ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜಲಾಶಯಗಳು ಖಾಲಿ ಖಾಲಿ ಎದುರಾಗಲಿದೆ ನೀರಿನ ಸಮಸ್ಯೆ

By Ananthanag
|
Google Oneindia Kannada News

ಬೆಂಗಳೂರು.ಫೆಬ್ರವರಿ 8: ಕೃಷ್ಣರಾಜ ಸಾಗರ ಅಣೆಕಟ್ಟು ಮತ್ತು ಕಬಿನಿ ಜಲಾಶಯದಲ್ಲಿ ನೀರಿನ ಮಟ್ಟ ಕುಸಿದಿರುವ ಪರಿಣಾಮ ಬೆಂಗಳೂರು, ಮಂಡ್ಯ, ಮೈಸೂರು ಜನತೆಗೆ ಶೀಘ್ರದಲ್ಲಿಯೇ ನೀರಿನ ಕೊರತೆ ಎದುರಾಗಲಿದೆ.

ಕೆಆರ್ ಎಸ್ ಅಣೆಕಟ್ಟಿನಲ್ಲಿ ಸೋಮವಾರಕ್ಕೆ ನೀರಿನ ಮಟ್ಟ 78.96 ಅಡಿಗಳಷ್ಟಿದೆ. ಅದರೆ ಮೂಲ ಸಾಮರ್ಥ್ಯ 124 ಅಡಿಗಳು. ಅಣೆಕಟ್ಟು ಒಟ್ಟು ಹೊಂದಿರುವ ಲೈವ್ ಸ್ಟೋರೇಜಿನ ಸಾಮರ್ಥ್ಯ 1.955 ಟಿಎಮ್ ಸಿ ಎಂದು ನೀರಾವರಿ ಇಲಾಖೆ ತಿಳಿಸಿದೆ. ಇನ್ನು ಹೋದ ವರ್ಷಕ್ಕೆ ಹೊಲಿಸಿದರೆ ಕಬಿನಿ ಜಯಲಾಶಯದಲ್ಲಿ 2.32 ಟಿಎಂಸಿ ನೀರು ಕಡಿಮೆಯಿದ್ದು, ಜಲಾಶಯದ ಮಟ್ಟ ಅರ್ಥಕ್ಕಿಂತ ಕಡಿಮೆಯಾಗಿದೆ. ಬೆಂಗಳೂರಿಗೆ ಪ್ರತಿ ತಿಂಗಳಿಗೆ 2 ಟಿಎಂಸಿ ನೀರು ಬೇಕು ಎಂದು ಟಿಎನ್ಐಇ ವರದಿ ತಿಳಿಸಿದೆ.[ಮಲೆನಾಡಿನಲ್ಲೂ ಜಲಕ್ಷಾಮ! ಇದಕ್ಕೆ ಕಾರಣಗಳು ಇಲ್ಲಿವೆ]

Krishnaraja Sagar dam and the Kabini reservoir have dropped drastically.

ಜಲಾಶಯಗಳಿಗೆ ಒಳಹರಿವು ಮಾತ್ರ ಎರಡು ತಿಂಗಳಿನಿಂದ 300 ಕ್ಯೂಸೆಕ್ಸ್ ಮೀರಿಲ್ಲ. ಎರಡು ಜಲಾಶಯದಲ್ಲಿಯೂ ಡೆಡ್ ಸ್ಟೋರೇಜಿನ ಮಟ್ಟ 60 ಅಡಿಗಳಿಗಿಂತ ಕಡಿಮೆಯಾದರೆ ರಾಜ್ಯಕ್ಕೆ ಉಳಿಯುವುದು 4.4 ಟಿಎಂಸಿ ಅಡಿಗಳಷ್ಟು ನೀರು. ಅಲ್ಲದೆ ಕುಡಿಯುವ ನೀರಿನ ಬಳಕೆ, ತಾಪಮಾನದಿಂದಾಗಿ ಆವಿಯಾಗುವ ನೀರು, ಮತ್ತು ತಮಿಳುನಾಡಿಗೆ ಬಿಡುಗಡೆಯಾಗುವ ನೀರು ಎಲ್ಲವನ್ನು ಇದರಲ್ಲಿಯೇ ನಿಭಾಯಿಸಬೆಕಾಗುತ್ತದೆ.[ಉಡುಪಿಯಲ್ಲೂ ನೀರಿಗೆ ಬರ, ಶ್ರೀ ಕೃಷ್ಣನಿಗೆ ಕೇಳುವುದೇ ಮೊರೆ?]

ಬೇಸಿಗೆ ಹೊತ್ತಿಗೆ ನೀರಿನ ಪ್ರಮಾಣ ಡೆಡ್ ಸ್ಟೊರೇಜ್ ಅನ್ನು ಮೀರಿ ಹೋಗುವ ಸಾದ್ಯತೆಗಳಿಗಳಿದ್ದು, ಜನಜೀವನಕ್ಕೆ ತೊಂದರೆಯಾಗಲಿದೆ. ಬೆಂಗಳೂರಿಗೂ ನೀರನ್ನು ಕೊಡುವುದು ಕಷ್ಟಸಾಧ್ಯ, ಇದನ್ನು ತಿಳಿದಿರುವ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಲಿ ಅಧಿಕಾರಿಗಳು ಬೆಂಗಳೂರಿನಲ್ಲಿ ಅಧಿಕ ಪ್ರಮಾಣದ ಬೋರ್ ವೆಲ್ ಕೊರೆಯಲು ಚಿಂತಿಸಿದ್ದಾರೆ ಎಂದು ವರದಿ ತಿಳಿಸಿದೆ.

Krishnaraja Sagar dam and the Kabini reservoir have dropped drastically.

ಈಗಾಗಲೇ ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿಯಲ್ಲಿ 7.920 ಬೋರ್ ವೆಲ್ ಗಳಿವೆ. ಅವುಗಳಲ್ಲಿ 938ರಲ್ಲಿ ನೀರಿಲ್ಲ. ಹೀಗಾಗಿ ನೀರು ಸರಬರಾಜು ಮಂಡಲಿ 200-400 ಬೋರ್ ವೆಲ್ ಗಳನ್ನು ಕೊರೆಯುವ ಚಿಂತನೆ ನಡೆಸಿದೆ. ಟೆಂಡರ್ ಆಧಾರದ ಮೇಲೆ ಈ ಕೆಲಸವನ್ನು ಮಾಡಲು ಹೊರಟಿದ್ದು ಕಾರ್ಯ ಮಂದಗತಿ ಪಡೆಯಲಿದೆ.[ಮೆಟ್ಟೂರು ಜಲಾಶಯದಿಂದ ನೀರು ಬಿಟ್ಟ ತಮಿಳುನಾಡು]

ಬೆಂಗಳೂರಿನಲ್ಲಿ ಇರುವ ಇತರೆ ಕೊಳವೆ ಬಾವಿಗಳು ಸರಕಾರಿ ಮಾನ್ಯತೆ ಪಡೆದಿದೆಯೋ ಇಲ್ಲವೋ ತಿಳಿದಿಲ್ಲ ಆದರೆ ನಗರ ವ್ಯಾಪ್ತಿಯಲ್ಲಿ ನೀರಿನ ಪ್ರಮಾಣ ತೀವ್ರವಾಗಿ ಕುಡಿದಿದೆ. ಹೇಗೆಂದರೆ ಈ ವ್ಯಾಪ್ತಿಯಲ್ಲಿ ಅಂತರ್ಜಲ ಸಿಗುತ್ತಿರುವುದು ಸಾವಿರ ಅಡಿಗಳಿಗಿಂತ ಹೆಚ್ಚು ಕೊರೆದಾಗ ಮಾತ್ರ.

Krishnaraja Sagar dam and the Kabini reservoir have dropped drastically.

ಅಲ್ಲದೆ ಕಾವೇರಿ ನೀರಾವರಿ ನಿಗಮಕ್ಕೆ ಬೆಂಗಳೂರು ನೀರು ಸರಬರಾಜು ನಿಗಮ ಪತ್ರ ಬರೆದಿದ್ದು, ಬೆಂಗಳೂರಿಗೆ ದಿನಕ್ಕೆ 1,400 ಎಂಎಲ್ ಡಿ ನೀರು ಬೇಕು ಅದರೆ ಮಂಡಲಿಯಿಂದ ಸರಬರಾಜಾಗುತ್ತಿರುವುದು 1.250 ಎಂಎಲ್ ಡಿ ನೀರು ಎಂದು ಹೇಳಿದೆ. ಕೆಆರ್ ಎಸ್ ಡ್ಯಾಮಿನಲ್ಲಿಯೂ ನೀರಿನಮಟ್ಟ ಕುಸಿದಿದೆ ಈಗ ಏನು ಮಾಡಬೇಕು ನೀವೇ ಹೇಳಿ?

ನೀರು ಸರಬರಾಜು ಮಂಡಲಿ ಮಳೆ ಕೊಯ್ಲಿನ ಮಾಹಿತಿಯನ್ನು ಎಲ್ಲ ನಗರ ನಿವಾಸಿಗಳಿಗೆ ತಿಳಿಸುತ್ತಿದ್ದಾರೆ. 2009 ರಿಂದಲೂ ಮಳೆಕೊಯ್ಲನ್ನು ಮನೆಗಳಿಗೆ ಮಾಡಿಸಿ ಎಂದು ಹೇಳುತ್ತಿದೆ. ಅದರೆ ವರದಿಯ ಪ್ರಕಾರ ಬೆಂಗಳೂರಿನಲ್ಲಿ 9.15 ಲಕ್ಷ ಜನ ಜಲಮಂಡಲಿಯ ನೀರಿನ ಕನೆಕ್ಷನ್ ಪಡೆದುಕೊಂಡಿದ್ದಾರೆ. ಅದರೆ ಇವರಲ್ಲಿ ಮಳೆಕೊಯ್ಲನ್ನು ಅಳವಡಿಕೊಂಡಿರುವವರು 1.4 ಲಕ್ಷ ಜನ ಅದನ್ನು ಬಳಸಿಕೊಂಡಿರುವವರು 62.00 ಮಾತ್ರ.

English summary
The Bengaluru, Mysuru and Mandya regions of Karnataka may soon face severe water shortage as the water levels in the Krishnaraja Sagar dam and the Kabini reservoir have dropped drastically.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X