ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸ್ಟೀಲ್ ಬ್ರಿಡ್ಜ್ ಟೆಂಡರ್ ಗೊಂದಲಕ್ಕೆ ಜಾರ್ಜ್ ಕೊಟ್ಟ ಉತ್ತರವೇನು?

By Mahesh
|
Google Oneindia Kannada News

ಬೆಂಗಳೂರು, ಅಕ್ಟೋಬರ್ 13: ಕರ್ನಾಟಕ ಸರ್ಕಾರದ ಉದ್ದೇಶಿತ ಉಕ್ಕಿನ ಮೇಲ್ಸೇತುವೆ ಕಾಮಗಾರಿ ಟೆಂಡರ್ ನಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪಗಳು ಕೇಳಿ ಬಂದಿದೆ. ಯೋಜನೆ ಬಗ್ಗೆ ಪ್ರತಿಭಟನೆಗಳು ಆರಂಭವಾಗುತ್ತಿದೆ. ಇದಕ್ಕೆ ಪ್ರತಿಕ್ರಿಯೆ ರೂಪದಲ್ಲಿ ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ಅವರು ಯೋಜನೆಯ ಸವಿವರವುಳ್ಳ ಪ್ರಶ್ನೋತ್ತರ ಕಡತವನ್ನು ಗುರುವಾರ ಟ್ವೀಟ್ ಮಾಡಿದ್ದಾರೆ.

ಉಕ್ಕಿನ ದರ ಗಣನೀಯವಾಗಿ ಕಡಿಮೆಯಾದರೂ (ಪ್ರತಿ ಟನ್‌ ಉಕ್ಕಿಗೆ 46 ಸಾವಿರ ರು ನಷ್ಟಿದ್ದ ದರ ಈಗ 40 ಸಾವಿರ ರುಗಳಿಗೆ ಇಳಿದಿದೆ) ಈ ಮಾಹಿತಿಯಲ್ಲಿ ಯೋಜನಾ ವೆಚ್ಚ 1350 ಕೋಟಿ ರು ಎಂದಿದೆ. ಗುತ್ತಿಗೆದಾರರಿಗೆ 1,350 ಕೋಟಿ ರು ಬದಲಿಗೆ 1,791 ಕೋಟಿ ರು ನೀಡುತ್ತಿರುವುದು ಏಕೆ ಎಂಬ ಪ್ರಶ್ನೆ(ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಕೇಳಿದ್ದು)ಗೆ ಜಾರ್ಜ್ ಉತ್ತರಿಸುವ ಪ್ರಯತ್ನ ಮಾಡಿದ್ದಾರೆ. [ಸ್ಟೀಲ್ ಬ್ರಿಡ್ಜ್ ಗೆ ತಡೆ ನೀಡಲು ಹೈಕೋರ್ಟ್ ನಕಾರ]

KJ George Shares BDA FAQs document on Steel Flyover via Twitter

'ಟೆಂಡರ್‌ ಕರೆಯುವಾಗ ನಾವು 2014 -15ರ ಎಸ್‌ಆರ್‌ ದರ ವನ್ನು ನಮೂದಿಸಿದ್ದೆವು. ಗುತ್ತಿಗೆದಾರರು ಫ್ಯಾಬ್ರಿಕೇಟ್‌ ಮಾಡಿದ ಉಕ್ಕಿಗೆ ಈಗ ಶೇಕಡಾ 14.5 ಮೌಲ್ಯವರ್ಧಿತ ತೆರಿಗೆ ನೀಡಬೇಕಾಗುತ್ತದೆ. ಹಾಗಾಗಿ ವೆಚ್ಚ ಹೆಚ್ಚಾಗಲಿದೆ' ಎಂದು ಸಚಿವ ಜಾರ್ಜ್ ಸಮರ್ಥಿಸಿಕೊಂಡಿದ್ದಾರೆ.[ಸ್ಟೀಲ್ ಮೇಲ್ಸೇತುವೆ ನಿರ್ಮಾಣ ವಿರೋಧಿಸಿ ಅಕ್ಟೋಬರ್ 16ಕ್ಕೆ ಪ್ರತಿಭಟನೆ]

ಯೋಜನೆಗಾಗಿ ಭೂಸ್ವಾಧೀನ ಪ್ರಕ್ರಿಯೆ ಎಲ್ಲೆಲ್ಲಿ ನಡೆಸಲಾಗುತ್ತದೆ. ಪಾರಂಪರಿಕ ಕಟ್ಟಡಗಳ ಅಳಿವು ಉಳಿವು, ಯೋಜನಾ ವೆಚ್ಚ ಮುಂತಾದ ಮಾಹಿತಿಗಳನ್ನು ಸಚಿವರು ಹಂಚಿಕೊಂಡಿದ್ದಾರೆ. ಉಕ್ಕಿನ ಸೇತುವೆ ಉದ್ದ 6,687 ಮೀಟರ್‌. [ಸ್ಟೀಲ್ ಫ್ಲೈ ಓವರ್ ನಿಂದ ತೆರಿಗೆ ಹಣ ಲೂಟಿ : ಎಎಪಿ]

ಆದರೆ, Rampಗಳ ಉದ್ದವನ್ನೂ ಸೇರಿಸಿದರೆ ಈ ಸೇತುವೆ ಉದ್ದ 11,134 ಮೀಟರ್‌ ಆಗಲಿದೆ ಎಂದು ಸಚಿವರು ಹೇಳಿದ್ದಾರೆ. ಸಾರ್ವಜನಿಕ ಅಭಿಪ್ರಾಯ ಪಡೆದಾಗ ಶೇ 73ರಷ್ಟು ಮಂದಿ ಯೋಜನೆಯನ್ನು ಬೆಂಬಲಿಸಿದ್ದಾರೆ ಎಂದು ಸಚಿವರು ಹೇಳಿಕೊಂಡಿದ್ದಾರೆ.

ಈ ಯೋಜನೆಗೆ ಪರಿಸರ ಇಲಾಖೆಯ ಅನುಮತಿ ಅಗತ್ಯ ಇಲ್ಲ, ಯೋಜನೆಗಾಗಿ ಯಾವುದೇ ಕುಟುಂಬವನ್ನೂ ಒಕ್ಕಲೆಬ್ಬಿಸುವುದಿಲ್ಲ, ಹಾಗಾಗಿ ಸಾಮಾಜಿಕ ಪರಿಣಾಮದ ಅಧ್ಯಯನವೂ ಅಗತ್ಯ ಇಲ್ಲ ಎಂದು ಸಚಿವರು ಹೇಳಿದ್ದಾರೆ. ಸ್ಟೀಲ್ ಬ್ರಿಡ್ಜ್ ಯೋಜನೆ FAQs ಫೈಲ್ ಡೌನ್ ಲೋಡ್ ಮಾಡಿಕೊಳ್ಳಿ [ಸ್ಟೀಲ್ ಮೇಲ್ಸೇತುವೆ ಬೇಕೋ ಬೇಡವೋ, ಮತ ಹಾಕಿ]

ಬಸವೇಶ್ವರ ಸರ್ಕಲ್ ನಿಂದ ಹೆಬ್ಬಾಳ ತನಕದ ಈ ಉಕ್ಕಿನ ಮೇಲ್ಸೇತುವೆಯಿಂದ ಟ್ರಾಫಿಕ್ ಕಿರಿಕಿರಿ ಇರುವುದಿಲ್ಲ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ಸುಲಭವಾಗಿ ತಲುಪಬಹುದು.

English summary
Bengaluru city development minister KJ George on Thursday (Oct 13) reaffirmed the government's determination to build the steel flyover. He tweeted Bangalore Development Authority (BDA document answering questions on the proposed steel flyover that will link Basaveshwara Circle to Hebbal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X