ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಣಿಪುರ ವಿದ್ಯಾರ್ಥಿ ಹಲ್ಲೆ ಆರೋಪಿಗಳು ಅಂದರ್

By Mahesh
|
Google Oneindia Kannada News

ಬೆಂಗಳೂರು, ಅ.15: ಮಣಿಪುರ ಮೂಲದ ವಿದ್ಯಾರ್ಥಿ ಸೇರಿದಂತೆ ಮೂವರ ಮೇಲೆ ಹಲ್ಲೆ ಮಾಡಿದ್ದ ಆರೋಪಿಗಳನ್ನು ಘಟನೆ ನಡೆದ ಕೆಲ ಗಂಟೆಗಳಲ್ಲೇ ಬೆಂಗಳೂರಿನ ಪೊಲೀಸರು ಬಂಧಿಸಿದ್ದಾರೆ.

ಮಂಗಳವಾರ ರಾತ್ರಿ ಕೊತ್ತನೂರು ಬಸ್ ನಿಲ್ದಾಣದ ಬಳಿ ಥಡೊವ್ ವಿದ್ಯಾರ್ಥಿ ಸಂಘಟನೆ ಮುಖಂಡ ಮೈಕಲ್ ಲಾಜಾಥಾಂಗ್ ಸೇರಿದಂತೆ ಮೂವರ ಮೇಲೆ ಮೂವರು ಕುಡುಕರು ಹಲ್ಲೆ ನಡೆಸಿದ ಘಟನೆ ನಡೆದಿತ್ತು.

Three arrested Manipur student attack in Bangalor

ಈ ಸಂಬಂಧ ಕೊತ್ತನೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಎಫ್ ಐಆರ್ ದಾಖಲಿಸಿಕೊಂಡಿದ್ದರು. ಬುಧವಾರ ಮಧ್ಯಾಹ್ನದ ವೇಳೆಗೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಹೇಳಿದ್ದಾರೆ.

ಏನಿದು ಪ್ರಕರಣ:
ಕೊತ್ತನೂರು ಬಸ್ ನಿಲ್ದಾಣದ ಬಳಿ ರಸ್ತೆ ಬದಿ ಆಹಾರ ಮಳಿಗೆಯಲ್ಲಿ ಮೈಕಲ್ ಹಾಗೂ ಇನ್ನಿಬ್ಬರು ಊಟ ಮಾಡುತ್ತಿದ್ದರು. ರಾತ್ರಿ 10.30 ಸುಮಾರಿಗೆ ಅಲ್ಲೇ ರಸ್ತೆ ಬದಿಯಲ್ಲಿ ಗುಂಪಿನಲ್ಲಿ ಒಂದಷ್ಟು ಜನ ಸ್ಥಳೀಯರು ನಿಂತಿದ್ದರು. ಇವರಿದ್ದ ಬಳಿಗೆ ಮೂವರು ಕುಡುಕರು ಬಂದಿದ್ದಾರೆ. ಮೈಕಲ್ ಹಾಗೂ ಸ್ನೇಹಿತರು ಮಣಿಪುರಿ ಭಾಷೆಯಲ್ಲಿ ಮಾತನಾಡುತ್ತಿದ್ದನ್ನು ಕಂಡು ಹತ್ತಿರಕ್ಕೆ ಬಂದವನ್ನೊಬ್ಬ ಮೈಕಲ್ ಸ್ನೇಹಿತನ ಕೆನ್ನೆ ಊದಿಸಿದ್ದಾನೆ.

ನಾವೇನು ನಿಮ್ಮ ಬಗ್ಗೆ ಮಾತನಾಡುತ್ತಿರಲಿಲ್ಲ ಎಂದು ಮಣಿಪುರಿಗಳು ವಾದಿಸಿದ್ದಾರೆ. ಮಾತಿಗೆ ಮಾತು ಬೆಳೆದಿದೆ. ಇಲ್ಲಿ ನೆಲೆಸಿರುವ ನೀವು ಕನ್ನಡದಲ್ಲಿ ಮೊದಲು ಮಾತನಾಡಿ ಆಮೇಲೆ ಮಿಕ್ಕಿದ್ದು ಮಾತನಾಡೋಣ ಎಂದು ಕೂಗಾಡಿದ್ದಾರೆ. ರಸ್ತೆ ಬದಿ ನಿಂತಿದ್ದ ಇನ್ನೂ ಕೆಲವರು ಬಂದು ಸೇರಿದ್ದಾರೆ.

ಈ ಸಂದರ್ಭದಲ್ಲಿ ಮೈಕಲ್ ಮೇಲೆ ಹಲ್ಲೆ ನಡೆದಿದೆ. ನಂತರ ಮಣಿಪುರಿಗಳು ಬೈಕ್ ಹತ್ತಿ ಅಲ್ಲಿಂದ ತಪ್ಪಿಸಿಕೊಂಡಿದ್ದಾರೆ. ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದು, ನಮ್ಮ ಮೇಲೆ ಹಲ್ಲೆ ಮಾಡಿದವರು ಚೆನ್ನಾಗಿ ಕುಡಿದಿದ್ದರು ನಾವು ಏನು ಹೇಳಿದರೂ ಅವರಿಗೆ ಅರ್ಥವಾಗುತ್ತಿರಲಿಲ್ಲ. ಕನ್ನಡದಲ್ಲಿ ಮಾತನಾಡಿ ಎಂದು ಪೀಡಿಸಿದರು ಎಂದು ದೂರಿನಲ್ಲಿ ಹೇಳಿದ್ದಾರೆ. ಈ ಬಗ್ಗೆ ಕ್ರಮ ಕೈಗೊಂಡಿರುವ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಮಣಿಪುರದ ವಿದ್ಯಾರ್ಥಿಗಳ ಮೇಲೆ ಹಲ್ಲೆ ಪ್ರಕರಣದ ಬಗ್ಗೆ ಬಾಕ್ಸರ್ ಮೇರಿ ಕೋಮ್ ಪ್ರತಿಕ್ರಿಯೆ:

English summary
Three persons were assaulted by a trio near Kothnur bus stand on Tuesday night. One of the victims is president of the Thadou Students’ Association Michael Lamjathang. The accused have been arrested,will take stringent action against them said Alok Kumar,Addtional Commissioner of Police.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X