ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕವಿರಾಜ್ ರಿಂದ ಕನ್ನಡ ಮಾತಾಡಿ ಅಭಿಯಾನ ಶುರು

By Mahesh
|
Google Oneindia Kannada News

ಬೆಂಗಳೂರು, ನ.20: ನಮ್ಮ ಬೆ೦ಗಳೂರಿನ ದಿನನಿತ್ಯದ ವ್ಯವಹಾರಗಳಲ್ಲಿ ಕನ್ನಡದ ಬಳಕೆ ಹಾಗು ಆದ್ಯತೆಯನ್ನು ಉತ್ತೇಜಿಸುವ ಸಲುವಾಗಿ ನಾವು ಕಟ್ಟಿಕೊ೦ಡಿರುವ ' ಕ೦ಕಣ' ಬಳಗದ ಸದಸ್ಯರಾಗಿರುವ ಸಾಹಿತಿ ಕವಿರಾಜ್ ಅವರು ಕನ್ನಡ ಮಾತಾಡಿ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ.

ಕಂಕಣ ಎಂಬುದು ನಾಡು ನುಡಿಗಾಗಿ ಕಂಕಣ ತೊಟ್ಟ ಕನ್ನಡದ ಯುವ ಮನಸುಗಳ ಬಳಗ, ಕೂಟದ ಹೆಸರು ಬೆಂಗಳೂರಿನ ಸಾರ್ವಜನಿಕ ಸ್ಥಳಗಳಲ್ಲಿ ಕನ್ನಡ ಕಂಪು ಕಡಿಮೆಯಾಗುತ್ತಿದ್ದು, ಈ ನಿಟ್ಟಿನಲ್ಲಿ ವಿಭಿನ್ನವಾಗಿ ಅಭಿಯಾನ ನಡೆಸುವ ಮೂಲಕ ಜನರ ಗಮನ ಸೆಳೆದು ಕನ್ನಡ ಪರ ಕಾಳಜಿ ಮೆರೆಯುವುದು ಹಾಗೂ ಜಾಗೃತಿ ಮೂಡಿಸುವುದು ನಮ್ಮ ಉದ್ದೇಶ.

ಇದರಿಂದ ಕನ್ನಡ ಬಳಕೆ ಹೆಚ್ಚಳವಾಗಿ ಕನ್ನಡಮಯ ವಾತಾವರಣ ಸೃಷ್ಟಿಯಾಗುವಂತೆ ಮಾಡುವ ಕನಸನ್ನು ಕಂಕಣ ತಂಡ ಹೊತ್ತಿದೆ. ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸೇರಿದಂತೆ ಅನೇಕ ಹಿರಿಯರು ಈ ಯುವ ತಂಡಕ್ಕೆ ಬೆಂಬಲ ವ್ಯಕ್ತಪಡಿಸಿದೆ. ಕವಿರಾಜ್ ಅವರಿಂದ ಬಂದಿರುವ ಈ ಕೆಳಕಂಡ ಇಮೇಲ್ ನಿಮಗೂ ಬರಬಹುದು. ಇಲ್ಲದಿದ್ದರೆ ಆಸಕ್ತರು ಮಾಹಿತಿಗಾಗಿ ಕಂಕಣ ತಂಡದ ಫೇಸ್ ಬುಕ್ ಪುಟ ವೀಕ್ಷಿಸಿ

Lyricist Kaviraj and his Kankana team Kannada campaign

ಇಂದ -
ಕವಿರಾಜ್
ಚಲನಚಿತ್ರ ಸಾಹಿತಿ
ಬೆಂಗಳೂರು

ಗೆ -

ಆತ್ಮೀಯರೇ

'ಕಂಕಣ' ಎಂಬ ಕನ್ನಡ ಪರ ಕಾಳಜಿಯುಳ್ಳ ಯುವಜನರ ಬಳಗದ ಪರವಾಗಿ ತಮಗೆ ಈ ಪತ್ರವನ್ನು ಬರೆಯುತ್ತಿದ್ದೇನೆ .ನಿಮಗೆ ತಿಳಿದಿರುವಂತೆ ಬೆಂಗಳೂರಿನಲ್ಲಿ ದಿನೇ ದಿನೇ ಕನ್ನಡ ಭಾಷೆಯ ಬಳಕೆ ಕುಸಿಯುತ್ತಿರುವುದು ಅದರಲ್ಲೂ ಮುಖ್ಯವಾಗಿ ಕನ್ನಡಿಗರೇ ಮಾಲ್, ಸೂಪರ್ ಮಾರ್ಕೆಟ್, ಬ್ಯಾಂಕ್ ಹಾಗು ಕಚೇರಿ ಯಂತಹ ಸ್ಥಳಗಳಲ್ಲಿ ಕನ್ನಡದಲ್ಲಿ ಮಾತಾಡಲು ಹಿಂಜರಿಯುವುದು ಅತ್ಯಂತ ಕಳವಳಕಾರಿ ವಿಚಾರ. [ಕನ್ನಡ ಪದಗಳನ್ನು ಕಟ್ಟುವವರಿಗೊಂದು ಕಮ್ಮಟ ]

ಇಂತಹ ಕನ್ನಡಿಗರನ್ನು ಎಚ್ಚರಿಸಲು ಹಾಗೂ ಎಲ್ಲೆಡೆ ಕನ್ನಡಿಗರು ಹೆಮ್ಮೆಯಿಂದ ಕನ್ನಡದಲ್ಲಿ ಮಾತಾಡಲು ಪ್ರೇರೇಪಿಸುವ ದೃಷ್ಟಿಯಿಂದ ನಾವು 'ಕನ್ನಡ ಮಾತಾಡಿ' ಎಂಬ ಅಭಿಯಾನವನ್ನು ಇದೆ ನವೆಂಬರ್ 23 ರ ಸಂಜೆ 4.30 ರಿಂದ 6.30 ವರೆಗೆ ಜೆ.ಪಿ ನಗರದ ಸೆಂಟ್ರಲ್ ಮಾಲ್ ಎದುರು ಹಮ್ಮಿಕೊಂಡಿದ್ದೇವೆ .

Lyricist Kaviraj3

ಇದೊಂದು ವಿಶಿಷ್ಟ ಅಭಿಯಾನವಾಗಿದ್ದು ನಮ್ಮ ಸುಮಾರು 75 ರಿಂದ 100 ಸದಸ್ಯರು ಒಂದೇ ರೀತಿಯ ಸಮವಸ್ತ್ರ ಧರಿಸಿ ಕೈಗಳಲ್ಲಿ ಕನ್ನಡ ಪರ ಸಂದೇಶಗಳನ್ನೂ ಬರೆದ ಫಲಕಗಳನ್ನು ಕೈಯ್ಯಲ್ಲಿ ಹಿಡಿದು ಸಾಲಾಗಿ ನಿಲ್ಲಲ್ಲಿದ್ದೇವೆ . ಈ ಮೂಲಕ ಎಲ್ಲೆಡೆ ಹೆಮ್ಮೆಯಿಂದ ಕನ್ನಡ ಮಾತಾಡಲು ಕನ್ನಡಿಗರಿಗೆ

ಆತ್ಮವಿಶ್ವಾಸ ತುಂಬುವ ಉದ್ದೇಶ ನಮ್ಮದು. ಈ ಅಭಿಯಾನ ನಿರಂತರ ಕಾರ್ಯಕ್ರಮವಾಗಿದ್ದು ಮುಂದೆ ಬೇರೆ ಬೇರೆ ಸ್ಥಳಗಳಲ್ಲಿ ಮುಂದುವರಿಸುವ ಗುರಿ ಹೊಂದಿದ್ದೇವೆ .

ಈ ಕಾರ್ಯಕ್ರಮದ ಯಶಸ್ಸಿಗೆ ಮಾಧ್ಯಮದವರಾದ ನಿಮ್ಮ ಬೆಂಬಲ ಅತ್ಯಗತ್ಯ.ನಮ್ಮ ಈ ಕಾರ್ಯಕ್ರಮಕ್ಕೆ ನಿಮ್ಮ ಸಂಸ್ಥೆಯ ಪ್ರತಿನಿಧಿಯನ್ನು ಕಳುಹಿಸಿಕೊಡುವ ಮೂಲಕ ಸೂಕ್ತ ಪ್ರಚಾರ ನೀಡಿ,ನಮ್ಮ ಅಭಿಯಾನ ಮತ್ತು ಉದ್ದೇಶವನ್ನು ಹೆಚ್ಚು ಹೆಚ್ಚು ಕನ್ನಡಿಗರಿಗೆ ತಲುಪಿಸಲು ನಮ್ಮೊಂದಿಗೆ ಕೈ ಜೋಡಿಸಬೇಕಾಗಿ ತಮ್ಮಲ್ಲಿ ಸವಿನಯ ವಿನಂತಿ

ವಂದನೆಗಳೊಂದಿಗೆ

English summary
Kannada Lyricist Kaviraj and his Kankana team started a unique campaign to increase the number of Kannada language speakers in Public places like Parks, Malls, Banks and other places in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X