ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಹಾಲಕ್ಷ್ಮೀ ಲೇಔಟ್‌, ಗೃಹಿಣಿ ಕೊಂದಿದ್ದು ಪತಿ

|
Google Oneindia Kannada News

ಬೆಂಗಳೂರು, ಅ.30 : ಮಹಾಲಕ್ಷ್ಮೀ ಲೇಔಟ್‌ನಲ್ಲಿ ಮಂಗಳವಾರ ಬೆಳ್ಳಂಬೆಳಗ್ಗೆ ನಡೆದಿದ್ದ ಮುತ್ತುಲಕ್ಷ್ಮೀ ಕೊಲೆ ಪ್ರಕರಣದ ಆರೋಪಿ ಸಿಕ್ಕಿಬಿದ್ದಿದ್ದಾನೆ. ದೈಹಿಕ ಸುಖ ನೀಡಲು ನಿರಾಕರಿಸುತ್ತಿದ್ದ ಪತ್ನಿಯನ್ನು ಕೊಲೆ ಮಾಡಿದ್ದ ಆಕೆಯ ಪತಿ ತಿಮ್ಮಯ್ಯ ಮೃತದೇಹದ ಮೇಲಿನ ಚಿನ್ನಾಭರಣವನ್ನು ದೋಚಿ ಪಾರ್ಕಿನಲ್ಲಿ ಎಸೆದು, ನಂತರ ಕೊಲೆಯ ಕತೆ ಕಟ್ಟಿದ್ದ.

ಶಂಕರನಗರದಲ್ಲಿ ಮಂಗಳವಾರ ಬೆಳಗ್ಗೆ ಗೃಹಿಣಿ ಮುತ್ತುಲಕ್ಷ್ಮೀ (52)ಯನ್ನು ಹತ್ಯೆಮಾಡಿದ್ದು ನಿವೃತ್ತ ಸರ್ಕಾರಿ ನೌಕರ ತಿಮ್ಮಯ್ಯ (62) ಎಂದು ಪೊಲೀಸರು ಹೇಳಿದ್ದು, ಆತನನ್ನು ಬಂಧಿಸಿದ್ದಾರೆ. ಮನೆ ಕಸ ಗುಡಿಸುತ್ತಿದ್ದ ತನ್ನ ಪತ್ನಿಯನ್ನು ಸರಗಳ್ಳರು ಕೊಂದು ಆಕೆಯ ಮೈಮೇಲಿದ್ದ ಒಡವೆಗಳನ್ನು ದೋಚಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದ ಪತಿಯೇ ಕೊಲೆಗಾರ ಎಂಬುದು ಒಂದೇ ದಿನದಲ್ಲಿ ಬಯಲಾಗಿದೆ.

Mahalakshmi Layout

ದೈಹಿಕ ಸುಖ ನೀಡುತ್ತಿರಲಿಲ್ಲ : ತಿಮ್ಮಯ್ಯ ಮತ್ತು ಪತ್ನಿ ಮುತ್ತುಲಕ್ಷ್ಮೀ ಒಂದೇ ಮನೆಯಲ್ಲಿ ವಾಸಿಸುತ್ತಿದ್ದರೂ ಅವರ ಸಂಬಂಧ ಮುರಿದುಬಿದ್ದು ಏಳು ವರ್ಷಗಳು ಕಳೆದಿತ್ತು. ಮಗಳ ಮದುವೆ ನಂತರ ಇಬ್ಬರ ಸಂಬಂಧ ಮತ್ತಷ್ಟು ಹದಗೆಟ್ಟಿತ್ತು. ತಿಮ್ಮಯ್ಯನ ಪಿಂಚಣಿ ಮತ್ತು ಮನೆ ಬಾಡಿಗೆಯಿಂದ ಜೀವನ ನಡೆಯುತ್ತಿತ್ತು. ಆದರೆ, ಸಣ್ಣ ಪುಟ್ಟ ವಿಚಾರಕ್ಕೂ ಇಬ್ಬರ ನಡುವೆ ಜಗಳ ನಡೆಯುತ್ತಿತ್ತು. [ಹಾಲು ತರಲು ಹೋದ ಮಹಿಳೆ ಕೊಲೆ]

ಪತಿ ತಿಮ್ಮಯ್ಯನಿಗೆ ದೈಹಿಕ ಸುಖ ನೀಡಲು ಮುತ್ತುಲಕ್ಷ್ಮೀ ನಿರಾಕರಿಸುತ್ತಿದ್ದಳು ಮತ್ತು ಚಿಕ್ಕಪುಟ್ಟ ವಿಷಯಕ್ಕೆ ಪತಿಯೊಂದಿಗೆ ಜಗಳವಾಡುತ್ತಿದ್ದಳು. ಸೋಮವಾರ ರಾತ್ರಿ ಹೀಗೆ ಆರಂಭವಾದ ಜಗಳ ಮುತ್ತುಲಕ್ಷ್ಮೀ ಕೊಲೆಯಲ್ಲಿ ಅಂತ್ಯವಾಗಿದೆ. ಸೋಮವಾರ ರಾತ್ರಿ ಮನೆಯ ಮಹಡಿ ಮೇಲಿಂದ ಮುತ್ತುಲಕ್ಷ್ಮೀಯನ್ನು ತಳ್ಳಿ ತಿಮ್ಮಯ್ಯ ಕೊಲೆ ಮಾಡಿದ್ದ. ನಂತರ ಪೊಲೀಸರಿಗೆ ದೂರು ನೀಡಿದ್ದ.

ಮಳೆ ಸಹಕಾರಿಯಾಯಿತು : ಮಂಗಳವಾರ ಬೆಳಗ್ಗೆ 6.15ರ ಸುಮಾರಿಗೆ ಮುತ್ತುಲಕ್ಷ್ಮೀ ಮೃತದೇಹ ಪತ್ತೆಯಾದರೂ ಆಕೆಯ ಕೊಲೆ ಸೋಮವಾರ ರಾತ್ರಿ ನಡೆದಿತ್ತು. ಸೋಮವಾರ ಜೋರು ಮಳೆ ಸುರಿಯುತ್ತಿತ್ತು. ಮನೆಯ ಮಹಡಿ ಮೇಲೆ ನೀರು ನಿಂತಿದೆ ನೋಡಿಕೊಂಡು ಬರೋಣ ಎಂದು ರಾತ್ರಿ 12ರ ಸುಮಾರಿಗೆ ಪತ್ನಿಯನ್ನು ಕರೆದುಕೊಂಡು ಹೋದ ತಿಮ್ಮಯ್ಯ ಮೂರನೇ ಮಹಡಿಯಿಂದ ಆಕೆಯನ್ನು ಕೆಳಕ್ಕೆ ತಳ್ಳಿದ್ದ.

ಚರಂಡಿಗೆ ಬಿದ್ದಳು : ಮುತ್ತುಲಕ್ಷ್ಮೀ ನೇರವಾಗಿ ಮನೆಯ ಮುಂದಿದ್ದ ಚರಂಡಿಗೆ ಬಿದ್ದಿದ್ದರಿಂದ ಕಸದ ರಾಶಿ ಮತ್ತು ಮಳೆಯ ಶಬ್ದದ ನಡುವೆ, ಆಕೆ ಬಿದ್ದ ಶಬ್ದ ಯಾರಿಗೂ ಕೇಳಿರಲಿಲ್ಲ. ತಿಮ್ಮಯ್ಯ ಚರಂಡಿಯಲ್ಲಿ ಬಿದ್ದಿದ್ದ ಪತ್ನಿಯ ಶವವನ್ನು ಹೊರಗೆ ತೆಗೆದು ರಸ್ತೆಯಲ್ಲಿ ಮಲಗಿಸಿ ಸೆರಗಿನಿಂದ ಆಕೆಯ ಮುಖವನ್ನು ಮುಚ್ಚಿ ಮೈಮೇಲಿದ್ದ ಸರ ಮತ್ತು ಒಡವೆಗಳನ್ನೆಲ್ಲಾ ಬಿಚ್ಚಿಕೊಂಡು ಮನೆಗೆ ಹೋಗಿ ಮಲಗಿದ್ದ.

ಪಾರ್ಕಿನಲ್ಲಿ ಚಿನ್ನಾಭರಣ ಎಸೆದ : ಬೆಳಗ್ಗೆ ಕೊಲೆಯ ಕತೆ ಕಟ್ಟಿದ ತಿಮ್ಮಯ್ಯ ಪತ್ನಿಯ ಚಿನ್ನಾಭರಣವನ್ನು ಪಾರ್ಕಿನಲ್ಲಿ ಎಸೆದು ಪತ್ನಿ ಕೊಲೆಯಾಗಿದ್ದಾಳೆ ಎಂದು ಸ್ಥಳೀಯರನ್ನು ನಂಬಿಸಿದ್ದ ಮತ್ತು ಪೊಲೀಸರಿಗೂ ಈ ಕುರಿತು ದೂರು ನೀಡಿದ್ದ.

ಸಿಕ್ಕಿಬಿದ್ದಿದ್ದು ಹೇಗೆ : ಪತ್ನಿ ಕೊಲೆಯ ಬಗ್ಗೆ ತಿಮ್ಮಯ್ಯ ಒಂದೊಂದು ಟಿವಿ ವಾಹಿನಿಗೆ ಒಂದೊಂದು ರೀತಿ ಹೇಳಿಕೆ ನೀಡಿದ್ದ. ಮುತ್ತುಲಕ್ಷ್ಮೀ ಮರಣೋತ್ತರ ಪರೀಕ್ಷೆಯಲ್ಲಿ ಕೊಲೆ ನಡೆದು ಆರು ಗಂಟೆಗಳಾಗಿವೆ ಎಂಬ ಮಾಹಿತಿ ಲಭ್ಯವಾಗಿತ್ತು. ಇದರಿಂದ ಪತಿಯ ಮೇಲೆ ಸಂಶಯಗೊಂಡ ಪೊಲೀಸರು ಆತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಕೊಲೆ ಪ್ರಕರಣವನ್ನು ಪತ್ತೆ ಹಚ್ಚಿದ ಡಿಸಿಪಿ ಸುರೇಶ್ ಹಾಗೂ ಇನ್ಸ್‌ಪೆಕ್ಟರ್ ಶ್ರೀಧರ್ ತಂಡದ ಕಾರ್ಯಕ್ಷಮತೆಯನ್ನು ನಗರ ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ ಶ್ಲಾಘಿಸಿದ್ದಾರೆ.

English summary
The death of a woman on the street in mahalakshmi layout police station limits in the early hours of Tuesday, has taken a shocking turn after investigation. The police solved the murder case of Muddu Lakshmi (52) and arrested her husband Thimmanna a retired KEB employee, for the killing wife.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X