ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಬಿಎಂಪಿ ವಿಭಜನೆ ಮಾಡಿ, ಕಾಂಗ್ರೆಸ್ ಸಮಿತಿ

|
Google Oneindia Kannada News

ಬೆಂಗಳೂರು, ನ. 18 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಿಭಜನೆ ಕುರಿತು ವರದಿ ನೀಡಲು ಕೆಪಿಸಿಸಿ ರಚಿಸಿದ್ದ ಸಮಿತಿ ಬಿಬಿಎಂಪಿಯನ್ನು ಮೂರು ಭಾಗಗಳಾಗಿ ವಿಭಜನೆ ಮಾಡಬಹುದು ಎಂದು ಅಭಿಪ್ರಾಯಪಟ್ಟಿದೆ. ಸದ್ಯದಲ್ಲೇ ಸಮಿತಿಯ ವರದಿ ಸಿಎಂ ಸಿದ್ದರಾಮಯ್ಯ ಕೈ ಸೇರಲಿದೆ.

ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರು ಬಿ.ಎಲ್.ಶಂಕರ್ ನೇತೃತ್ವದಲ್ಲಿ ಸಮಿತಿ ರಚಿಸಿ, ಬಿಬಿಎಂಪಿ ವಿಭಜನೆ ಕುರಿತು ವರದಿ ನೀಡುವಂತೆ ಸೂಚಿಸಿದ್ದರು. ಹಲವಾರು ಸುತ್ತಿನ ಸಭೆ ನಡೆಸಿ ಬಿಬಿಎಂಪಿ ಸದಸ್ಯರ ಅಭಿಪ್ರಾಯ ಸಂಗ್ರಹಿಸಿರುವ ಸಮಿತಿ ಪಾಲಿಕೆ ವಿಭಜನೆ ಮಾಡಬಹುದು ಎಂದು ಅಭಿಪ್ರಾಯಪಟ್ಟಿದೆ.

bbmp

ಹಿಂದೆ ಇದ್ದ 100 ವಾರ್ಡ್‌ಗಳನ್ನು ಹಾಗೆಯೇ ಉಳಿಸಿಕೊಳ್ಳಬೇಕು, ಉಳಿದ 98 ವಾರ್ಡ್‌ಗಳನ್ನು ಎರಡು ಭಾಗಗಳಾಗಿ ವಿಂಗಡಿಸಬೇಕು ಎಂದು ಸಮಿತಿ ಅಭಿಪ್ರಾಯಪಟ್ಟಿದ್ದು, ವರದಿ ಸಿದ್ಧಪಡಿಸುತ್ತಿದೆ. ಶೀಘ್ರವೇ ಈ ವರದಿಯನ್ನು ಸಿಎಂ ಸಿದ್ದರಾಮಯ್ಯ ಅವರಿಗೆ ಸಲ್ಲಿಸಲಾಗುತ್ತದೆ. [ಬಿಬಿಎಂಪಿ ವಿಭಜನೆ ನಿರ್ಧಾರಕ್ಕೆ ಸದಸ್ಯರ ವಿರೋಧ]

ಬಿಬಿಎಂಪಿ ವಿಭಜನೆ ಮಾಡುವ ಕುರಿತು ರಚಿಸಿದ್ದ ನಿವೃತ್ತ ಮುಖ್ಯಕಾರ್ಯದರ್ಶಿ ಬಿ.ಎಸ್.ಪಾಟೀಲ್ ಹಾಗೂ ನಿವೃತ್ತ ಬಿಬಿಎಂಪಿ ಆಯುಕ್ತ ಸಿದ್ದಯ್ಯ ಅವರ ಸಮಿತಿಯೂ ಪಾಲಿಕೆಯನ್ನು ಮೂರು ವಿಭಾಗ ಮಾಡುವುದು ಸೂಕ್ತ ಎಂದು ಅಭಿಪ್ರಾಯಪಟ್ಟಿತ್ತು. [ಬಿಬಿಎಂಪಿ ವಿಭಜನೆಯ ಸುಳಿವು ಕೊಟ್ಟ ಸಿದ್ದರಾಮಯ್ಯ?]

ಕಟ್ಟೆ ಸತ್ಯನಾರಾಯಣ ಅವರು ಪಾಲಿಕೆ ಮೇಯರ್ ಆಗಿದ್ದ ಅವಧಿಯಲ್ಲಿ ವಿಶೇಷ ಕೌನ್ಸಿಲ್ ಸಭೆ ನಡೆಸಿ, ಪಾಲಿಕೆ ವಿಭಜನೆ ಕುರಿತು ಬಿಬಿಎಂಪಿ ಸದಸ್ಯರ ಅಭಿಪ್ರಾಯ ಕೇಳಲಾಗಿತ್ತು. ಆಗ ಪಾಲಿಕೆ ವಿಭಜನೆ ಬೇಡ ಎಂಬ ಅಭಿಪ್ರಾಯ ವ್ಯಕ್ತವಾಗಿದ್ದು ಈ ಕುರಿತ ನಿರ್ಣಯವನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ.

ಸರ್ಕಾರ ಬಿಬಿಎಂಪಿ ವಿಭಜನೆ ಮಾಡಿದರೆ ಆಡಳಿತ ನಡೆಸಲು ಅನುಕೂಲವಾಗುತ್ತದೆ. ಒಬ್ಬರು ಮೇಯರ್ ಮತ್ತು ಒಬ್ಬರು ಆಯುಕ್ತರಿಗೆ ಉಂಟಾಗುವ ಕೆಲಸದ ಹೊರೆ ತಪ್ಪುತ್ತದೆ ಎಂದು ಪಾಲಿಕೆ ವಿಭಜನೆಗೆ ಚಿಂತನೆ ನಡೆಸುತ್ತಿದೆ. ಆದರೆ, ಪಾಲಿಕೆಯಲ್ಲೇ ಇದಕ್ಕೆ ಅಪಸ್ವರ ಕೇಳಿಬಂದಿದೆ.

English summary
A team formed by the KPCC headed by senior Congress leader B.L.Shankar favors on splitting Bruhat Bangalore Mahanagara Palike (BBMP). Team will submit its report to chief minister soon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X