ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಲ್ಲೆ ಪ್ರಕರಣ, ಸಿಎಂ ಜೊತೆ ರಾಜನಾಥ್ ಮಾತುಕತೆ

|
Google Oneindia Kannada News

ಬೆಂಗಳೂರು, ಅ. 17 : ಮಣಿಪುರ ಮೂಲದ ಎಂಜಿನಿಯರಿಂಗ್ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ ಆರೋಪಿಗಳನ್ನು ರೌಡಿ ಪಟ್ಟಿ ಸೇರಿಸಲು ಬೆಂಗಳೂರು ಪೊಲೀಸರು ಮುಂದಾಗಿದ್ದಾರೆ. ಈಶಾನ್ಯ ರಾಜ್ಯ ವಿದ್ಯಾರ್ಥಿ­ಗಳ ಮೇಲೆ ನಡೆದಿರುವ ಹಲ್ಲೆ ಸಂಬಂಧ ಕೇಂದ್ರ ಗೃಹ ಸಚಿವ ರಾಜ­ನಾಥ್‌ ಸಿಂಗ್‌ ಸಿಎಂ ಸಿದ್ದ­ರಾಮಯ್ಯ ಅವ­ರಿಗೆ ಕರೆ ಮಾಡಿ, ಮಾಹಿತಿ ಪಡೆದುಕೊಂಡಿದ್ದಾರೆ.

ಗುರುವಾರ ಹಲ್ಲೆಗೊಳಗಾದ ಮಣಿಪುರ ವಿದ್ಯಾರ್ಥಿ ಮೈಕಲ್‌ ಲಮ್ತಾಂಗ್ ಅವರನ್ನು ತಮ್ಮ ಕಚೇರಿಯಲ್ಲಿ ಭೇಟಿ ಮಾಡಿದ ನಗರ ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ ಅವರು, ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡರು. ಆರೋಪಿಗಳು ಸಾರ್ವಜನಿಕ ಸ್ಥಳದಲ್ಲಿ ದಾಂದಲೆ ಮಾಡಿ ವಿದ್ಯಾರ್ಥಿ­ಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಮೂಲಕ ಇತರರಲ್ಲೂ ಭಯದ ವಾತಾವರಣ ನಿರ್ಮಾಣ ಮಾಡಿದ್ದಾರೆ ಎಂದು ತಿಳಿಸಿದರು.

Manipur

ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅರುಣ್‌ ­ಕುಮಾರ್‌ (26), ಜೇಮ್ಸ್‌ (23) ಮತ್ತು ಕರುಣಾಕರ್‌ (25) ಅವರನ್ನು ಬಂಧಿಸಿದ್ದು, ಅವರ ವಿರುದ್ಧ ಸಿಆರ್‌ಪಿಸಿ 107 ಅಡಿ ಪ್ರಕರಣ ದಾಖಲಿಸಿ, ಕೊತ್ತನೂರು ಠಾಣೆಯಲ್ಲಿ ರೌಡಿ ಪಟ್ಟಿ ತೆರೆಯಲಾ­ಗುವುದು. ಹಿಂದೆ ಆರೋಪಿಗಳು ಯಾವುದಾ­ದರೂ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದರೇ ಎಂಬ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಹೇಳಿದರು. [ವಿದ್ಯಾರ್ಥಿ ಹಲ್ಲೆ ಆರೋಪಿಗಳು ಅಂದರ್]

ದೆಹಲಿ ಹೊರತುಪಡಿಸಿದರೆ ಬೆಂಗಳೂರಿನಲ್ಲಿ ಹೆಚ್ಚಿನ ಸಂಖ್ಯೆಯ ಈಶಾನ್ಯ ಭಾರತೀಯರು ನೆಲೆಸಿದ್ದಾರೆ. ಇದು ಸುರಕ್ಷಿತ ನಗರ ಎಂಬ ಕಾರಣಕ್ಕೆ ಹೊರ ರಾಜ್ಯದಿಂದ ಬರುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಹೊರ ರಾಜ್ಯದವರ ರಕ್ಷಣೆ ಬಗ್ಗೆ ವಿಶೇಷ ಕಾಳಜಿ ವಹಿಸಲಾಗುತ್ತಿದೆ ಎಂದು ಎಂ.ಎಸ್.ರೆಡ್ಡಿ ಅವರು ತಿಳಿಸಿದರು.

ಮಣಿಪುರ, ಅಸ್ಸಾಂ ಸೇರಿದಂತೆ ಈಶಾನ್ಯ ರಾಜ್ಯದವರು ನೆಲೆಸಿರುವ ಸ್ಥಳಗಳಲ್ಲಿ ಶಾಂತಿ ಸಭೆಗಳನ್ನು ನಡೆಸುವಂತೆ ಎಲ್ಲ ವಿಭಾಗಗಳ ಡಿಸಿಪಿಗಳಿಗೂ ಸೂಚನೆ ನೀಡಲಾಗಿದೆ ಎಂದು ಕಾನೂನು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಮಾಹಿತಿ ಪಡೆದ ಕೇಂದ್ರ ಸಚಿವ : ಈಶಾನ್ಯ ರಾಜ್ಯ ವಿದ್ಯಾರ್ಥಿ­ಗಳ ಮೇಲೆ ನಡೆದಿರುವ ಹಲ್ಲೆ ನಡೆದ ಪ್ರಕರಣಕ್ಕೆ ಸಂಬಂಧಿಸಂತೆ ಕೇಂದ್ರ ಗೃಹ ಸಚಿವ ರಾಜ­ನಾಥ್‌ ಸಿಂಗ್‌ ಗುರು­ವಾರ ಮುಖ್ಯಮಂತ್ರಿ ಸಿದ್ದ­ರಾಮಯ್ಯ ಅವ­ರಿಗೆ ದೂರವಾಣಿ ಕರೆ ಮಾಡಿ, ಮಾಹಿತಿ ಪಡೆದುಕೊಂಡಿದ್ದಾರೆ. ತಪ್ಪಿ­ತಸ್ಥರ ವಿರುದ್ಧ ಕಠಿಣ ಕ್ರಮಕೈಗೊ­ಳ್ಳುವಂತೆ ಸೂಚಿಸಿದ್ದಾರೆ.

English summary
A northeast Indian student attacked in Bangalore, Home Minister Rajnath Singh on Thursday, in a telephonic conversation with CM Siddaramaiah, said that there should be no discrimination against anyone on the basis of caste, creed and sect.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X