ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜಯಾ ಪ್ರಕರಣ: ತಮಿಳುನಾಡಿಗೆ 12 ಕೋಟಿ ಬಿಲ್ ಕಳುಹಿಸಿದ ಕರ್ನಾಟಕ

ಜಯಲಲಿತಾ ಅಕ್ರಮ ಆಸ್ತಿ ಪ್ರಕರಣದ ಖರ್ಚನ್ನು ವಸೂಲಿ ಮಾಡುವ ದಿನ ಕೊನೆಗೂ ಹತ್ತಿರ ಬಂದಿದೆ. ಕರ್ನಾಟಕ ಸರಕಾರ ಒಟ್ಟು ಪ್ರಕರಣದಲ್ಲಿ ಖರ್ಚಾದ 12.04 ಕೋಟಿ ರೂಪಾಯಿಗಳನ್ನು ಪಾವತಿಸುವಂತೆ ತಮಿಳುನಾಡು ಸರಕಾರಕ್ಕೆ ಬಿಲ್ ಕಳುಹಿಸಿದೆ.

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಫೆಬ್ರವರಿ 17: ಜಯಲಲಿತಾ ಅಕ್ರಮ ಆಸ್ತಿ ಪ್ರಕರಣದ ಖರ್ಚನ್ನು ವಸೂಲಿ ಮಾಡುವ ದಿನ ಕೊನೆಗೂ ಹತ್ತಿರ ಬಂದಿದೆ. ಕರ್ನಾಟಕ ಸರಕಾರ ಒಟ್ಟು ಪ್ರಕರಣದಲ್ಲಿ ಖರ್ಚಾದ 12.04 ಕೋಟಿ ರೂಪಾಯಿಗಳನ್ನು ಪಾವತಿಸುವಂತೆ ತಮಿಳುನಾಡು ಸರಕಾರಕ್ಕೆ ಬಿಲ್ ಕಳುಹಿಸಿದೆ.

2004ರಿಂದ 2016ರ ಮಧ್ಯೆ ಜಯಲಲಿತಾ ಅಕ್ರಮ ಆಸ್ತಿ ಪ್ರಕರಣದ ವಿಚಾರಣೆಯ ಕೋರ್ಟ್ ಖರ್ಚು, ಲಾಯರ್ ಗಳ ಫೀಸು, ನ್ಯಾಯಾಧೀಶರ ಸಂಬಳ, ಭದ್ರತಾ ವೆಚ್ಚಗಳು ಈ ಬಿಲ್ಲಿನಲ್ಲಿ ಸೇರಿವೆ. ಮುಖ್ಯ ಲೆಕ್ಕಾಧಿಕಾರಿ, ಸಿಟಿ ಸಿವಿಲ್ ನ್ಯಾಯಾಲಯದ ಮತ್ತು ಹೈಕೋರ್ಟಿನ ರಿಜಿಸ್ಟ್ರಾರ್ ಮತ್ತು ಗೃಹ ಇಲಾಖೆಯಿಂದ ಈ ಬಿಲ್ ಖರ್ಚಿನ ಬಿಲ್ ಗಳನ್ನು ತರಿಸಿಕೊಂಡು ತಮಿಳುನಾಡಿಗೆ ಕಳುಹಿಸಲಾಗಿದೆ.[ಪಳನಿಸ್ವಾಮಿ ಮುಖ್ಯಮಂತ್ರಿಯಾಗದಂತೆ ಕೊನೆಯ ಹಂತದ ಹೈಡ್ರಾಮ]

Karnataka sends Rs 12 crore bill to Tamil Nadu for conducting Jaya DA case

ಈ ಕುರಿತು ಪ್ರತಿಕ್ರಿಯೆ ನೀಡಿರುವ ಕರ್ನಾಟಕ ಕಾನೂನು ಸಚಿವ ಟಿಬಿ ಜಯಚಂದ್ರ ಈಗಾಗಲೇ ತಮಿಳುನಾಡು ಮುಖ್ಯ ಕಾರ್ಯದರ್ಶಿಗೆ ಈ ಸಂಬಂಧ ಪತ್ರ ಬರೆಯಲಾಗಿದೆ ಎಂದು ತಿಳಿಸಿದ್ದಾರೆ. ತಮಿಳುನಾಡಿಗೆ ಕಳುಹಿಸಿದ ಬಿಲ್ ಹೀಗಿದೆ,

3.78 ಕೋಟಿ - ವಿವಿಧ ಇಲಾಖೆಗಳ ಖರ್ಚು

2.86 ಕೋಟಿ - ಸಿಟಿ ಸಿವಿಲ್ ನ್ಯಾಯಾಲಯದ ಖರ್ಚು (2004-14)

4.68 ಕೋಟಿ - ಹೈಕೋರ್ಟ್ ಖರ್ಚು (2004-16)

70.33 ಲಕ್ಷ- ಪೊಲೀಸ್ ಭದ್ರತೆಯ ವೆಚ್ಚ (2001-16)[ನಿಯೋಜಿತ ಮುಖ್ಯಮಂತ್ರಿ ಇಕೆ ಪಳನಿಸ್ವಾಮಿ ವ್ಯಕ್ತಿಚಿತ್ರ]

ತಮಿಳುನಾಡಿನಲ್ಲಿ ಪ್ರಕರಣದ ನಿಷ್ಪಕ್ಷಪಾತ ವಿಚಾರಣೆ ಸಾಧ್ಯವಿಲ್ಲ ಎಂಬ ಕಾರಣಕ್ಕೆ ಸುಪ್ರಿಂ ಕೋರ್ಟ್ ಪ್ರಕರಣವನ್ನು ಕರ್ನಾಟಕಕ್ಕೆ ವರ್ಗಾಯಿಸಿತ್ತು. ಈ ಸಂದರ್ಭದಲ್ಲೇ ಪ್ರಕರಣದ ಖರ್ಚುಗಳನ್ನು ಕರ್ನಾಟಕ ಸರಕಾರಕ್ಕೆ ತಮಿಳುನಾಡು ನೀಡಬೇಕು ಎಂದು ಸುಪ್ರಿಂ ಕೋರ್ಟ್ ಆದೇಶದಲ್ಲಿ ತಿಳಿಸಿತ್ತು. ಅದರಂತೆ ಈಗ ಬಿಲ್ ಕಳುಹಿಸಲಾಗಿದ್ದು ತಮಿಳುನಾಡು ಖರ್ಚು ವೆಚ್ಚಗಳನ್ನು ಪಾವತಿ ಮಾಡಬೇಕಾಗಿದೆ.

English summary
Karnataka has sent a bill of Rs 12.04 crore to Tamil Nadu in connection with the Jayalalithaa disproportionate assets case. The bill details the expenditure incurred by Karnataka while conducting the DA case between 2004 and 2016.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X