ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಾಪಿಂಗ್ ಪ್ರಿಯರಿಗೆ ಸಿಹಿ ಸುದ್ದಿ: ಮಂತ್ರಿ ಮಾಲ್ ಪುನರಾರಂಭ

ಕಳೆದ ತಿಂಗಳ 16ರಂದು ಮಾಲ್ ನ ಹಿಂಬದಿಯ ಗೋಡೆ ಉರುಳಿದ್ದರಿಂದಾಗಿ ಮಾಲ್ ಅನ್ನು ಮುಚ್ಚಲಾಗಿತ್ತು. ಇದೀಗ, ಕೆಲವಾರು ಷರತ್ತುಗಳನ್ವಯ ಮಾಲ್ ಪುನರಾರಂಭಿಲಾಗಿದೆ ಎಂದು ಮೂಲಗಳು ತಿಳಿಸಿವೆ.

|
Google Oneindia Kannada News

ಬೆಂಗಳೂರು, ಫೆಬ್ರವರಿ 25: ಹಿಂಬದಿಯ ಗೋಡೆ ಕುಸಿತದ ಕಾರಣದಿಂದಾಗಿ ಕೆಲ ದಿನಗಳಿಂದ ಮುಚ್ಚಿದ್ದ ಮಂತ್ರಿ ಮಾಲ್ ಶುಕ್ರವಾರ ಪುನರಾರಂಭಗೊಂಡಿದೆ.

ಕಳೆದ ತಿಂಗಳ 16ರಂದು ಮಾಲ್ ನ ಹಿಂಬದಿಯ ಗೋಡೆಯೊಂದು ಕುಸಿದುಬಿದ್ದು, ಲಕ್ಷ್ಮಮ್ಮ ಎಂಬ ಮಾಲ್ ನ ಹೌಸ್ ಕೀಪಿಂಗ್ ಸಿಬ್ಬಂದಿ ಗಾಯಗೊಂಡಿದ್ದರು. ಅಂದಿನಿಂದ ಭದ್ರತೆಯ ಹಿನ್ನೆಲೆಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು (ಬಿಬಿಎಂಪಿ) ಮಾಲ್ ಮುಚ್ಚುವಂತೆ ಆದೇಶ ನೀಡಿತ್ತು.[ಬೆಂಗಳೂರು ಮಂತ್ರಿ ಮಾಲ್ ನಲ್ಲಿ ಗೋಡೆ ಕುಸಿತ: ಕೆಲವರಿಗೆ ಗಾಯ]

Mantri Square of Bengaluru re-opened on Feb 25th

ಶನಿವಾರ ಸಂಜೆ 6 ಗಂಟೆ ಸುಮಾರಿಗೆ ಮಂತ್ರಿ ಮಾಲ್ ಪುನರಾರಂಭಗೊಂಡಿದೆ. ಈ ಹಿನ್ನೆಲೆಯಲ್ಲಿ ತಮ್ಮನ್ನು ಸಂಪರ್ಕಿಸಿದ ಒನ್ ಇಂಡಿಯಾಕ್ಕೆ ವಿವರಣೆ ನೀಡಿರುವ ಮಾಲ್ ನ ಸಿಬ್ಬಂದಿ, ''ಶನಿವಾರ ಸಂಜೆ ಮಾಲ್ ಆರಂಭವಾಗಿದ್ದು, ಎಂದಿನಂತೆ ಮುಂದೆಯೂ ಕಾರ್ಯ ನಿರ್ವಹಿಸಲಿದೆ. ಶನಿವಾರ ಮಾಲ್ ನಲ್ಲಿರುವ ಸುಮಾರು ಅರ್ಧಕ್ಕರ್ಧ ಮಳಿಗೆಗಳು ಮಾತ್ರ ತೆರೆದಿವೆ. ಭಾನುವಾರದಿಂದ (ಫೆ. 26) ಎಲ್ಲಾ ಮಳಿಗೆಗಳೂ ಎಂದಿನಂತೆ ಕಾರ್ಯಾರಂಭ ಮಾಡಲಿವೆ'' ಎಂದು ಹೇಳಿದ್ದಾರೆ.

ಹಲವಾರು ಶಾಪಿಂಗ್ ಪ್ರಿಯರಿಗೆ, ಕಾಲೇಜು ವಿದ್ಯಾರ್ಥಿಗಳಿಗೆ, ಯುವ ಪ್ರೇಮಿಗಳಿಗೆ ಟೈಮ್ ಪಾಸ್ ಮಾಡುವ ಅತ್ಯುತ್ತಮ ತಾಣವೆಂದೇ ಪರಿಗಣಿಸಲ್ಪಟ್ಟಿರುವ ಮಂತ್ರಿ ಮಾಲ್ ಬಂದ್ ಆಗಿದ್ದು ಹಲವರಲ್ಲಿ ಬೇಸರ ತರಿಸಿದ್ದೂ ಉಂಟು. ಅಲ್ಲದೆ, ಅಲ್ಲಿನ ಶಾಪ್ ಮಾಲೀಕರು ವ್ಯಾಪಾರವಿಲ್ಲದೆ ಕೊಂಚ ಕಷ್ಟಪಟ್ಟಿದ್ದೂ ಉಂಟು.

ಈಗ, ಈ ಮಾಲ್ ಆರಂಭವಾಗಿದ್ದು ಎಂದಿನಂತೆ ಕಾರ್ಯ ನಿರ್ವಹಿಸಲಿದೆ.

English summary
The renowned Shopping Mall of Bengaluru 'Mantri Square' has reopened on February 25th, after 40 days. On January 16th, the mall was closed due to the security reasons after a rear wall was collapsed on that day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X