cycling enthusiasts along with Indian cricketer and Bangalorean Karun Nair.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X