ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿಇಟಿ ಶುಲ್ಕ ಪಾವತಿಗೆ ಜುಲೈ 1ರವರೆಗೂ ಅವಕಾಶ

By Vanitha
|
Google Oneindia Kannada News

ಬೆಂಗಳೂರು, ಜೂ, 30 : ಸಿಇಟಿ ಶುಲ್ಕ ಪಾವತಿಯಲ್ಲಿ ಉಂಟಾಗಿದ್ದ ಗೊಂದಲ ನಿವಾರಣೆಗೆ ಮುಂದಾಗಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಶುಲ್ಕ ಪಾವತಿಗೆ ಒಂದು ದಿನ ಹೆಚ್ಚುವರಿ ಅವಕಾಶ ನೀಡಿದೆ.

ಬ್ಯಾಂಕ್ ಸರ್ವರ್ ಸಮಸ್ಯೆಯಿಂದ ವಿದ್ಯಾರ್ಥಿಗಳು ಶುಲ್ಕ ಪಾವತಿ ಮಾಡಲು ಹೆಣಗಾಟ ನಡೆಸಿದರು. ಕಳೆದ ಮೂರು ದಿನಗಳಿಂದಲೂ ಸರ್ವರ್ ಸಮಸ್ಯೆ ಕಂಡುಬಂದ ಹಿನ್ನೆಲೆಯಲ್ಲಿ ಜೂನ್ 30 ರವರೆಗೆ ಇದ್ದ ಕಾಲಾವಕಾಶವನ್ನು ಜುಲೈ 1 ಕ್ಕೆ ವಿಸ್ತರಿಸಲಾಗಿದೆ.

KEA extends fee payment date by a day

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮೊದಲು ಶುಲ್ಕ ಪಾವತಿ ದಿನಾಂಕವನ್ನು ಜೂ. 30 ಎಂದು ನಿಗದಿ ಪಡಿಸಿತ್ತು. ಅಷ್ಟರೊಳಗೆ ಶುಲ್ಕ ಪಾವತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಕಾಲೇಜ್ ಗಳಿಗೆ ಶುಲ್ಕ ಪಾವತಿಸಿದ ಬಿಲ್ ನ್ನು ಸಲ್ಲಿಸಬೇಕೆಂದು ವಿದ್ಯಾರ್ಥಿಗಳಿಗೆ ಆದೇಶ ಹೊರಡಿಸಿತ್ತು.

ಸರ್ವರ್ ವ್ಯವಸ್ಥೆ ತುಂಬಾ ನಿಧಾನವಾಗಿ ಕಾರ್ಯನಿರ್ವಹಿಸುತ್ತಿತ್ತು. ಇದರ ಪರಿಣಾಮ ಜೂ. 27 ಶನಿವಾರ ಶುಲ್ಕ ಪಾವತಿಗೆ ಸಂಬಂಧಿಸಿದ ಅರ್ಜಿಯನ್ನು ಅಪ್‌ಲೋಡ್ ಮಾಡುವಲ್ಲಿ ವಿಳಂಬವಾಯಿತು. ಅಲ್ಲದೇ ಅಂದು ಬ್ಯಾಂಕ್ ಕಾರ್ಯ ನಿರ್ವಹಣಾ ಸಮಯವೂ ಮುಗಿದು ಹೋಗಿತ್ತು.

ಇದರಿಂದ ಸೀಟು ಹಂಚಿಕೆ ಮೊದಲ ಪ್ರಕ್ರಿಯೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಆತಂಕಕ್ಕೆ ಒಳಗಾಗಿದ್ದರು. ಈ ಸಮಸ್ಯೆ ಅರಿತ ಕರ್ನಾಟಕ ಪರೀಕ್ಷಾ ಮಂಡಳಿ ಪಾವತಿ ದಿನಾಂಕವನ್ನು ಜು.1 ಕ್ಕೆ ಮುಂದೂಡಿ, ಎಲ್ಲರೂ ಸಮಾಧಾನದ ನಿಟ್ಟುಸಿರು ಬಿಡುವಂತೆ ಮಾಡಿದೆ.

English summary
Karnataka Examination Authority declared first round of seat allotment fees payment date on june 30. But many of students can't upload fee payment application. So KEA extended fees date from june 30 to july 1. This development is decrease parents and students tentions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X