ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಲವೇ ಗಂಟೆಗಳಲ್ಲಿ RTI ಮಾಹಿತಿ; ಯಾರಿಗುಂಟು ಯಾರಿಗಿಲ್ಲ!

By Vanitha
|
Google Oneindia Kannada News

ಬೆಂಗಳೂರು, ಜು. 03 : ನಾಗರೀಕರು ಆರ್‌ಟಿಐ (Right to Information act) ಆಕ್ಟ್ ನಿಂದ ಮಾಹಿತಿ ಪಡೆಯಬೇಕಾದರೆ ಒಂದು ವಾರವೋ ಅಥವಾ ತಿಂಗಳೋ ಕಾಯಬೇಕಾಗುತ್ತದೆ. ಲೋಕಾಯುಕ್ತ ನ್ಯಾಯಮೂರ್ತಿ ಭಾಸ್ಕರ್‌ ರಾವ್ ಅವರ ಮಗ ಅಶ್ವಿನ್ ಗೆ ಇದು ಕೆಲವೇ ಗಂಟೆಗಳ ವಿಷಯವಷ್ಟೇ.

ಆರ್‌ಟಿಐ ಮನವಿ ಸಲ್ಲಿಸಿದ ಅರ್ಜಿಗೆ ಮಾಹಿತಿ ನೀಡಲು 30 ದಿನ ತೆಗೆದುಕೊಳ್ಳುತ್ತದೆ. ಆದರೆ ಅಶ್ವಿನ್ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಪಟ್ಟ ಎಲ್ಲಾ ದಾಖಲೆಗಳನ್ನು ಆರ್‌ಟಿಐ ನಿಂದ ಕೆಲವೇ ಗಂಟೆಗಳಲ್ಲಿ ಕಲೆಹಾಕಿದ್ದಾರೆ. ಎಲ್ಲ ಮಾಹಿತಿಗಳನ್ನು ಲೋಕಾಯುಕ್ತ ರಿಜಿಸ್ಟ್ರಾರ್ ಎಚ್‌ ಆರ್‌ ದೇಶಪಾಂಡೆ ಅವರಿಂದ ಪಡೆದಿದ್ದಾರೆ.[ಲೋಕಾಯುಕ್ತರ ಪದಚ್ಯುತಿ ಕಾನೂನು ಪ್ರಕ್ರಿಯೆಗಳೇನು?]

Lokayukta's son gets RTI reply within hours

ಜನಾಧಿಕಾರ ಸಂಘರ್ಷ ಪರಿಷತ್‌ ಸದಸ್ಯರು ಜೂ. 18 ಕ್ಕೆ ಮಾಹಿತಿಗಾಗಿ ಅರ್ಜಿ ಸಲ್ಲಿಸಿದ್ದರೂ ಆರ್‌ಟಿಐನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ದೂರಿದ್ದಾರೆ. ಅಲ್ಲದೇ ಲೋಕಾಯುಕ್ತ ಭ್ರಷ್ಟಾಚಾರ ಬೆಳಕಿಗೆ ಬರುವ ಮೊದಲೇ ಸಲ್ಲಿಸಿದ್ದ ಅರ್ಜಿಗೆ ಇಷ್ಟೊಂದು ವಿಳಂಬ ಮಾಡುತ್ತಿರುವುದು ಸರಿಯೇ? ಎಂದು ಪ್ರಶ್ನಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಆದರ್ಶ್ ಆರ್ ಅಯ್ಯರ್ 'ಆರ್ ಟಿಐ ಮಾಹಿತಿಗಾಗಿ ಸಲ್ಲಿಸಿದ ಎಲ್ಲಾ ಅರ್ಜಿಗಳನ್ನು ಸಮಾನವಾಗಿಯೇ ಕಾಣುತ್ತದೆ. ಯಾವಾಗಲೂ ಪಾರದರ್ಶಕವಾಗಿಯೇ ಕಾರ್ಯನಿರ್ವಹಿಸುತ್ತದೆ. ಆರ್ ಟಿ ಐ ಸೆಕ್ಷನ್ 7(1) ರ ಪ್ರಕಾರ ಮನವಿ ಸಲ್ಲಿಸಿದ 48 ಗಂಟೆ ಒಳಗಾಗಿ ಮಾಹಿತಿ ಪಡೆಯುವ ವಿಶೇಷ ಅವಕಾಶ ಹಾಗೂ ಅರ್ಹತೆ ಇರುತ್ತದೆ' ಎಂದು ಜೆಎಸ್ ಪಿ ಸದಸ್ಯರಿಗೆ ಮನದಟ್ಟು ಮಾಡಿಸಿದ್ದಾರೆ.

English summary
RTI gave a information to lokayukta's son Ashwin with in hours. But Janadhikara Sangharsha Parishath (JSP) had ask and submitted application to rti before lokyukta corruption. All details were sought from the lokayukta registrar H R Deshpande on a single application bearing number 803/2015
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X