ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನೆಟ್ ನ್ಯೂಟ್ರಾಲಿಟಿ ಎಂದರೇನು? ನಾವೇನು ಮಾಡ್ಬೇಕು?

By ರಾಘವೇಂದ್ರ ಅಡಿಗ
|
Google Oneindia Kannada News

ಎಲ್ಲರಿಗೂ ಸಮಾನ ಇಂಟರ್ ನೆಟ್ ಬಳಕೆಯ ಚರ್ಚೆ ದಿನೇ ದಿನೇ ಕಾವೇರುತ್ತಿದೆ. ಟೆಲಿಕಾಂ ಸಂಸ್ಥೆಗಳ ಲಾಬಿ, ಎಲ್ಲಕ್ಕೂ ದುಡ್ಡು ನೀಡಬೇಕಾದ ಅನಿವಾರ್ಯತೆ ಜೊತೆಗೆ ಗ್ರಾಹಕರು ಎಚ್ಚೆತ್ತುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ಚರ್ಚೆ ನಡುವೆ ಆನ್ ಲೈನ್ ಶಾಪಿಂಗ್ ಸಂಸ್ಥೆ ಫ್ಲಿಪ್ಕಾರ್ಟ್, ಟೆಲಿಕಾಮ್ ಸೇವೆಗಳ ಏರ್ಟೆಲ್ ಸಂಸ್ಥೆಯ ಜೊತೆ ಮಾಡಿಕೊಂಡಿದ್ದ ಒಪ್ಪಂದದಿಂದ ಏರ್ಟೆಲ್-ಜೀರೋ ಯೋಜನೆಯಿಂದ ಹೊರ ನಡೆದಿದೆ. [ಬೆಲೆ ಏರಿಕೆ ವಿರೋಧಿಸಿ ಇಂಟರ್ನೆಟಿಗೆ ಬಹಿಷ್ಕಾರ]

"ಏರ್ಟೆಲ್ ಸಂಸ್ಥೆಯ ಏರ್ಟೆಲ್-ಜೀರೋವೇದಿಕೆಯಿಂದ ನಾನು ಹೊರನಡೆಯುತ್ತಿದ್ದೇವೆ. ನಾವು ಭಾರತದಲ್ಲಿ ಇಂಟರ್ ನೆಟ್ ತಾಟಸ್ಥ್ಯದಕೂಗಿಗೆ ಬೆಂಬಲ ನೀಡಲಿದ್ದೇವೆ" ಎಂದು ಸಂಸ್ಥೆಯ ವಕ್ತಾರ ತಿಳಿಸಿದ್ದಾರೆ. [ಇಂಟರ್ನೆಟ್ ನಲ್ಲಿ ಸ್ವಾತಂತ್ರ್ಯಕ್ಕೆ ಸುಪ್ರೀಂಕೋರ್ಟ್ ಅಸ್ತು]

"ಇಂಟರ್ ನೆಟ್ ತಾಟಸ್ಥ್ಯ (Net Neutrality) ದ ಸಮುದಾಯದ ಉತ್ಸಾಹದ ಜೊತೆ ನಾವು ಕೈಜೋಡಿಸಲಿದ್ದೇವೆ. ಯಾವುದೇ ಸೇವೆಕೊಡುವ, ಆ ಸೇವೆ ನಿಡುವ ಸಂಸ್ಥೆ ಎಷ್ಟೇ ದೊಡದಾಗಿದ್ದರೂ ತಾರತಮ್ಯ ಇರಬಾರದು ಎಂಬುದು ನಮ್ಮ ನಂಬಿಕೆ" ಎನ್ನುವುದು ಫ್ಲಿಪ್ಕಾರ್ಟ್, ನುಡಿ. ಹಾಗಾದರೆ ಇಂಟರ್ ನೆಟ್ ತಾಟಸ್ಥ್ಯ ಎಂದರೇನು? ಇದರ ಮಹತ್ವ ಏನು? ಇಲ್ಲಿದೆ ಮಾಹಿತಿ...

ಇಂಟರ್ ನೆಟ್ ತಾಟಸ್ಥ್ಯ ಎಂದರೇನು?

ಇಂಟರ್ ನೆಟ್ ತಾಟಸ್ಥ್ಯ ಎಂದರೇನು?

ಇದೊಂದು ಆಂದೋಲನವಾಗಿದ್ದು ಈ ಆಂದೋಲನ ಅಂತರ್ಜಾಲ ಮುಕ್ತ ಬಳಕೆಗೆ ಬೆಂಬಲವಾಗಿರುತ್ತದೆ. ಇದು ಟೆಲಿಕಾಂ ಕಂಪನಿಗಳಿಗೆ ಗ್ರಾಹಕನ ಅಂತರ್ಜಾಲ ಬಳಕೆಯನ್ನು ನಿಯಂತ್ರಿಸುವುದನ್ನು ವಿರೋಧಿಸುತ್ತದೆ.

ಅಂತರ್ಜಾಲದ ಮುಕ್ತ ಬಳಕೆ ಇದರ ಮೂಲ ಉದ್ದೇಶವಾಗಿರುತ್ತದೆ. ಅದರಂತೆ ಎಲ್ಲಾ ಜಾಲತಾಣಗಳೂ,ಮಾಹಿತಿ ವಿನಿಮಯಗಳೂ ಒಂದೇ ವೇಗದಲ್ಲಿ ಗ್ರಾಹಕರಿಗೆ ದೊರೆಯಬೇಕು. ಸೇವಾ ಪೂರೈಕೆದಾರರಿಂದ ಡೇಟಾಪ್ಯಾಕ್ ಪಡೆದ ಬಳಕೆದಾರರು ತಾವು ನಿರ್ಧರಿಸಿದ ಜಾಲತಾಣ ಹಾಗು ಅಪ್ಲಿಕೇಷನ್ ಗಳನ್ನು ಮುಕ್ತವಾಗಿ ಬಳಸುವಂತಾಗ ಬೇಕು ಎನ್ನುವುದೇ ಇದರ ಮುಖ್ಯ ಗುರಿ.

ಅಂತರ್ಜಾಲದಲ್ಲಿ ಅಸಮಾನತೆ

ಅಂತರ್ಜಾಲದಲ್ಲಿ ಅಸಮಾನತೆ

ವಿಶ್ವಾದ್ಯಂತ ಮುಕ್ತ ಮಾಹಿತಿ ಹಂಚುವ ಅಂತರ್ಜಾಲವನ್ನು ಸುಮಾರು 292 ಕೋಟಿ ಮಂದಿ ಬಳಸುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ.

ಆದರೆ,ಸೇವಾ ಕಂಪನಿಗಳು ತಮಗೆ ಹಣ ನೀಡುವ ಕಂಪೆನಿಗಳ ಜಾಲತಾಣ ಉಚಿತವಾಗಿ ನೋಡಲು ಅವಕಾಶ ನೀಡುತ್ತದೆ ಅಥವಾ ವೇಗವಾಗಿ ಓಪನ್ ಆಗುವಂತೆ ಮಾಡುತ್ತದೆ.

ಯಾರು ಸೇವಾ ಕಂಪೆನಿಗಳಿಗೆ ಹಣ ನೀಡುವುದಿಲ್ಲವೋ ಆಕಂಪೆನಿಗಳ ಜಾಲತಾಣ ಬ್ಲಾಕ್ ಮಾಡುತ್ತಾರೆ ಅಥವಾ ತಡವಾಗಿ ಓಪನ್ ಆಗುವಂತೆ ವ್ಯವಸ್ಥೆ ರೂಪಿಸುತ್ತದೆ. ಹೀಗೆ ಜಾಲ ತಾಣಗಳು ಹಾಗೂ ಗ್ರಾಹಕರಿಂದ ಹಣ ಪೀಕುವ ಈ ಲಾಬಿಯು ನಮಗೇ ಗೊತ್ತಿಲ್ಲದೆ ನಡೆಯುವ ಪ್ರಕ್ರಿಯೆ.

ಅಂತರ್ಜಾಲದಲ್ಲಿ ಪೈಪೋಟಿ

ಅಂತರ್ಜಾಲದಲ್ಲಿ ಪೈಪೋಟಿ

ಗೂಗಲ್, ಯಾಹೂ ಇತ್ಯಾದಿ ದೈತ್ಯ ಕಂಪನಿಗಳು ಟೆಲಿಕಾಂ ಸಂಸ್ಥೆಗಳಿಗೆ ಅಪಾರ ಪ್ರಮಾಣದ ಹಣ ನೀಡಿ ತಮ್ಮ ತಾಣಗಳು ಸುಲಭವಾಗಿ ಲಭ್ಯವಾಗುವಂತೆ ನೋಡಿಕೊಳ್ಳುತ್ತವೆ.

ಆದರೆ, ಉತ್ತಮ ಉದ್ದೇಶದೊಡನೆ ಪ್ರಾರಂಭವಾದ ಚಿಕ್ಕ ಸಂಸ್ಥೆಗಳಿಗೆ ಟೆಲಿಕಾಂ ಸಂಸ್ಥೆಗಳು ಕೇಳಿದಷ್ಟು ಹಣ ಸಂದಾಯಿಸಲು ಸಾಧ್ಯವಾಗುವುದಿಲ್ಲ. ಇದರಿಂದ ಅಂತರ್ಜಾಲದಲ್ಲಿನ ಸಹಜ ಪೈಪೋಟಿಗೆ ಅಡ್ಡಿಯಾಗುತ್ತದೆ. ಇದೇ ಕಾರಣದಿಂದ ಜಗತ್ತಿನ ನಾನಾ ದೇಶಗಳು ಅಂತರ್ಜಾಲ ತಾಟಸ್ತ್ಯ ನೀತಿಯನ್ನು ಅನುಸರಿಸುತ್ತಿವೆ.
ವಿದೇಶಗಳಲ್ಲಿ ಅಂತರ್ಜಾಲ ತಾಟಸ್ತ್ಯ

ವಿದೇಶಗಳಲ್ಲಿ ಅಂತರ್ಜಾಲ ತಾಟಸ್ತ್ಯ

ಸೇವಾಪೂರೈಕೆದಾರರ ಈ ಲಾಬಿಯ ವಿರುದ್ಧ ಮೊದಲಿಗೆ ಅಮೆರಿಕದಲ್ಲಿ ಬೃಹತ್ ಮಟ್ಟದ ಅಭಿಯಾನವೇ ನಡೆಯಿತು.ಜನರ ಅಭಿಪ್ರಾಯಕ್ಕೆ ಮಣಿದ ಅಧ್ಯಕ್ಷ ಒಬಾಮಾ ಸರಕಾರ ನೆಟ್ ಸಮಾನತೆಗಾಗಿ ಒಂದು ವಿಧೇಯಕವನ್ನು ಮಂಡಿಸಿ ಸೆನೆಟ್ ನಲ್ಲಿ ಅಂಗೀಕರಿಸಿತು.

ಭಾರತದಲ್ಲಿ ಅಂತರ್ಜಾಲ ತಾಟಸ್ತ್ಯ

ಭಾರತದಲ್ಲಿ ಅಂತರ್ಜಾಲ ತಾಟಸ್ತ್ಯ

2006: ನೆಟ್ ಸಮಾನತೆಯ ಕುರಿತು ಅಭಿಪ್ರಾಯಗಳನ್ನು ನೀಡುವಂತೆ ಸೇವಾ ಪೂರೈಕೆದಾರರಿಗೆ ಟ್ರಾಯ್ ಸೂಚನೆ.

2012 ಫೆಬ್ರವರಿ: ಯೂಟ್ಯೂಬ್ ನಂಥ ಕಂಪನಿಗಳು ತಮ್ಮ ಆದಾಯದ ಭಾಗವನ್ನು ಸೇವಾ ಪೂರೈಕೆದಾರರೊಂದಿಗೆಹಂಚಿಕೊಳ್ಳಬೇಕು ಎಂದು ಏರ್ ಟೆಲ್ ಮುಖ್ಯಸ್ಥ ಸುನಿಲ್ ಭಾರತಿ ಮಿತ್ತಲ್ ಅವರು ಸಲಹೆ ನೀಡಿದ್ದರು.

ಗೂಗಲ್,ಫೇಸ್ ಬುಕ್ ಅನ್ನು ಗ್ರಾಹಕರು ಉಚಿತವಾಗಿ ಬಳಸಬೇಕಾದರೆ ಆ ಕಂಪನಿಗಳು ಆದಾಯದ ಭಾಗವನ್ನು ನೀಡಬೇಕು ಎಂದು ಅದೇ ವರ್ಷ ಜುಲೈನಲ್ಲಿ ಕಂಪನಿಯು ಹೇಳಿತ್ತು.

2014 ಫೆಬ್ರವರಿ: ವಾಟ್ಸಪ್, ಸ್ಕೈಪ್ ಮತ್ತು ಲೈನ್ ನಂಥ ಅಪ್ಲಿಕೇಷನ್ ಗಳು ಸೇವಾ ಪೂರೈಕೆದಾರರಿಗೆ ಹಣನೀಡಬೇಕು ಎಂದು ಏರ್ ಟೆಲ್, ಟ್ರಾಯ್ ಗೆ ಪ್ರಸ್ತಾವನೆ.

ಭಾರತದಲ್ಲಿ ಅಂತರ್ಜಾಲ ತಾಟಸ್ತ್ಯ

ಭಾರತದಲ್ಲಿ ಅಂತರ್ಜಾಲ ತಾಟಸ್ತ್ಯ

27 ಮಾರ್ಚ್ 2015: ಭಾರತದಲ್ಲಿ ನೆಟ್ ಸಮಾನತೆಯ ಕಾನೂನುಗಳನ್ನು ಜಾರಿಗೆ ತರುವುದರಿಂದ ಆಗುವಪ್ ರಯೋಜನವೇನು ಎಂಬ ಕುರಿತು ಟ್ರಾಯ್ 117 ಪುಟಗಳ ಸಮಾಲೋಚನಾ ವರದಿಯನ್ನು ಬಿಡುಗಡೆ ಮಾಡಿತ್ತು.

2015 ಏಪ್ರಿಲ್ 6: ಏರ್ ಟೆಲ್ 'ಏರ್ ಟೆಲ್ ಜೀರೊ' ಎಂಬ ಯೋಜನೆಯೊಂದನ್ನು ಜಾರಿಗೆ ತಂದಿತು.ಬಳಕೆದಾರರು ನಿರ್ದಿಷ್ಟ ಅಪ್ಲಿಕೇಷನ್ ಗಳನ್ನಷ್ಟೇ ಉಚಿತವಾಗಿ ಬಳಸುವುದು ಹಾಗೂ ಗ್ರಾಹಕರು ಉಚಿತವಾಗಿ ಬಳಸುವ ಅಪ್ ಗಳು ಏರ್ ಟೆಲ್ ಗೆ ಶುಲ್ಕ ಕಟ್ಟಬೇಕೆಂಬುದು ಇದರ ಉದ್ದೇಶ. ಟೋಲ್ ಫ್ರೀ ಸಂಖ್ಯೆಗಳಿಗೆ ಉಚಿತವಾಗಿ ಕರೆ ಮಾಡುವುದರಿಂದ ಕಂಪನಿಗೆ ನಷ್ಟವಾಗುತ್ತದೆ. ಇದನ್ನು ತುಂಬಿಕೊಳ್ಳಲು ಈ ನೀತಿ ಅನುಸರಿಸುತ್ತಿದ್ದೇವೆ ಎಂದು ಏರ್ ಟೆಲ್ ಸಬೂಬು.

ಎಐಬಿ ಎಂಬ ಕಾಮಿಡಿ ಗುಂಪು ವಿಡಿಯೋ

2015 ಏಪ್ರಿಲ್ 11: ಭಾರತದಲ್ಲಿ ನೆಟ್ ಸಮಾನತೆ ಕಾನೂನು ಜಾರಿಗೆ ತರಬೇಕೆಂದು ಪ್ರಾರಂಭವಾಗಿರುವ ಅಭಿಯಾನದ ಭಾಗವಾಗಿ ಎಐಬಿ ಎಂಬ ಕಾಮಿಡಿ ಗುಂಪು ಈ ಕುರಿತ ವಿಡಿಯೊವನ್ನು ಯೂಟ್ಯೂಬ್ ನಲ್ಲಿ ಬಿಡುಗಡೆಮಾಡಿತು. ಇದನ್ನು ವೀಕ್ಷಿಸಿದ ಲಕ್ಷಾಂತರ ಜನರು ಅಭಿಯಾನದಲ್ಲಿ ಪಾಲ್ಗೊಳ್ಳಲು ನಿರ್ಧರಿಸಿದರು. ಯೂಟ್ಯೂಬ್ ನಲ್ಲಿ ಈವಿಡಿಯೊ ಲಿಂಕ್ ಅನ್ನು ಫೇಸ್ ಬುಕ್ ಕಂಪನಿಯು ಡಿಲಿಟ್ ಮಾಡಿತು.

ನೀವೇನು ಮಾಡಬೇಕು?

ನೀವೇನು ಮಾಡಬೇಕು?

ಅಂತರ್ಜಾಲ ತಟಸ್ಥನೀತಿ ಬಗ್ಗೆ ಟ್ರಾಯ್ ಗ್ರಾಹಕರ ಪ್ರತಿಕ್ರಿಯೆ ಕೇಳಿದ್ದು, ಅದನ್ನು ಸಲ್ಲಿಸಲು ಏ.27 ಕೊನೆಯ ದಿನವಾಗಿದೆ. ಅಂತರ್ಕಜಾಲ ತಾಟಸ್ತ್ಯಕ್ಕಾಗಿ ನೀವು ಟ್ರಾಯ್ ಗೆ ಮನವಿ ಮಾಡಬಹುದು ಅಥವಾ ಸೇವ್ ಇಂಟರ್ ನೆಟ್ ಮೂಲಕ ಟ್ರಾಯ್ ಗೆ ಸುಲಭವಾಗಿ ಮನವಿ ಸಲ್ಲಿಸಬಹುದು. ಈಗಾಗಲೇ 1 ಲಕ್ಷಕ್ಕೂ ಅಧಿಕ ಜನ ಮನವಿ ಸಲ್ಲಿಸಿದ್ದಾರೆ.ಗ್ರಾಹಕ ಸ್ನೇಹಿ ಮುಕ್ತ ಮಾಹಿತಿ ವಿಮಯಕ್ಕೆ ಪೂರಕವಾಗುವಂತೆ ಅಂತರ್ಜಾಲ ತಟಸ್ಥ ನೀತಿಯನ್ನು ನೀವುಬೆಂಬಲಿಸುವುದಾದರೆ ನೀವು ಈ ಕೆಳಗಿನ ಜಾಲತಾಣಗಳಲ್ಲಿ ಮನವಿ/ಹಕ್ಕೊತ್ತಾಯ ಮಾದಬಹುದು.
ಮನವಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
ಟ್ರಾಯ್ ಗೆ ಹಕ್ಕೊತ್ತಾಯ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಸಾರ್ವಜನಿಕರ ಅಭಿಪ್ರಾಯ ಹೇಗಿದೆ

ಸಾರ್ವಜನಿಕರ ಅಭಿಪ್ರಾಯ ಹೇಗಿದೆ ವಿಡಿಯೋ ನೋಡಿ

English summary
With internet freedom on the brink of facing extinction, the social media is abuzz with trending hashtags like #NetNeutrality and #SaveTheInternet. At the time when Internet has become an integral and incredible part of one's life, the Internet Service Providers are trying to control it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X