ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲಾಟರಿ ಆಸೆಗೆ 38 ಲಕ್ಷ ರು. ಕಳಕೊಂಡ ಬೆಂಗಳೂರು ಮಹಿಳೆ

|
Google Oneindia Kannada News

ಬೆಂಗಳೂರು, ಮಾರ್ಚ್, 09: ಬೆಂಗಳೂರು ನಾಗರಿಕರು ಲಾಟರಿ ಮೋಹಕ್ಕೆ ಬಿದ್ದು ಭರ್ಜರಿ ಟೋಪಿಯನ್ನೇ ಹಾಕಿಸಿಕೊಂಡಿದ್ದಾರೆ. ಲಾಟರಿ ಆಸೆಗೆ ಕಳೆದುಕೊಂಡಿದ್ದು ಬರೋಬ್ಬರಿ 5 ಕೋಟಿಗೂ ಅಧಿಕ ಹಣ.

ನಿವೃತ್ತ ಕೇಂದ್ರ ಸರ್ಕಾರಿ ಸಿಬ್ಬಂದಿ ತಿಪ್ಪಸಂದ್ರ ನಿವಾಸಿ 65 ಮಹಿಳೆಯೊಬ್ಬರು ಬರೋಬ್ಬರಿ 38 ಲಕ್ಷ ರು. ಕಳೆದುಕೊಂಡಿದ್ದಾರೆ. ಇನ್ನು ದೂರು ದಾಖಲು ಮಾಡಿದ ಜನ ಕಳೆದುಕೊಂಡ ಲೆಕ್ಕವೆಷ್ಟೋ...[ಮೊಬೈಲ್ ಕರೆಗೆ ಓಗೊಟ್ಟು ಬ್ಯಾಂಕ್ ಮಾಹಿತಿ ಕೊಟ್ಟೀರಾ ಜೋಕೆ!]

money

ವಂಚನೆ ನಡೆದಿದ್ದು ಹೇಗೆ?: ಮಹಿಳೆಗೆ ಕಳೆದ ಡಿಸೆಂಬರ್ ನಲ್ಲಿ ಮೊಬೈಲ್ ಸಂದೇಶವೊಂದು ಬಂದಿದೆ. ಈ ಸಂದೇಶಕ್ಕೆ ಮಹಿಳೆ ಉತ್ತರ ನೀಡಿದ್ದಾರೆ. ಇದಾದ ಮೇಲೆ ಇಮೇಲ್ ಮೂಲಕವೂ ಅಜ್ಞಾತ ಸಂಸ್ಥೆ ಮಾತುಕತೆ ನಡೆಸಿದೆ.

"ನೀವು 47 ಕೋಟಿ ಬಹುಮಾನ ಗೆದ್ದಿರುವಿರಿ ಅದನ್ನು ಪಡೆಯಲು ನಿಮ್ಮ ಅನೇಕ ದಾಖಲೆಗಳು ನಮಗೆ ಬೇಕು" ಎಂದು ಮೋಸಗಾರರು ತಿಳಿಸಿದ್ದಾರೆ. ಇದಕ್ಕೆ ಮರುಳಾದ ಮಹಿಳೆ ತನ್ನ ಬ್ಯಾಂಕ್ ಖಾತೆ ಮಾಹಿತಿ, ಪಾನ್ ಕಾರ್ಡ್, ವೋಟರ್ ಐಡಿಯನ್ನು ನೀಡಿದ್ದಾರೆ. ಅಲ್ಲದೇ ಈ ಸಂಗತಿಯನ್ನು ಮನೆಯವರಿಗೂ ತಿಳಿಸಿಲ್ಲ.[ಸೈಬರ್ ಅಪರಾಧಿ ಹಿಡಿಯಲು ಬಂದಿದೆ ಹೊಸ ಸಾಫ್ಟ್‌ವೇರ್]

ನಂತರ ನಿಧಾನವಾಗಿ ಲಾಟರಿಗೆ ತೊಡಕಿಕೊಂಡಿದ್ದಾಳೆ. ವಿವಿಧ ಬ್ಯಾಂಕ್ ಖಾತೆಯಿಂದ ಮೋಸಗಾರರು ಹೇಳಿದ ಅಕೌಂಟಿಗೆ ಹಣ ಹಾಕಿದ್ದಾರೆ. ಚಿನ್ನ ನೀಡುತ್ತೇನೆ ಎಂದು ಹೇಳಿದ್ದವರು ಇದ್ದಕ್ಕಿದ್ದಂತೆ ಸಂಪರ್ಕ ಕಡಿತ ಮಾಡಿದ್ದಾರೆ.

ಫೆಬ್ರವರಿ ತಿಂಗಳ ಅಂತ್ಯಕ್ಕೆ ತನಗೆ ಮೋಸ ಆಗಿರುವುದು ಮಹಿಳೆಗೆ ಗೊತ್ತಾಗಿದೆ. ಅಂತಿಮವಾಗಿ ಮಹಿಳೆ ಸೈಬರ್ ದಳದ ಪೊಲೀಸರಿಗೆ ದೂರು ದಾಖಲಿಸಿದ್ದಾರೆ. ತನಿಖೆಯ ಬೆನ್ನು ಹತ್ತಿರುವ ಪೊಲೀಸರು ದೂರವಾಣಿ ಕರೆ ದೆಹಲಿ ಮತ್ತು ಉತ್ತರ ಭಾರತದ ಕೆಲವು ಕಡೆಯಿಂದ ಬಂದಿದೆ ಎಂಬುದನ್ನು ಪತ್ತೆ ಹಚ್ಚಿದ್ದು ಶೋಧ ಮುಂದುವರಿಸಿದ್ದಾರೆ.

English summary
Bengaluru: Police estimate Bengalureans have lost nearly Rs. 5 crore from January till February-end this year. A 65-year-old woman from the city recently lost Rs. 38 lakh of her retirement money in one of the oldest cyber frauds - the lottery scam - where a person is asked to pay a fee to claim their winnings. According to investigators in the cyber crime wing of the Criminal Investigation Department.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X