ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೋರಮಂಗಲ ನಿವಾಸಿಗಳು ಬೀದಿಗೆ ಇಳಿಯುತ್ತಿರುವುದು ಯಾಕೆ?

|
Google Oneindia Kannada News

ಬೆಂಗಳೂರು, ಜನವರಿ, 27: "ಸೇವ್ ವೈಟ್ ಫೀಲ್ಡ್" ಅಭಿಯಾನಕ್ಕೆ ಯಶಸ್ಸು ಸಿಕ್ಕ ಬೆನ್ನಲ್ಲೆ ಇದೀಗ ಕೋರಮಂಗಲದ ನಿವಾಸಿಗಳು ಬೀದಿಗೆ ಇಳಿಯಲು ನಿರ್ಧಾರ ಮಾಡಿದ್ದಾರೆ.

ಮೂಲ ಸೌಕರ್ಯ ಕೊರತೆ ಖಂಡಿಸಿ ಕೋರಮಂಗಲದ ನಿವಾಸಿಗಳು ಜನವರಿ 31, ಭಾನುವಾರ ಸಂಜೆ 5ರಿಂದ 6 ಗಂಟೆ ನಡುವೆ ಸೋನಿ ವರ್ಲ್ಡ್ ಜಂಕ್ಷನ್ ಬಳಿ ಶಾಂತಿಯುತ ಪ್ರತಿಭಟನೆ ನಡೆಸಲಿದ್ದಾರೆ. 500 ಕ್ಕೂ ಹೆಚ್ಚು ನಿವಾಸಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿ ಹಕ್ಕಿಗೆ ಆಗ್ರಹಿಸಲಿದ್ದಾರೆ.[ಕೋರಮಂಗಲದ ಕಪ್ಪು ಸುಂದರ ಹಾರ್ನ್ ಗೆಲ್ಲ ಜಗ್ಗಲ್ಲ!]

koramangala

ಮೂಲ ಸೌಕರ್ಯ ಕೊರತೆ, ಕಿತ್ತು ಹೋಗಿರುವ ರಸ್ತೆಗಳು, ವಾಯು ಮಾಲಿನ್ಯ, ಪರಿಸರ ಸಂರಕ್ಷಣೆ ಎಲ್ಲವನ್ನು ಇಟ್ಟುಕೊಂಡು ಪ್ರತಿಭಟನೆ ನಡೆಸಲಾಗುತ್ತಿದೆ. ಕೆಲ ಕಾಮಗಾರಿಗಳು ಅನಗತ್ಯ ಟ್ರಾಫಿಕ್ ಸಮಸ್ಯೆ ಸೃಷ್ಟಿಗೆ ಕಾರಣವಾಗಿದೆ. ಈಜಿಪುರ ಮತ್ತು ಕೇಂದ್ರಿಯ ಸದನದ ನಡುವೆ ಸರಿಯಾದ ರಸ್ತೆ ನಿರ್ಮಾಣ ಮಾಡಿದರೆ ಅರ್ಧಕರ್ಧ ಟ್ರಾಫಿಕ್ ಸಮಸ್ಯೆ ನಿವಾರಣೆ ಮಾಡಬಹುದು ಎಂದು ಸ್ಥಳೀಯ ನಿವಾಸಿ ನಿತಿನ್ ಶೇಷಾದ್ರಿ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.[ವೈಟ್ ಫೀಲ್ಡ್‌ ನಿವಾಸಿಗಳು ಪ್ರತಿಭಟನೆ ನಡೆಸಿದ್ದು ಯಾಕೆ?]

ಒಟ್ಟಿನಲ್ಲಿ ಇದೀಗ ಬೆಂಗಳೂರಿನ ಪ್ರಮುಖ ಏರಿಯಾದ ಮತ್ತಷ್ಟು ಟೆಕ್ಕಿಗಳು ಬೀದಿಗೆ ಇಳಿಯಲಿದ್ದು ಸರ್ಕಾರ ಯಾವ ಕ್ರಮ ತೆಗೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕು.

English summary
After a successful "Save Whitefield" campaign, now Kormanagala residents of Bengaluru, are all set to hold a protest rally against the poor infrastructure of the locality and heavy traffic grievances. The protest rally will be held on Sunday, January 31 on the pavement lining the Sony World Junction, from 5 pm to 6 pm and around 500 residents are expected to join hands together to hold a peaceful protest.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X