ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಂಪೇಗೌಡ ಜಯಂತಿ ರದ್ದುಗೊಳಿಸಿದ ಸಿದ್ದು ಸರಕಾರ

ಕೆಂಪೇಗೌಡರ ಜನ್ಮದಿನದ ಬಗ್ಗೆ ಗೊಂದಲ ಇರುವುದರಿಂದ ಏಪ್ರಿಲ್ 17ರಂದು ರಾಜ್ಯ ಸರಕಾರ ನಡೆಸಲು ಉದ್ದೇಶಿಸಿದ್ದ ಕೆಂಪೇಗೌಡ ಜಯಂತಿಯನ್ನು ರದ್ದುಗೊಳಿಸಲಾಗಿದೆ ಎಂದು ಇಂಧನ ಸಚಿವ ಡಿಕೆ ಶಿವಕುಮಾರ್ ಮಾಹಿತಿ ನೀಡಿದ್ದಾರೆ

By ಒನ್ಇಂಡಿಯಾ ಪ್ರತಿನಿಧಿ
|
Google Oneindia Kannada News

ಬೆಂಗಳೂರು, ಏಪ್ರಿಲ್ 15: ಏಪ್ರಿಲ್ 17ರಂದು ರಾಜ್ಯ ಸರಕಾರದಿಂದ ಆಚರಿಸಲು ನಿರ್ಧರಿಸಿದ್ದ ಕೆಂಪೇಗೌಡ ಜಯಂತಿಯನ್ನು ರದ್ದುಗೊಳಿಸಿರುವುದಾಗಿ ಇಂಧನ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಕೆಂಪೇಗೌಡರ ಜನ್ಮದಿನದ ಬಗ್ಗೆ ಗೊಂದಲ ಇರುವುದರಿಂದ ಈ ನಿರ್ಧಾರ ಕೈಗೊಂಡಿರುವುದಾಗಿ ಅವರು ತಿಳಿಸಿದ್ದಾರೆ.

Kempegowda jayanti cancelled by Congress government

ಆದರೆ, ಆದಿಚುಂಚನಗಿರಿ ಮಠದ ನಿರ್ಮಲಾನಂದ ನಾಥ ಸ್ವಾಮೀಜಿ ಸೂಚನೆ ಮೇರೆಗೆ ಈ ತೀರ್ಮಾನ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಇದೇ ಮೊದಲ ಬಾರಿಗೆ ರಾಜ್ಯ ಸರಕಾರದಿಂದ ಕೆಂಪೇಗೌಡ ಜಯಂತಿ ಆಚರಣೆಗೆ ನಿರ್ಧರಿಸಲಾಗಿತ್ತು. ಆದರೆ ಜನ್ಮದಿನದ ಬಗ್ಗೆ ಗೊಂದಲ ಇರುವುದರಿಂದ ಕಾರ್ಯಕ್ರಮವನ್ನೇ ರದ್ದುಗೊಳಿಸಲಾಗಿದೆ.[ರಾಜ್ಯಾದ್ಯಂತ ಕೆಂಪೇಗೌಡ, ರಾಣಿ ಚೆನ್ನಮ್ಮ ಜಯಂತಿ: ಏನಿದರ ಗುಟ್ಟು?]

Kempegowda jayanti cancelled by Congress government

ಈ ಮಧ್ಯೆ ಸರಕಾರದ ಈ ಕ್ರಮಕ್ಕೆ ಆಕ್ಷೇಪ ವ್ಯಕ್ತವಾಗಿದ್ದು, ಕೆಂಪೇಗೌಡ ಜಯಂತಿ ಆಚರಣೆ ಎಂಬುದೇ ಗಿಮಿಕ್ ಆಗಿತ್ತು. ಅದ್ಯಾವ ಉದ್ದೇಶವಿಟ್ಟುಕೊಂಡು ಸರಕಾರದಿಂದ ಘೋಷಣೆ ಮಾಡಲಾಗಿತ್ತೋ ಅದು ಈಡೇರಿದ ಬಳಿಕ ನೆಪ ಮಾಡಿಕೊಂಡು ಕಾರ್ಯಕ್ರಮ ರದ್ದು ಮಾಡುತ್ತಿದ್ದಾರೆ. ಘೋಷಣೆಗೆ ಮುನ್ನ ಈ ಬಗ್ಗೆ ಚರ್ಚೆ ಮಾಡಿರಲಿಲ್ಲವೆ? ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ.

English summary
Kempegowda jayanti cancelled by Congress government. There is a confusion in Kempegowda's date of birth, so, according to Adichunchanagiri seer Nirmalanandanatha seer's instruction jayanti cancelled, said by minister DK Shivakumar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X