ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೇಜರ್ ಅಕ್ಷಯ್ ಅಂತ್ಯಕ್ರಿಯೆಗೆ ಸಕಲ ಸಿದ್ಧತೆ

By Ananthanag
|
Google Oneindia Kannada News

ಬೆಂಗಳೂರು, ಡಿಸೆಂಬರ್ 1: ಜಮ್ಮುವಿನ ನಗ್ರೋಟಾದಲ್ಲಿ ಉಗ್ರರೊಂದಿಗೆ ಹೋರಾಡಿ ವೀರ ಮರಣವನ್ನಪ್ಪಿದ ಮೇಜರ್ ಅಕ್ಷಯ್ ಗಿರೀಶ್ ಕುಮಾರ್ ಅಂತ್ಯಕ್ರಿಯೆಗೆ ಬೆಂಗಳೂರಿನ ಹೆಬ್ಬಾಳ ಚಿತಾಗಾರದಲ್ಲಿ ಸಕಲ ಸಿದ್ದತೆ ನಡೆಸಲಾಗಿದೆ.ಗುರುವಾರ ಸಂಜೆ 3;30ಕ್ಕೆ ಸರ್ಕಾರಿ ಸಕಲ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ ನಡೆಯಲಿದೆ.

ಪ್ರಸ್ತುತ ಬೆಂಗಳೂರಿನ ಯಲಹಂಕ ಏರ್ ಪೋರ್ಟ್ ಗೆ ಮಧ್ಯಾಹ್ನ 11.30ಕ್ಕೆ ಮೇಜರ್ ಅಕ್ಷಯ್ ಅವರ ಮೃತ ದೇಹವನ್ನು ಸೇನಾ ವಿಮಾನ ನಿಲ್ದಾಣಕ್ಕೆ ತರಲಾಗಿದೆ. ಬೆಂಗಳೂರಿನ ವಾಯುನೆಲೆಯಲ್ಲಿ ಅಕ್ಷಯ್ ಪಾರ್ಥೀವ ಶರೀರಕ್ಕೆ ವಿವಿಧ ಅಧಿಕಾರಿಗಳಿಂದ ಅಂತಿಮ ನಮನ ನಡೆಯುತ್ತಿದ್ದು, ಅಧಿಕಾರಿಗಳು ಪುಷ್ಪಗುಚ್ಛ ಅರ್ಪಿಸಿದ್ದಾರೆ. [ಹುತಾತ್ಮ ಮೇಜರ್ ಅಕ್ಷಯ್: ಗುರುವಾರ ಬೆಂಗಳೂರಿನಲ್ಲಿ ಅಂತ್ಯಕ್ರಿಯೆ]

Major askhay girish kurmar funeral in hebbal crematoria

12.00 ಗಂಟೆಗೆ ಅಕ್ಷಯ್ ಅವರ ಮೃತದೇಹವನ್ನು ಅಕ್ಷಯ್ ನಿವಾಸ ಬೆಂಗಳೂರಿನ ಸಾದಳ್ಳಿ ಬಳಿ ಇರುವ ಜೇನ್ ಅಪಾರ್ಟ್ ಮೆಂಟ್ ತರಲಾಗುವುದು ನಂತರ ಅಲ್ಲಿ ಮೃತರ ಸಂಬಂಧಿಕರಗೆ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಲಾಗುವುದು.[ಜಮ್ಮು ಕಾಶ್ಮೀರದಲ್ಲಿ ದಾಳಿ: ಮೂವರು ಉಗ್ರರಿಗೆ ಚಿರಶಾಂತಿ]

Major askhay girish kurmar funeral in hebbal crematoria

೦2:00 ಗಂಟೆಗೆ ಸಾರ್ವಜನಿಕರು, ರಾಜಕೀಯ ಮುಖಂಡರು, ಅಧಿಕಾರಿಗಳು, ಅಭಿಮಾನಿಗಳಿಗೆ ದರ್ಶನ, ಅಂತಿಮ ನಮನಕ್ಕೆ ಅವಕಾಶ ಕಲ್ಪಿಸಿಕೊಡಲಾಗುವುದು.

೦3:00 ಗಂಟೆಗೆ ಸರ್ಕಾರಿ ಗೌರವದೊಂದಿಗೆ ಮೆರವಣಿಗೆಯಲ್ಲಿ ಹೊರಟು ಹೆಬ್ಬಾಳದ ಚಿತಾಗಾರದಲ್ಲಿ ಅಕ್ಷಯ್ ಮನೆತನದ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಯಲಿದೆ.

English summary
The major akshay girish kumar is dead terror attack near an army camp at Nagrota in Jammu and Kashmir. Thrusday Funeral is in hebbal Crematoria. The preparation is done.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X