ಎಸ್ಸೆಸ್ಸೆಲ್ಸಿಯಲ್ಲಿ ಶೇ.100 ಅಂಕ ಪಡೆದ ಈ ಮೂವರಿಗೆ ಅಭಿನಂದನೆ

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಬೆಂಗಳೂರು, ಮೇ 12: ಇಂದು ಹೊರಬಿದ್ದ ಕರ್ನಾಟಕ ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಮೂವರು ವಿದ್ಯಾರ್ಥಿಗಳು 100% ಅಂಕ ಗಳಿಸಿ, ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾರೆ. ಒಟ್ಟು 625(625) ಅಂಕ ಗಳಿಸುವ ಮೂಲಕ ಮೂವರೂ ಮೊದಲ ಸ್ಥಾನವನ್ನು ಹಂಚಿಕೊಂಡಿದ್ದಾರೆ.

ಬೆಂಗಳೂರಿನ, ಮಲ್ಲೇಶ್ವರಂ ನ ಎಂ ಇ ಎಸ್ ಕಿಶೋರ್ ಕೇಂದ್ರ ಪ್ರೌಢ ಶಾಲೆಯ ಸುಮಂತ್ ಹೆಗಡೆ 625 (625) ಅಂಕ ಪಡೆದರೆ, ಮಂಗಳೂರಿನ ಪುತ್ತೂರಿನ ಸೇಂಟ್ ಜೋಶಿಮ್ಸ್ ಹೈಸ್ಕೂಲಿನ ಪೂರ್ಣಾನಂದ ಎಚ್., ಬಾಗಲಕೋಟೆ ಜಿಲ್ಲೆ ಜಮಖಂಡಿಯ ಎಸ್ ಆರ್ ಎ ಕಾಂಪೊಸಿಟ್ ಜ್ಯೂನಿಯರ್ಕಾಲೇಜಿನ ಪಲ್ಲವಿ ಶಿರಹಟ್ಟಿ ಇವರೂ 625 (625) ಅಂಕ ಪಡೆದು ದಾಖಲೆ ಬರೆದಿದ್ದಾರೆ.[SSLC ಫಲಿತಾಂಶ : ಉಡುಪಿಗೆ ಮೊದಲ ಸ್ಥಾನ, ಬೀದರ್ ಗೆ ಕೊನೆ ಸ್ಥಾನ]

Karnataka SSLC results 2017: Three students got 100%

ಇದರೊಂದಿಗೆ ಒಟ್ಟು ಆರು ಜನ 624 (625) ಅಂಕ ಗಳಿಸಿದ್ದು, 13 ಜನ 623 (625) ಅಂಕ ಗಳಿಸಿದ್ದಾರೆ.[ಎಸ್ಎಸ್ಎಲ್ ಸಿ ಫಲಿತಾಂಶಪ್ರಕಟ, 3 ಗಂಟೆಗೆ ಆನ್ಲೈನಲ್ಲಿ ಲಭ್ಯ]

Karnataka SSLC results 2017: Three students got 100%

ವಚನ್ ರಾಘವೇಂದ್ರ , ಜಯನಿ ಆರ್ ನಾಥ್, ಹೇಮಂತ್ ಶಾಸ್ತ್ರಿ, ನಂದಿನಿ ಎಂ. ನಾಯ್ಕ್, ಈಶ್ವರ್ ಸೀತಾರಾಮ್ ಜೋಶಿ, ಸೋನಾಲಿ ಈ ಆರು ಜನ 624 (625) ಅಂಕ ಗಳಿಸಿ ದ್ವಿತೀಯ ಸ್ಥಾನ ಹಂಚಿಕೊಂಡಿದ್ದಾರೆ.

Karnataka SSLC results 2017: Three students got 100%

ಮಂಗಳೂರನ ಸೇಂಟ್ ಆಗ್ನಸ್ ಕಾಲೇಜಿನ ಜಯನಿ ಆರ್. ನಾಥ್ 624 (625) ಅಂಕಗೊಳಿಸಿ ರಾಜ್ಯಕ್ಕೆ ದ್ವಿತೀಯ ಸ್ಥಾನಗಳಿಸಿದ್ದಾರೆ. 'ಒನ್ ಇಂಡಿಯಾ' ಜೊತೆ ಮಾತನಾಡಿದ ಬಬಿತಾ ಮತ್ತು ರೋಹಿನಾಥ್ ಪುತ್ರಿ ಜಯನಿ ಮೆಡಿಕಲ್ ಅಥವಾ ಆರ್ಕಿಟೆಕ್ಚರ್ ಓದುವುದಾಗಿ ಕೇಳಿಕೊಂಡಿದ್ದಾರೆ.

English summary
Karnataka SSLC results 2017: Three students got 100% marks. Sumanth Hegde from Bengaluru, Poornanand from Mangaluru and Pallavi from Bagalkot
Please Wait while comments are loading...