ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

1000 ಪೌರ ಕಾರ್ಮಿಕರನ್ನು ಸಿಂಗಪುರಕ್ಕೆ ಕಳಿಸುತ್ತಿದೆ ರಾಜ್ಯ ಸರ್ಕಾರ

|
Google Oneindia Kannada News

ಬೆಂಗಳೂರು, ಜುಲೈ 11: ನೈರ್ಮಲ್ಯಕ್ಕಾಗಿಯೇ ಪ್ರಸಿದ್ಧಿ ಪಡೆದ ಮಲೇಷ್ಯಾದ ಸಿಂಗಪುರಕ್ಕೆ ಕರ್ನಾಟಕ ರಾಜ್ಯದಿಂದ 1000 ಪೌರಕಾರ್ಮಿಕರನ್ನು ಪ್ರವಾಸಕ್ಕೆ ಕಳಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಜುಲೈ ಮೊದಲ ವಾರದಿಂದಲೇ ಪ್ರವಾಸ ಆರಂಭವಾಗಿದ್ದು, ಈಗಾಗಲೇ 40 ಪೌರ ಕಾರ್ಮಿಕರು ಸಿಂಗಾಪುರ ಪ್ರವಾಸ ಶುರುಮಾಡಿದ್ದಾರೆ.

ಸಿಂಗಪುರ ಅತ್ಯಂತ ಸ್ವಚ್ಛ ನಗರ ಎಂದು ಪ್ರಸಿದ್ಧಿ ಪಡೆದಿದ್ದು, ಇಲ್ಲಿನ ಘನತ್ಯಾಜ್ಯ ವಿಲೇವಾರಿ, ಮ್ಯಾನ್ ಹೋಲ್ ನಿರ್ವಹಣೆ ಮುಂತಾದವುಗಳ ಕುರಿತು ಅಧ್ಯಯನ ನಡೆಸಲು 1000 ಪೌರ ಕಾರ್ಮಿಕರು, 40 ಮಂದಿ ಅಧಿಕಾರಿಗಳನ್ನು ವಿಶೇಷ ಘಟಕ ಯೋಜನೆ (ಎಸ್ ಸಿಪಿ) ಮತ್ತು ಗಿರಿಜನ ಉಪಯೋಜನೆ(ಟಿಎಸ್ ಪಿ)ಯಡಿ ಪ್ರವಾಸಕ್ಕೆ ಕಳಿಸಲಾಗುತ್ತಿದ್ದು, ಇದು ಸರ್ಕಾರದ ಮಹತ್ವದ ಹೆಜ್ಜೆ ಎನ್ನಿಸಿದೆ.

ಸಿಂಗಪುರಕ್ಕೆ ಹೊರಟ ಮೊದಲ ಪೌರ ಕಾರ್ಮಿಕ ತಂಡಸಿಂಗಪುರಕ್ಕೆ ಹೊರಟ ಮೊದಲ ಪೌರ ಕಾರ್ಮಿಕ ತಂಡ

Karnataka state government starts study tour to Singapore for civic workers.

ಪ್ರವಾಸದ ಹೊಣೆಯನ್ನು ಕರ್ನಾಟಕ ನಗರ ವ್ಯವಸ್ಥಾಪಕರ ಸಂಘ (ಸಿ-ಮ್ಯಾಕ್) ಹೊಂದಿದೆ. ಕಲಿಕೆಯ ಆಸಕ್ತಿ ಇರುವ, ಹತ್ತು ವರ್ಷಗಳ ಕಾಳ ಪೌರ ಕಾರ್ಮಿಕರಾಗಿ ಸೇವೆ ಸಲ್ಲಿಸಿದ, 30 ರಿಂದ 50 ವರ್ಷ ವಯೋಮಾನದ ಕಾಯಂ ಪೌರ ಕಾರ್ಮಿಕರನ್ನು ಪ್ರವಾಸಕ್ಕೆ ಕಳಿಸಲಾಗುತ್ತಿದ್ದು, ಪ್ರತಿ ಪೌರ ಕಾರ್ಮಿಕರ ಪ್ರವಾಸಕ್ಕೆ ಸುಮಾರು 80,000 ರೂ. ವೆಚ್ಚವಾಗಲಿದೆ.

ಸಿಂಗಪುರದಲ್ಲಿ ಜಿಎಸ್ಟಿ ಹೇಗಿದೆ, ಯಾರಿಗೆ ಲಾಭವಾಗುತ್ತಿದೆ?ಸಿಂಗಪುರದಲ್ಲಿ ಜಿಎಸ್ಟಿ ಹೇಗಿದೆ, ಯಾರಿಗೆ ಲಾಭವಾಗುತ್ತಿದೆ?

ಎಲ್ಲ ಪೌರ ಕಾರ್ಮಿಕರ ಪಾಸ್ ಪೋರ್ಟ್ ಅನ್ನೂ ಸರ್ಕಾರವೇ ಮಾಡಿಕೊಡಲಿದೆ. ವಿಮಾನ ವೆಚ್ಚ ಸಹ ಸರ್ಕಾರವೇ ಭರಿಸುತ್ತದೆ. ತಮ್ಮೂರನ್ನು ಬಿಟ್ಟು ಹೊರ ಪ್ರಪಂಚವನ್ನೇ ನೋಡಿರದ ಎಷ್ಟೊ ಪೌರ ಕಾರ್ಮಿಕರಿಗೆ ಸರ್ಕಾರದ ಈ ಯೋಜನೆ ಸಂತಸವನ್ನುಂಟುಮಾಡಿರುವುದಂತೂ ದಿಟ.

English summary
Karnataka state government has decided to conduct a study tour to Singapore, for 1000 civic workers. The government's new project brings happiness on civic workers face.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X