ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲಾಲ್‌ಬಾಗ್ ನೋಡಬಂದವರ ಮೇಲೆರಗಿದ ಜೇನ್ನೋಣಗಳು

|
Google Oneindia Kannada News

ಬೆಂಗಳೂರು, ಆಗಸ್ಟ್, 16: ಕಳೆದ ವರ್ಷ ವಾಲಕಿ ವೈಷ್ಣವಿ(7) ಪ್ರಾಣ ಕಿತ್ತುಕೊಂಡಿದ್ದ ಲಾಲ್ ಬಾಗ್ ಜೇನು ನೋಣಗಳು ಈ ಬಾರಿಯೂ ಜನರ ಮೇಲೆ ದಾಳಿ ಮಾಡಿವೆ. ಆಗಸ್ಟ್ 15 ರಂದು ಮಧ್ಯಾಹ್ನ ಪ್ರದರ್ಶನ ಮುಗಿಸಿಕೊಂಡು ಪಶ್ಚಿಮ ದ್ವಾರದಲ್ಲಿ ವಾಪಸಾಗುತ್ತಿದ್ದ ಶಿವರಾಜು ಮತ್ತು ಹನುಮಂತಗೌಡ ಎಂಬುವರ ಮೇಲೆ ಜೇನ್ನೊಣಗಳು ದಾಳಿ ನಡೆಸಿವೆ.

ದಾಳಿಯಿಂದ ಶಿವರಾಜು, ಹನುಮಂತಗೌಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಮೂರು ನಾಲ್ಕು ಜನರ ಮೇಲೆ ಜೇನು ನೋಣಗಳು ದಾಳಿಮಾಡಿದ್ದು ಹೆಸರು ತಿಳಿದು ಬಂದಿಲ್ಲ.[ಹೂವಿನ ತೋಟದಲ್ಲಿ ಕಳೆದುಹೋದ ಹೂವಿನಂಥ ಹುಡುಗಿ]

Lalbagh Flower Show: Bee Attack, 2 suffer severe stings

ಕಳೆದ ವರ್ಷ್ ಆ.15ರಂದೇ ಕೆಂಪೇಗೌಡ ಗೋಪುರದ ಸಮೀಪ 7 ವರ್ಷದ ವೈಷ್ಣವಿ ಎಂಬ ಬಾಲಕಿ ಮೇಲೆ ಜೇನ್ನೊಣಗಳು ದಾಳಿ ನಡೆಸಿದ್ದವು. ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃತಪಟ್ಟಿದಳು. ಮೊಮ್ಮಗಳು ಮೃತಪಟ್ಟ ಕೊರಗಿನಲ್ಲೇ ಆಕೆಯ ಆಕೆಯ ಅಜ್ಜ-ಅಜ್ಜಿ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು.[ಬಾಲಕಿ ಪ್ರಾಣ ತೆಗೆದ ಲಾಲ್ ಬಾಗ್ ನ ಜೇನ್ನೊಣ]

ಪದ್ಮನಾಭನಗರ ಗುರುಪ್ರಸಾದ್ ಹಾಗೂ ಸುಗುಣ ದಂಪತಿ ಪುತ್ರಿ ವೈಷ್ಣವಿ(7) ಸಾವಿನ ನಂತರ ತೋಟಗಾರಿಕಾ ಇಲಾಖೆ ಮುಂಜಾಗೃತಾ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಹೇಳಿತ್ತು. ಆದರೆ ಈ ಬಾರಿಯೂ ಜೇನು ನೋಣಗಳ ಸಿಟ್ಟಿಗೆ ಜನರು ಬಲಿಯಾಗಿದ್ದಾರೆ.

ಈ ಬಾರಿಯ ಲಾಲ್ ಬಾಗ್ "ಗುಲಾಬಿ ಸಂಸತ್ತು" ಹೇಗಿತ್ತು? ನೋಡಿಕೊಂಡು ಬನ್ನಿ

English summary
Bengaluru: Exactly a year after bees killed a little girl who had come for the Independence Day Flower Show at Lalbagh, two youths were severely stung on Monday, August 15. Hanumantha Gowda, [26], and Shivaraj S Mattur, [24], were severely injured near Lalbagh West Gate and admitted to a private hospital.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X