ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಿಮ್ಮ ಮನೆಗೆ ಬಾಲಕೃಷ್ಣ ಬರುತ್ತಿದ್ದಾನೆ, ಬರಮಾಡಿಕೊಳ್ಳಿ

By Vanitha
|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್, 04 : "ಘಲ್ಲು ಘಲ್ಲೆನುತಾ ಗೆಜ್ಜೆ, ಘಲ್ಲು ತಾಜೆಣುತಾ, ಬಲ್ಲಿದ ರಂಗನ್ ಬಲ್ಲಿಯ ಮ್ಯಾಲೆ ಚೆಲ್ಲಿದರೋಕುಳಿಯೊ, ಆಹಾ ಚೆಲ್ಲಿದರೋಕುಳಿಯೊ,ಅರೆದರು ಅರಿಶಿಣವ ಅದಕೆ ಬೆರೆದರು ಸುಣ್ಣಾವ ಅಂದವುಳ್ಳ ರಂಗನ್ ಮ್ಯಾಲೆ ಚೆಲ್ಲಿದರೋಕುಳಿಯೊ" ಇದು ನಮ್ಮ ಮುದ್ದು, ಕಳ್ಳ, ತುಂಟ ಕೃಷ್ಣನ ಕುರಿತಾದ ಮನಸ್ಸನ್ನು ಮುದಗೊಳಿಸೋ ಸೊಗಸಾದ ಜನಪದ ಹಾಡು.

ಪುಟ್ಟದಾದ ತಲೆ, ಎಡಭಾಗದಲ್ಲೋ, ಬಲಭಾಗದಲ್ಲೋ ಕಿಲಕಿಲನೆ ನಗುವ, ನರ್ತಿಸುವ ನವಿಲುಗರಿ, ಹವಳಗಳಿಂದ ತುಂಬಿದ ರಾಜರ ಕಿರೀಟಗಳನ್ನು ನಾಚಿಸುವ ಸ್ವರ್ಣ ಕಮಲ ಭರಿತ ಕಿರೀಟ, ಹುಣ್ಣಿಮೆ ಚಂದಿರನ ಮೊಗದಲ್ಲೊಂದು ನಗು, ಪುಟಾಣಿ ದೇಹದಲ್ಲಿ ಬಿಳಿ ಮುತ್ತಿನ ಅಥವಾ ಬಂಗಾರದ ನಾನಾ ಒಡವೆಗಳು, ಕೈಯಲ್ಲಿ ಅವರಷ್ಟೇ ಉದ್ದದ ಸರಿಗಮಪ ನಾದದ ಕೊಳಲು, ಪಕ್ಕದಲ್ಲಿ ಒಂದು ಗಡಿಗೆ ತುಂಬಾ ಬೆಣ್ಣೆ.[ಮುದ್ದು ಮಕ್ಕಳ ರೂಪದಲ್ಲಿ ಅವತರಿಸಿದ್ದಾನೆ ಬೆಣ್ಣೆಕೃಷ್ಣ]

ಅಬ್ಬಬ್ಬಾ ಈ ವೇಷದಲ್ಲಿ ಪುಟ್ಟ ಪುಟ್ಟ ಹೆಜ್ಜೆ ಇಡುತ್ತಾ ಮನೆತುಂಬಾ ಓಡಾಡುವ ಮುದ್ದು ಚಿಲ್ಲಾಣಿ ಪಿಲ್ಲಾಣಿಗಳ ಭಾವಲೋಕ ಕಣ್ತುಂಬಿಕೊಳ್ಳುವ ದಿನ ಬಂದೇಬಿಡ್ತು. ಹೌದಲ್ವಾ..ಕೃಷ್ಣ ಜನ್ಮಾಷ್ಟಮಿಯಂದು ಕೃಷ್ಣನ ವೇಷ ಧರಿಸಿ ಫೋಸ್ ಕೊಡ್ತಾ, ತುಂಟತನ ಮಾಡುತ್ತಿರುವ ಮಕ್ಕಳನ್ನು ನೋಡ್ತಾ ಇದ್ರೆ ನಿಜವಾದ ನಂದ ಗೋಪಾಲ ಎಲ್ಲರ ಮನೆಯಲ್ಲಿ ಅವತರಿಸಿದ್ದಾನೆ ಎಂಬಂತೆ ಭಾಸವಾಗುತ್ತದೆ.

ನಿಮ್ಮ ಗೋಪಾಲ, ನಮ್ಮ ಗೋಪಾಲ, ಚಂದದ ಗೋಪಾಲ, ಅಂದದ ಗೋಪಾಲನ ಕುರಿತಾಗಿ ನಮ್ಮ ಒನ್ ಇಂಡಿಯಾ ಸಾಮಾಜಿಕ ಜಾಲತಾಣದಲ್ಲಿ ಕೃಷ್ಣ ವೇಷಧಾರಿತ ಮಕ್ಕಳ ಭಾವಚಿತ್ರವನ್ನು ಆಹ್ವಾನಿಸಿತ್ತು. ಇದಕ್ಕೆ ಉತ್ತಮ ಪ್ರತಿಕ್ರಿಯೆ ಬಂದಿದ್ದು, ಪೋಷಕರು ತಮ್ಮ ಮುದ್ದು ಕೃಷ್ಣನ ಭಾವಚಿತ್ರವನ್ನು ಕಳುಹಿಸಿಕೊಟ್ಟು, ನಮ್ಮೊಂದಿಗೆ ಅವರ ಸಂತಸದ ಕ್ಷಣ ಹಂಚಿಕೊಂಡಿದ್ದಾರೆ.

ನಿಜವಾಗಿಯೂ ಈ ಮಕ್ಕಳನ್ನು ಕೃಷ್ನನ ವೇಷದಲ್ಲಿ ನೋಡ್ತಾ ಇದ್ರೆ ಬಾಲ್ಯದ ಎಲ್ಲಾ ತುಂಟತನಗಳು ನೆನಪಾದವು. ಅವರ ಫೋಟೋ, ಆ ನಗು ಕಂಡು ಮುಂದಿನ ಜನ್ಮಕ್ಕೂ ಸಾಕಾಗುವಷ್ಟು ಸಂತೋಷ ಮನದಲ್ಲಿ ತುಂಬಿಕೊಂಡಿತು.

ಬನ್ನಿ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಕೃಷ್ಣನ ವೇಷ ಧರಿಸಿ ಮಕ್ಕಳು ಯಾವ ಯಾವ ಫೋಸ್ನಲ್ಲಿದ್ದಾರೆ ಎಂದು ನೋಡುತ್ತಾ ಅವರ ನಗೆ ತುಂಟಾಟದಲ್ಲಿ ಭಾಗಿಯಾಗಿ ನಾವು ಪುಟ್ಟ ಕೃಷ್ಣ, ರಾಧೆಯರಾಗೋಣ...ಬನ್ನಿ ಬನ್ನಿ ಬೇಗ ಬನ್ನಿ......

ಅಮ್ಮಾ...ಬೆಣ್ಣೆ ಕೊಡಮ್ಮಾ

ಅಮ್ಮಾ...ಬೆಣ್ಣೆ ಕೊಡಮ್ಮಾ

ಕೃಷ್ಣ ವೇಷಧಾರಿಯಾದ ಮಗು ಅಮ್ಮಾ ಬೆಣ್ಣೆ ಕೊಟ್ಟಿಲ್ಲ ಎಂದು ಬೆಣ್ಣೆ ಕೇಳುತ್ತಾ ಕೈಚಾಚಿರುವುದು ನೋಡಿ......ಈತ ಗಗನ್ ,ಬೆಂಗಳೂರು...

ಇದು ಕೃಷ್ಣನ ಅವತಾರವಲ್ಲ ನನ್ನ ಅವತಾರ

ಇದು ಕೃಷ್ಣನ ಅವತಾರವಲ್ಲ ನನ್ನ ಅವತಾರ

ವೇಣು ಗೋಪಾಲ, ಚಕ್ರದಾರಿ, ಜಗನ್ನಾಥ, ಜನಾರ್ದನ, ಮಧುಸೂದನ,ಮುಕುಂದ ಇದು ನನ್ನ ಆರು ಅವತಾರಗಳು. ಇದಕ್ಕೆ ನೀವೇನೇನು ಹೆಸರು ಕೊಡ್ತಿರಾ ಕೊಡಿ....ಹೆಸರು ಸಂಜೀವಿನಿ...12 ನೇ ತರಗತಿ, ಊರು ಉತ್ತರ ಕನ್ನಡ

ಅಮ್ಮಾ.....ಹ್ಹ...ಹ್ಹ....ಹ್ಹ....

ಅಮ್ಮಾ.....ಹ್ಹ...ಹ್ಹ....ಹ್ಹ....

ಬೇಳ್ಮಗಿಲಿನಂತಿರುವ ಕೃಷ್ಣ ರಾಧೆಯರ ನಗು ನೋಡಿ. ಇವರು ಅವಳಿ ಮಕ್ಕಳು..ಕೃಷ್ಣ ಪ್ರತ್ಯುಷ, ರಾಧೆ ಜೋಶ್ನಾ....ಊರು ಬೆಂಗಳೂರು

ಕೊಳಲು ಕಳೆದುಕೊಂಡು ಬಂದು ಅಮ್ಮಾ ಬೈತಾಳೆ ಅಂತ ನಗುವಿನಲ್ಲಿ ಅಮ್ಮಾ ನ ಯಾಮಾರಿಸ್ತಿದ್ದೀಯೇನೋ ತುಂಟ ಕೃಷ್ಣ, ಜೊತೆಗೆ ರಾಧೆ ಬೇರೆನಾ....

ಕೃಷ್ಣಾ ಕೊಂಚ ದಪ್ಪ ಆಗೋ...

ಕೃಷ್ಣಾ ಕೊಂಚ ದಪ್ಪ ಆಗೋ...

ಕೃಷ್ಣನಾ ವೇಷಧರಿಯಾದ ಮಗು ತನ್ನ ಮನೆಯಲ್ಲಿ ಫೋಸ್ ಕೊಟ್ಟಿದ್ದು ಹೀಗೆ. ಫೋಸ್ ಚಂದ ಇದೆ. ಕೊಳಲನ್ನು ಕೈಯಲ್ಲಿ ಹಿಡಿದು ನುಡಿಸಿದ್ದರೆ, ನೀನು ಒಂದು ಚೂರು ದಪ್ಪ ಇದ್ದಿದ್ರೆ ಇನ್ನು ಚಂದ ಇರ್ತಿತ್ತು...ಇವನು ರೋಹಿತ್...5 ವರ್ಷ....ಬೆಂಗಳೂರು

ಶ್ವೇತ ವಸ್ರಧಾರಿ ಕೃಷ್ಣ,

ಶ್ವೇತ ವಸ್ರಧಾರಿ ಕೃಷ್ಣ,

ಬಲು ಚಂದ ಉಂಟೋ ಮಾರಾಯ್ರೆ ನೀವು ನಿಂತ ಭಂಗಿ, ಆಹಾ ನೀನು ನುಡಿಸ್ತಿರೋ ಕೊಳಲ ನಾದ ಬಹಳ ಚಂದ ಕೇಳಿಸ್ತಿದೆ. ನನಗೋಸ್ಕರ ಇನ್ನೊಂದು ಹಾಡು ನುಡಿಸೋ ಕೃಷ್ಣ...ಈತ ಶಿನೋದ್, ಊರು ಬೆಂಗಳೂರು...

ಬಾರಮ್ಮ ನನ್ನ ಬೆನ್ನಮೇಲೆ ಕೂತ್ಕೊ

ಬಾರಮ್ಮ ನನ್ನ ಬೆನ್ನಮೇಲೆ ಕೂತ್ಕೊ

ಅಮ್ಮ ಬಾರಮ್ಮ ನನ್ನ ಬೆನ್ನ ಮೇಲೆ ಕೂತ್ಕೋ...ಬೆಣ್ಣೆ ಗಡಿಗೆ ಕೈಯಲ್ಲಿ ಹಿಡ್ಕೊ..ನಾ ಬೆಣ್ಣೆ ತಿಂತಾ ನಿನ್ನಾ ಆನೆ ಮರಿ ಮಾಡ್ತಿನಿ...ಬಾ ಬೇಗ....ಈತ ಶ್ರೀ ಹರ್ಷ ಹೆಗ್ಡೆ

ಇದು ನನ್ನ ಕೃಷ್ಣನ ಮೇಕಪ್

ಇದು ನನ್ನ ಕೃಷ್ಣನ ಮೇಕಪ್

ನಿಮಗೂ ಆಸೆ ಆಗ್ತಿದ್ದಿಯಾ ನನ್ನ ಥರ ರೆಡಿ ಆಗೋಕೆ...ಹಾಗಾದರೆ ನಾಳೆ ಕೃಷ್ಣ ಜನ್ಮಾಷ್ಟಮಿ ಬೇಗ ಹೋಗಿ ನೀವು ರೆಡಿಯಾಗಿ ಬನ್ನಿ..ಇನ್ನು ಒಳ್ಳೆ ಒಳ್ಳೆ ಫೋಸ್ ಕೊಡೋಣ.....

ಈ ಕೃಷ್ಣನ ಮುತ್ತು ಬೇಕಾ?

ಈ ಕೃಷ್ಣನ ಮುತ್ತು ಬೇಕಾ?

ಈ ಮುದ್ದು ಕೃಷ್ಣನ ಮುತ್ತುಗಳಿಗೆ ಭಾರೀ ಡಿಮ್ಯಾಂಡ್ ಇದ್ಯಪ್ಪಾ... ನಿಮಗೆ ಮುತ್ತು ಬೇಕಾದಲ್ಲಿ ಒಂದು ಗಡಿಗೆ ಬೆಣ್ಣೆಯೊಂದಿಗೆ ತಕ್ಷಣ ಭೇಟಿ ಕೊಡಿ.

ಹೂ ತೋಟದ ನಡುವೆ ವಿರಾಜಮಾನನಾದ ಕೃಷ್ಣ

ಹೂ ತೋಟದ ನಡುವೆ ವಿರಾಜಮಾನನಾದ ಕೃಷ್ಣ

ತೋಟದ ಹೂವುಗಳ ನಡುವೆ ಗಂಭೀರವಾಗಿ ಏನನ್ನೋ ನೋಡುತ್ತಿರುವ ಕೃಷ್ಣ....ಯಾಕೋ ಕೃಷ್ಣ ಅಳು ಮುಖ ಮಾಡಿಕೊಂಡಿದ್ದೀಯಾ...ಅಮ್ಮ ಸರಿಯಾಗಿ ಮೇಕಪ್ ಮಾಡಿಲ್ವೇ....

ಏಯ್ ಕಳ್ಳ ಕೃಷ್ಣ ಬೆಣ್ಣೆ ಗಡಿಗೆ ನೋಡ್ತಿದ್ದೀಯಾ....

ಏಯ್ ಕಳ್ಳ ಕೃಷ್ಣ ಬೆಣ್ಣೆ ಗಡಿಗೆ ನೋಡ್ತಿದ್ದೀಯಾ....

ನೋಡಿ ಈ ಕೃಷ್ಣ ಅಮ್ಮ ಅಡುಗೆ ಮನೆಯಲಿಟ್ಟ ಗಡಿಗೆ ಬೆಣ್ಣೆಯನ್ನೇ ನೋಡುತ್ತಿದ್ದಾನೆ..ಏಯ್ ಕಳ್ಳ ಕೃಷ್ಣ ಬೆಣ್ಣೆ ಗಡಿಗೆ ನೋಡುತ್ತಿದ್ದೀಯಾ...ಈಕೆ ರಾಗವಿ, ಬೆಂಗಳೂರು

ಬೆಣ್ಣೆ ಬಿಟ್ಟ ಕೃಷ್ಣ ಹಣ್ಣು ತಿಂದ

ಬೆಣ್ಣೆ ಬಿಟ್ಟ ಕೃಷ್ಣ ಹಣ್ಣು ತಿಂದ

ಇಲ್ಲಿರುವ ಕೃಷ್ಣನಿಗೆ ಬೆಣ್ಣೆ ತಿಂದು ತಿಂದು ಬೋರ್ ಆಗಿದ್ದೀಯಂತೆ...ಅದಕ್ಕೆ ಈಗ ಹಣ್ಣು ತಿನ್ನೊದಕ್ಕೆ ಶುರು ಮಾಡಿದ್ದಾನೆ ಈ ಕೃಷ್ಣ...ಈತನ ಹೆಸರು ಆರ್ಯನ್...ಊರು ಅತ್ತಿಬೆಲೆ...ಬೆಂಗಳೂರು

ಐ ಥಿಂಕ್...ನಥಿಂಗ್

ಐ ಥಿಂಕ್...ನಥಿಂಗ್

ಈ ಕೃಷ್ಣ ಮೋಹಕ ನಗೆ ಬೀರುತ್ತಾ ಏನನ್ನೋ ಚಿಂತಿಸುತ್ತಿದ್ದಾನೆ. ಈತ ಏನ್ ಯೋಚನೆ ಮಾಡ್ತಿದ್ದಾನೆ....ಯಾರಾದ್ರು ಹೇಳ್ತಿರಾ...ಐ ಥಿಂಕ್......

ಆಹಾ! ಅಮ್ಮ ಬೆಣ್ಣೆ ತೆಗಿತ್ತಿದ್ದಾಳೆ...

ಆಹಾ! ಅಮ್ಮ ಬೆಣ್ಣೆ ತೆಗಿತ್ತಿದ್ದಾಳೆ...

ಅಮ್ಮಾ ಮೇಲಿಟ್ಟಿರುವ ಬೆಣ್ಣೆ ಗಡಿಗೆಯನ್ನು ತೆಗೆಯುತ್ತಿರುವುದನ್ನು ನನಗೆ ಇವತ್ತು ಬೆಣ್ಣೆ ಹಬ್ಬ ಎಂದು ಚಂದದ ನಗೆ ಬೀರುತ್ತಾ ಖುಷಿಯಿಂದ ಇರೋ ಕ್ಷಣ...ಈ ಮಗುವಿನ ಹೆಸರು ಆಕರ್ಷ ಕಮಲ..ಬೆಂಗಳೂರು

ಅಮ್ಮ ಬೆಣ್ಣೆ ಗಡಿಗೆ ಖಾಲೆ ಆಯ್ತು

ಅಮ್ಮ ಬೆಣ್ಣೆ ಗಡಿಗೆ ಖಾಲೆ ಆಯ್ತು

ರತ್ನ ಕಂಬಳಿ ಹಾಸಿನ ಮೇಲೆ, ಮುತ್ತು ರತ್ನದ ಚಿತ್ತಾರದ ನಡುವೆರ ಬೆಣ್ಣೆ ಗಡಿಗೆ ಹಿಡಿದು ಕೂತಿರುವ ನಮ್ಮ ಪುಟಾಣಿ ಕೃಷ್ಣನ ನೋಡ್ರಿ...ಬೆಣ್ಣೆ ಖಾಲಿ ಮಾಡಿ ಇನ್ನೊಂದು ಗಡಿಗೆ ಬೆಣ್ಣೆ ಬೇಕು ಎಂದು ಕೇಳುವ ಛಾನ್ಸ್ ಜಾಸ್ತಿ ಇದೆ.

ಇವನು ಕನ್ನಡಿಯ ಕೃಷ್ಣ

ಇವನು ಕನ್ನಡಿಯ ಕೃಷ್ಣ

ಇಲ್ಲಿ ಇಬ್ಬರು ಕೃಷ್ಣರಿದ್ದಾರೆ ಒಂದು ಬಿಂಬ, ಇನ್ನೊಂದು ಪ್ರತಿಬಿಂಬ..ಈತ ದಾವಣಗೆರೆಯ ಕೃಷ್ಣ..ಇವನ ಹೆಸರು ಧೀರಜ್ ಎಂ.ಡಿ...ಮರಾಡಿ ಹಳ್ಳಿ, ಚೆನ್ನಗಿರಿ, ದಾವಣಗೆರೆ

English summary
All over india celebrate Krishna janmashtami on Saturday, September 5th. Wish You Happy Krishna Janmashtami.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X