ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶುಕ್ರವಾರದಿಂದ ಲಾಲ್‌ಬಾಗ್‌ನಲ್ಲಿ ಮಾವು, ಹಲಸು ಮೇಳ

|
Google Oneindia Kannada News

ಬೆಂಗಳೂರು, ಮೇ 28 : ಲಾಲ್‌ಬಾಗ್‌ ಮಾವು ಮತ್ತು ಹಲಸು ಮೇಳಕ್ಕೆ ಸಿದ್ಧವಾಗಿದೆ. ಮೇ 29ರಿಂದ ಮೇಳ ಆರಂಭವಾಗಲಿದ್ದು ಜೂ.27ರ ವರೆಗೆ 105 ಮಳಿಗೆಗಳಲ್ಲಿ ವಿವಿಧ ಬಗೆಯ ಮಾವು ಮತ್ತು ಹಲಸಿನ ಹಣ್ಣಗಳು ದೊರೆಯಲಿವೆ.

ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ಅಧ್ಯಕ್ಷೆ ಕಮಲಾಕ್ಷಿ ರಾಜಣ್ಣ ಬುಧವಾರ ಪತ್ರಿಕಾಗೋಷ್ಠಿ ಮೇಳದ ಬಗ್ಗೆ ಮಾಹಿತಿ ನೀಡಿದ್ದಾರೆ. ಮೇ 29ರ ಶುಕ್ರವಾರ ಬೆಳಗ್ಗೆ 11 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾವು ಮತ್ತು ಹಲಸು ಮೇಳಕ್ಕೆ ಚಾಲನೆ ನೀಡಲಿದ್ದಾರೆ ಎಂದರು. [ಹಣ್ಣುಗಳ ರಾಜನಿಗೆ ಸಿಕ್ತು ಪ್ರಧಾನಿ ಮೋದಿ ಹೆಸರು]

mango

ಅಲ್ಫಾನ್ಸೊ, ಬಾದಾಮಿ, ಬಂಗನಪಲ್ಲಿ, ರಸಪುರಿ, ಮಲ್ಲಿಕಾ, ಸೇಂಧೂರ, ಮಲಗೋವಾ, ತೋತಾಪುರಿ, ನೀಲಂ, ಆಮ್ರಪಾಲಿ ಸೇರಿದಂತೆ ವಿವಿಧ ಬಗೆಯ ಮಾವಿನ ತಳಿಗಳು. ಸ್ವರ್ಣ ಹಲಸು, ಲಾಲ್‌ಬಾಗ್ ಮಧುರಾ, ಭೈರಚಂದ್ರ, ತೂಬುಗೆರೆ, ಜಾಣಗೆರೆ, ಇಬ್ಬೀಡು ಸೇರಿದಂತೆ ವಿವಿಧ ಬಗೆಯ ಹಲಸಿನ ಹಣ್ಣುಗಳು ಮೇಳದಲ್ಲಿ ದೊರೆಯಲಿವೆ. [ಬೆಂಗಳೂರು : ಹಾಪ್ ಕಾಮ್ಸ್ ಮಾವು ಮೇಳಕ್ಕೆ ಚಾಲನೆ]

ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ, ರಾಜ್ಯ ತೋಟಗಾರಿಕೆ ಇಲಾಖೆ ಹಾಗೂ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಜಂಟಿಯಾಗಿ ಈ ಮೇಳವನ್ನು ಆಯೋಜಿಸಿವೆ. ಹಣ್ಣುಗಳ ಮಾರಾಟದ ಜೊತೆಗೆ ಮೇ 29ರಿಂದ ಜೂನ್ 4ರ ವರೆಗೆ ಮಾವು ಮತ್ತು ಹಲಸಿನ ಸಂಶೋಧನಾ ತಳಿಗಳ ವಿಶೇಷ ಪ್ರದರ್ಶನ ನಡೆಯಲಿದೆ.

ಕಳೆದ ವರ್ಷದ ಮೇಳದಲ್ಲಿ ಸುಮಾರು 800 ಟನ್ ಹಣ್ಣು ಮಾರಾಟವಾಗಿತ್ತು. ಈ ವರ್ಷ ಮಾವಿನ ಇಳುವರಿ ಕಡಿಮೆ ಇದ್ದು, ಮಾರಾಟ ಹೆಚ್ಚಾಗಬಹುದೆಂದು ಅಂದಾಜಿಸಲಾಗಿದೆ. ಒಟ್ಟು 100 ಮಳಿಗೆಗಳನ್ನು ತೆರಯಲಾಗಿದ್ದು, ಪ್ರತಿದಿನ ಹಣ್ಣಿನ ಗುಣಮಟ್ಟ ಮತ್ತು ಮಾರುಕಟ್ಟೆ ದರವನ್ನು ಪರಿಶೀಲಿಸಿ ಮೇಳದಲ್ಲಿನ ದರವನ್ನು ನಿಗದಿಪಡಿಸಲಾಗುತ್ತದೆ.

ಮೇಳದ ಸಮಯ : ಬೆಳಗ್ಗೆ 8 ರಿಂದ ಸಂಜೆ 7 ಗಂಟೆ

English summary
The department of Horticulture has organized the annual mango and jackfruit mela at Lalbagh, Bengaluru from May 29 to June 27.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X