ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರ್ ಸ್ಯಾಂಡಲ್ಸ್ ಗೆ 100, ಹೊಸ ಉತ್ಪನ್ನಗಳ ಅನಾವರಣ

By Mahesh
|
Google Oneindia Kannada News

ಬೆಂಗಳೂರು, ಜುಲೈ 27 : ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ(ಕೆಎನ್ ಡಿಎಲ್ ) ತನ್ನ 100ನೇ ವರ್ಷದ ಸಂಭ್ರಮಕ್ಕೆ ಹೊಸ ಉತ್ಪನ್ನಗಳನ್ನು ತನ್ನ ಗ್ರಾಹಕರಿಗೆ ಪರಿಚಯಿಸುತ್ತಿದೆ.

ಹಾಲಿ ಘಟಕಗಳ ವಿಸ್ತರಣೆ ಹಾಗೂ ಮಾರುಕಟ್ಟೆ ಅಗತ್ಯಕ್ಕೆ ತಕ್ಕಂತೆ ಬದಲಾವಣೆ ಹಾದಿಯಲ್ಲಿ 'ಮೈಸೂರು ಸ್ಯಾಂಡಲ್ ಸೋಪ್' ಸಾಗಿದೆ ಎಂದು ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವ ಅರ್ ವಿ ದೇಶಪಾಂಡೆ ಬುಧವಾರ ತಿಳಿಸಿದರು.

ಮೈಸೂರು ಸ್ಯಾಂಡಲ್ ಸೋಪ್ ಬ್ರ್ಯಾಂಡ್ ನ ಶತಮಾನದ ಸಂಭ್ರಮವನ್ನು ಹೆಚ್ಚಿಸಲು ಸರ್ಕಾರದಿಂದ 27.15 ಕೋಟಿ ರು ಅನುದಾನ ನೀಡಲಾಗಿದೆ. ಹೊಸ ಘಟಕ ಸ್ಥಾಪನೆ ಉನ್ನತ ತಂತ್ರಜ್ಞಾನ ಬಳಕೆ ಮೂಲಕ ವಾರ್ಷಿಕ 15,000 ಮೆಟ್ರಿಕ್ ಟನ್ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಿಕೊಳ್ಳಲಾಗುತ್ತದೆ ಎಂದು ಸಚಿವ ದೇಶಪಾಂಡೆ ಹೇಳಿದರು.

ಹೊಸ ಉತ್ಪನ್ನಗಳ ಬಿಡುಗಡೆ: ಮಿಸ್ಟಿಕ್ ಮೈಸೂರ್ ಸ್ಯಾಂಡಲ್ ಅಗರಬತ್ತಿಗಳು ಹಾಗೂ ಮೈಸೂರ್ ಸ್ಯಾಂಡಲ್ ಮ್ಯಾಂಗೋ ಹ್ಯಾಂಡ್ ವಾಶ್ ಬಿಡುಗಡೆ ಮಾಡಲಾಯಿತು.

* ಮಿಸ್ಟಿಕ್ ಮೈಸೂರ್ ಸ್ಯಾಂಡಲ್ ಅಗರಬತ್ತಿ: 90 ಗ್ರಾಮ್ ನ ಪ್ಯಾಕ್ ಬೆಲೆ ಪ್ರತಿ ಬಾಕ್ಸಿಗೆ 60 ರು

* ಮೈಸೂರ್ ಸ್ಯಾಂಡಲ್ ಮ್ಯಾಂಗೋ ಹ್ಯಾಂಡ್ ವಾಶ್: 250 ಎಂ ಎಲ್ ಬೆಲೆ 75 (ತೆರಿಗೆ ಸೇರಿ)

ಮೈಸೂರು ಶ್ರೀಗಂಧದ ಪರಿಮಳ ಬೀರುವ ಮೈಸೂರ್ ಸ್ಯಾಂಡಲ್ ಸೋಪ್ 100 ವರ್ಷಗಳ ಭವ್ಯ ಪರಂಪರೆ ಹೊಂದಿದ್ದು, ಕೆಎಸ್ ಡಿಎಲ್ ಶತಮಾನೋತ್ಸವ ಸಂಭ್ರಮ (1916-2016) ಸಮಾರಂಭ, ಸಾಬೂನು ಸಂತೆ ಜುಲೈ 30, 2016 ರಂದು ನಡೆಯಲಿದೆ.

1916ರಲ್ಲಿ ಶ್ರೀಗಂಧದೆಣ್ಣೆ ಕಾರ್ಖಾನೆ ಸ್ಥಾಪನೆ

1916ರಲ್ಲಿ ಶ್ರೀಗಂಧದೆಣ್ಣೆ ಕಾರ್ಖಾನೆ ಸ್ಥಾಪನೆ

1916ರಲ್ಲಿ ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯ ಅವರಿಂದ ಸರ್ಕಾರಿ ಶ್ರೀಗಂಧದೆಣ್ಣೆ ಕಾರ್ಖಾನೆ ಸ್ಥಾಪನೆ. ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದೂರದೃಷ್ಟಿಯ ಫಲವಾದ ಮೈಸೂರು ಸ್ಯಾಂಡಲ್ಸ್ ಈಗ ವಿಶ್ವಭೂಪಟದಲ್ಲಿ 'ಭಾರತದ ಸುಗಂಧ ರಾಯಭಾರಿ' ಎನಿಸಿಕೊಂಡಿದೆ.

1980ರಲ್ಲಿ ಕೆಎಸ್ ಡಿಎಲ್ ಎಂದು ಮರು ನಾಮಕರಣ

1980ರಲ್ಲಿ ಕೆಎಸ್ ಡಿಎಲ್ ಎಂದು ಮರು ನಾಮಕರಣ

1980ರಲ್ಲಿ ಕೆಎಸ್ ಡಿಎಲ್ ಎಂದು ಮರು ನಾಮಕರಣಕೊಂಡಿತು.ಪ್ರಸ್ತುತ 542 ಉದ್ಯೋಗಿಗಳಿದ್ದು ಶತಮಾನೋತ್ಸವ ಬೋನಸ್ ಆಗಿ 20,000 ರು ಪಡೆಯಲಿದ್ದಾರೆ ಎಂದು ಕೈಗಾರಿಕಾ ಸಚಿವ ಆರ್ ವಿ ದೇಶಪಾಂಡೆ ಹೇಳಿದರು.

38ಕ್ಕೂ ಅಧಿಕ ಉತ್ಪನ್ನಗಳನ್ನು ಹೊಂದಿದೆ

38ಕ್ಕೂ ಅಧಿಕ ಉತ್ಪನ್ನಗಳನ್ನು ಹೊಂದಿದೆ

ಸೋಪು, ಡಿಟರ್ಜೆಂಟ್,ಕಾಸ್ಮೆಟಿಕ್, ಅಗರಬತ್ತಿ, ಶ್ರೀಗಂಧದೆಣ್ಣೆ ಸೇರಿದಂತೆ 38ಕ್ಕೂ ಅಧಿಕ ಉತ್ಪನ್ನಗಳನ್ನು ಮಾರುಕಟ್ಟೆಯಲ್ಲಿ ಹೊಂದಿದೆ. 2015ರಲ್ಲಿ 476.76 ಕೋಟಿ ರು ಟರ್ನ್ ಓವರ್ ಕಂಡಿದೆ. ಮುಂದಿನ ಆರ್ಥಿಕ ವರ್ಷಕ್ಕೆ 600 ಕೋಟಿ ಆದಾಯದ ಗುರಿ ಹೊಂದಲಾಗಿದೆ ಎಂದು ಚೇರ್ಮನ್ ವೆರೊನಿಕಾ ಕಾರ್ನೆಲಿಯೋ ಹೇಳಿದರು.

ಕೆಎಸ್ ಡಿಎಲ್ ರಫ್ತು ಎಲ್ಲೆಲ್ಲಿ?

ಕೆಎಸ್ ಡಿಎಲ್ ರಫ್ತು ಎಲ್ಲೆಲ್ಲಿ?

ಯುಎಇ, ಕುವೈಟ್, ಸೌದಿ ಅರೇಬಿಯಾ, ಬಹರೇನ್, ಕತಾರ್, ಯುಕೆ, ಫ್ರಾನ್ಸ್, ಚೀನಾ, ಮಲೇಶಿಯಾ, ಸಿಂಗಪುರ, ತೈವಾನ್, ಆಸ್ಟ್ರೇಲಿಯಾ, ಹಾಂಗ್ ಕಾಂಗ್, ನೇಪಾಳ ಸೇರಿದಂತೆ ಅನೇಕ ದೇಶಗಳಿಗೆ ಮೈಸೂರ್ ಸ್ಯಾಂಡಲ್ ಸೋಪ್ ಉತ್ಪನ್ನಗಳು ರಫ್ತಾಗುತ್ತಿದೆ.

ಹೊಸ ಉತ್ಪನ್ನಗಳು, ಸೋಪ್ ಸಂತೆ

ಹೊಸ ಉತ್ಪನ್ನಗಳು, ಸೋಪ್ ಸಂತೆ

ಮೈಸೂರ್ ಮಿಸ್ಟಿಕ್ ಅಗರಬತ್ತಿ ಹಾಗೂ ಮೈಸೂರ್ ಸ್ಯಾಮ್ಡಲ್ ಮ್ಯಾಂಗೋ ಹ್ಯಾಂಡ್ ವಾಷ್ ಉತ್ಪನಗಳನ್ನು ಶತಮಾನೋತ್ಸವ ಸಮಾರಂಭದ ಅಂಗವಾಗಿ ಬಿಡುಗಡೆ ಮಾಡಲಾಗುತ್ತಿದೆ. ಸ್ವಚ್ಛ ಹಾಗೂ ನಿರ್ಮಲ ಭಾರತ್ ಅಭಿಯಾನಕ್ಕೆ ಇದು ಪೂರಕವಾಗಿದೆ. ಜುಲೈ 30ರಂದು ಕೆಎಸ್ ಡಿಎಲ್ ಸಂಸ್ಥೆ ಆವರಣದಲ್ಲಿ ಸೋಪ್ ಸಂತೆ, 14ಕ್ಕೂ ಅಧಿಕ ಶಿಲ್ಪಕಲೆಗಳ ಸ್ಥಾಪನೆ ಹಾಗೂ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.

English summary
As Karnataka Soaps and Detergents Limited celebrates its centenary year, the company has planned to go in for capacity enhancement by modernising plants and machinery and launching new products to cater to market demands.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X