ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿಗರು ಜಾತ್ಯತೀತರಾಗುವುದು ಇನ್ನೂ ಬಹುದೂರ!

|
Google Oneindia Kannada News

ಬೆಂಗಳೂರು, ಡಿಸೆಂಬರ್, 18: ಇಡೀ ಪ್ರಪಂಚವೇ ಒಂದು ಮನೆಯಾಗಿದೆ. ಜಾತಿ ಪದ್ಧತಿ ಅಳಿಯುತ್ತಿದೆ. ಬದಲಾವಣೆ ಗಾಳಿ ಬೀಸುತ್ತಿದೆ.. ಅಂತರ್ಜಾತಿ ವಿವಾಹ ಸಾಮಾನ್ಯವಾಗಿದೆ.. ಎಂದು ಹೀಗೆಲ್ಲ ನಾವು ಹೇಳುತ್ತೇವೆ, ವೇದಿಕೆಯಲ್ಲಿ ಭಾಷಣ ಮಾಡುವವರ ಬಾಯಲ್ಲೂ ಒಂದೆಲ್ಲಾ ಒಂದು ಸಾರಿ ಉಲ್ಲೇಖವಾಗುತ್ತಲೇ ಇರುತ್ತದೆ.

ಆದರೆ ನಿಜಕ್ಕೂ ಪರಿಸ್ಥಿತಿ ಹೇಗಿದೆ? ಇದು ನಮ್ಮ ಮುಂದಿರುವ ಪ್ರಶ್ನೆ. ಇದನ್ನು ಇಟ್ಟುಕೊಂಡೆ ಬೆಂಗಳೂರಿಗರ ಮೇಲೊಂದು ಸಮೀಕ್ಷೆಯೊಂದನ್ನು ಮಾಡಲಾಗಿದೆ. ನ್ಯಾಶನಲ್ ಇಸ್ಟಿಟ್ಯೂಟ್ ಆಫ್ ಅಡ್ವಾನ್ಸ್ ಸ್ಟಡೀಸ್ ಮಾಡಿರುವ ಸಮೀಕ್ಷೆ ಪ್ರಕಾರ ಹೊರಗಿನ ಜಾತಿಯವರನ್ನು ಮದುವೆಯಾಗುತ್ತಿರುವವರ ಸಂಖ್ಯೆ ಕೇವಲ ಶೇ. 1.2![ಏಳು ಜನ್ಮಗಳ ಬಂಧ ಬೆಸೆಯುವ 'ಸಪ್ತಪದಿ'ಯ ಮಹತ್ವ]

marriage

9, 504 ಜನರ ಮೇಲೆ ಸಮೀಕ್ಷೆ ನಡೆಸಿ ಎನ್ ಐ ಎಎಸ್ ಈ ವರದಿಯನ್ನು ನೀಡಿದೆ. ಅಂತರ್ಜಾತಿ ವಿವಾಹವಾಗುತ್ತಿರುವವರಲ್ಲಿ ಬ್ರಾಹ್ಮಣರಿಗೆ ಮೊದಲ ಸ್ಥಾನ. ನಂತರದ್ದೂ ನಾಯ್ಕ್ ಸಮುದಾಯಕ್ಕೆ.[ಕನ್ಯತ್ವ ಕಳೆದುಕೊಂಡವಳನ್ನು ಮದುವೆಯಾಗಲು ರೆಡಿನಾ?]

ಹೆಚ್ಚಿದ ಸಂವಹನ, ತಂತ್ರಜ್ಞಾನ ಜಾತಿಗಳಲ್ಲಿ ಸಂಬಂಧಗಳನ್ನು ಮತ್ತಷ್ಟು ಬೆಸೆದಿದೆ. ಮದುವೆ ದಲ್ಲಾಳಿ ಕುರಿತ ವೆಬ್ ಸೈಟ್ ಗಳು ಪ್ರತಿದಿನ ಹುಟ್ಟಿಕೊಳ್ಳುತ್ತಿರುವುದೇ ಇದಕ್ಕೆ ಸ್ಪಷ್ಟ ಉದಾಹರಣೆ ಎಂದು ಸಮೀಕ್ಷೆ ನೇತೃತ್ವ ವಹಿಸಿದ್ದ ನರೇಂದ್ರ ಪಾಣಿ ತಿಳಿಸುತ್ತಾರೆ.[ಭಾರತದ ಹೆಣ್ಣು ಮಕ್ಕಳ ವ್ಯಥೆ ಬಿಚ್ಚಿಡುವ ವರದಿಯಲ್ಲೇನಿದೆ?]

ಭಾಷೆ, ಪ್ರದೇಶ, ಒಳ ಜಾತಿಗೆ ಸಂಬಂಧಿಸಿಯೇ ಮದುವೆ ಮಾತುಕತೆಯನ್ನು ಮುಂದೆ ಇಡುತ್ತಿದ್ದಾರೆ ಎಂಬ ಸಂಗತಿಯೂ ಬಹಿರಂಗವಾಗಿದೆ. ಸಮೀಕ್ಷೆಗೆ ಒಳಪಟ್ಟ ಶೇ. 1 ರಷ್ಟು ಜನ ತಮ್ಮ ಜಾತಿ ಬಹಿರಂಗ ಮಾಡಲು ಹಿಂಜರಿದರು. ನಾವು 163 ಜಾತಿಗಳನ್ನು ಸಮೀಕ್ಷೆ ವೇಳೆ ಲೆಕ್ಕ ಹಾಕಿದೆವು ಎಂದು ಪಾಣಿ ಮಾಹಿತಿ ನೀಡಿದ್ದಾರೆ.

ಸರ್ಕಾರೇತರ ಪಾಲಿಸಿಗಳನ್ನು ನಿರ್ಧರಿಸುವಲ್ಲಿ ಮೇಲ್ಜಾತಿಯ ಪ್ರಭಾವ ಬಳಕೆಯಾಗುತ್ತಿದೆ. ಐಟಿ ಬಿಟಿಯವರು ಮುಕ್ತವಾಗಿ ಜಾತಿ ಹಂಚಿಕೊಂಡರೆ ಮಧ್ಯಮ ವರ್ಗದ ಕೆಲ ಮಂದಿ ಹಿಂಜರಿದರು ಎಂದು ಸಮೀಕ್ಷಾ ವರದಿ ತಿಳಿಸಿದೆ.

English summary
Bengaluru: A recent study by the National Institute of Advanced Studies (NIAS) led by professor Narendar Pani has found that of 9,504 individuals surveyed in Bengaluru, only 1.2% had married outside their caste. Brahmins are more open to marriage outside their caste, followed by the Naik community, which is a Scheduled Tribe.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X