ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಫೆಬ್ರವರಿ 5ರಂದು ಉತ್ತರಾದಿ ಮಠದಲ್ಲಿ ಶ್ರದ್ಧಾ-ಭಕ್ತಿಯ ಮಧ್ವ ನವಮಿ

By ಅನಿಲ
|
Google Oneindia Kannada News

ಬೆಂಗಳೂರು, ಫೆಬ್ರವರಿ 4: ಮಧ್ವನವಮಿ ಅಂಗವಾಗಿ ಭಾನುವಾರ (ಫೆಬ್ರವರಿ 5) ಬೆಂಗಳೂರಿನ ನಾರ್ಥ್ ರೋಡ್ ನಲ್ಲಿರುವ ಉತ್ತರಾದಿ ಮಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ 6ಕ್ಕೆ ಮಧ್ವ ವಿಜಯ ಪಾರಾಯಣ ಮತ್ತು ಪ್ರಾಣ ದೇವರಿಗೆ ಸ್ವಾಮೀಜಿಯಿಂದ ಮಧು ಅಭಿಷೇಕ ನಡೆಯಲಿದೆ.

ಬೆಳಗ್ಗೆ 8ರ ನಂತರ ಗಾಯತ್ರಿ ಹಾಗೂ ರಾಮನಾಮ ಜಪ ಯಜ್ಞ ನಡೆಯಲಿದೆ. ಬೆಳಗ್ಗೆ 9.30ಕ್ಕೆ ಮಧಾಚಾರ್ಯರು ರಚಿಸಿದ ಸರ್ವಮೂಲ ಗ್ರಂಥಗಳ ಮೆರವಣಿಗೆಯನ್ನು ಆಯೋಜಿಸಲಾಗಿದೆ. ಬೆಳಗ್ಗೆ 11ಕ್ಕೆ ಸಂಸ್ಥಾನ ಪೂಜೆಯು ನಡೆಯಲಿದೆ. ಸಂಜೆ 6ರ ನಂತರ ವಿವಿಧ ಪಂಡಿತರಿಂದ ಪ್ರವಚನ ನಡೆಯಲಿದೆ. ಈ ಎಲ್ಲ ಕಾರ್ಯಕ್ರಮದ ಪೂರ್ವ ತಯಾರಿ ಬಗ್ಗೆ ಶನಿವಾರ (ಫೆಬ್ರವರಿ 4) ಉತ್ತರಾದಿ ಮಠದಲ್ಲಿ ಸಭೆ ನಡೆದಿದೆ.[ಮಧ್ವಾಚಾರ್ಯರ ಬಗ್ಗೆ ತಪ್ಪು ಕಲ್ಪನೆ ಹರಡಿಸಲಾಗಿತ್ತು - ಪೇಜಾವರ ಶ್ರೀ]

Madhwacharya

ಆಚಾರ ತ್ರಯರೆಂದೇ ಹೆಸರಾದ ಶಂಕರ-ಮಧ್ವ-ರಾಮಾನುಜರ ಪೈಕಿ ಈ ವರ್ಷ ರಾಮಾನುಜ ಚಾರ್ಯರ ಸಹಸ್ರಮಾನೋತ್ಸವ ವರ್ಷವಾಗಿದೆ. ದ್ವೈತ ಸಿದ್ಧಾಂತವನ್ನು ಪ್ರತಿಪಾದಿಸಿದ ಆಚಾರ್ಯ ಮಧ್ವರ ಜಯಂತಿಯನ್ನು ಮಧ್ವನವಮಿ ಎಂದು ಕರೆಯಲಾಗುತ್ತದೆ. ಆ ದಿನದ ವಿಶೇಷ ಧಾರ್ಮಿಕ ಆಚರಣೆಗಳನ್ನು ಉತ್ತರಾದಿ ಮಠದಲ್ಲಿ ಹಮ್ಮಿಕೊಳ್ಳಲಾಗಿದ್ದು, ಭಕ್ತರು ಭಾಗವಹಿಸುವಂತೆ ತಿಳಿಸಲಾಗಿದೆ.

English summary
Madhwa Navami celebrating on February 5th in Bengaluru Uttaradi mutt.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X