ಕೆಂಪೇಗೌಡ ಬಡಾವಣೆ : ಜೂನ್ 15ರಂದು ಸೈಟ್ ಪಡೆದವರ ಪಟ್ಟಿ ಪ್ರಕಟ

Posted By:
Subscribe to Oneindia Kannada

ಬೆಂಗಳೂರು, ಮೇ 23 : ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ನಿವೇಶನಗಳನ್ನು ಪಡೆಯಲು ಅರ್ಜಿಸಲ್ಲಿಸಿದವರು ಜೂನ್ 15ರ ತನಕ ಕಾಯಬೇಕು. ಜೂನ್‌ 15ರಂದು ಫಲಾನುಭವಿಗಳ ಪಟ್ಟಿಯನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಪ್ರಕಟಿಸಲಿದೆ.

ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. 'ಕೆಂಪೇಗೌಡ ಬಡಾವಣೆಯಲ್ಲಿ ನಿವೇಶನಗಳನ್ನು ಪಡೆದವರ ಪಟ್ಟಿಯನ್ನು ಜೂನ್ 15ರಂದು ಪ್ರಕಟಿಸುತ್ತೇವೆ. ಲಾಟರಿ ಮೂಲಕ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುತ್ತದೆ' ಎಂದು ಹೇಳಿದ್ದಾರೆ. [ಸಿದ್ದರಾಮಯ್ಯ ಬಜೆಟ್ಟಿನಲ್ಲಿ ಬೆಂಗಳೂರಿಗೆ ಸಿಕ್ಕಿದ್ದೇನು?]

bda

ಬಿಡಿಎ ಕೆಂಪೇಗೌಡ ಬಡಾವಣೆಯಲ್ಲಿನ 5 ಸಾವಿರ ನಿವೇಶಗಳನ್ನು ಮೊದಲ ಹಂತದಲ್ಲಿ ಹಂಚಿಕೆ ಮಾಡಲು ಅರ್ಜಿ ಅಹ್ವಾನಿಸಿತ್ತು. 5 ಸಾವಿರ ನಿವೇಶನ ಪಡೆಯಲು 17 ಸಾವಿರಕ್ಕೂ ಅಧಿಕ ಅರ್ಜಿಗಳು ಬಂದಿವೆ. ನಿವೇಶನ ಸಿಗದವರಿಗೆ ಜುಲೈನಲ್ಲಿ ಪಾವತಿ ಮಾಡಿದ ಹಣವನ್ನು ವಾಪಸ್ ನೀಡಲಾಗುತ್ತದೆ. [ಬೆಂಗಳೂರು ನಗರಕ್ಕೊಂದು 10 ಪಥದ ರಸ್ತೆ]

ಮೈಸೂರು ರಸ್ತೆ ಮತ್ತು ಮಾಗಡಿ ರಸ್ತೆ ನಡುವೆ ನಾಡಪ್ರಭು ಕೆಂಪೇಗೌಡ ಬಡಾವಣೆಯನ್ನು ಬಿಡಿಎ ನಿರ್ಮಿಸಿದ್ದು, ಸುಮಾರು 25 ಸಾವಿರ ನಿವೇಶಗಳನ್ನು ಬಡಾವಣೆಯಲ್ಲಿ ನಿರ್ಮಿಸುವ ಗುರಿ ಇದೆ. ಪ್ರಸ್ತುತ ಐದು ಸಾವಿರ ನಿವೇಶಗಳನ್ನು ಮಾತ್ರ ಹಂಚಿಕೆ ಮಾಡಲಾಗುತ್ತಿದೆ. [ಬಿಡಿಎ ವೆಬ್ ಸೈಟ್]

English summary
Bengaluru Development Minister K.J.George said, The selection list for site allotment in Kempegowda Layout being developed by the Bangalore Development Authority will be published on June 15, 2016. BDA will select allottees through a lottery.
Please Wait while comments are loading...