ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕರವೇಯಿಂದ ಉದ್ಯೋಗ ಮಾರ್ಗದರ್ಶನ ಶಿಬಿರ

By Mahesh
|
Google Oneindia Kannada News

ಬೆಂಗಳೂರು, ಏಪ್ರಿಲ್ 07: ಕನ್ನಡಿಗ ಉದ್ಯೋಗಾರ್ಥಿಗಳ ಅನುಕೂಲಕ್ಕಾಗಿ ಸತತ ಐದು ಬಾರಿ "ಉದ್ಯೋಗ ಮಾರ್ಗದರ್ಶನ ಶಿಬಿರ"ವನ್ನು ಯಶಸ್ಚಿಯಾಗಿ ಆಯೋಜಿಸಿದ್ದ ಕರ್ನಾಟಕ ರಕ್ಷಣಾ ವೇದಿಕೆಯ "ಐಟಿ ಘಟಕ" ಈಗ ಆರನೇ ಬಾರಿಗೆ ಶಿಬಿರ ಹಮ್ಮಿಕೊಂಡಿದೆ.

ಕರ್ನಾಟಕ ರಕ್ಷಣಾ ವೇದಿಕೆಯು ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡರ ನೇತೃತ್ವದಲ್ಲಿ ನಾಡು ನುಡಿಯ ವಿಚಾರವಾಗಿ ಕಳೆದ 15 ವರ್ಷಗಳಿಂದ ಹೋರಾಟಗಳನ್ನು ಮಾಡಿಕೊಂಡು ಬರುತ್ತಿರುವುದು ನಾಡಿನ ಜನತೆಗೆ ತಿಳಿದಿದೆ.

ಬೆಂಗಳೂರು ಮಹಾನಗರದಲ್ಲಿ ಸುಮಾರು ಎರಡು ದಶಕಗಳ ಹಿಂದೆ ಐಟಿ ಉದ್ಯಮವು ಸ್ಥಾಪನೆಯಾಗಿ ಇಂದು ಹೆಮ್ಮರವಾಗಿ ಬೆಳೆದಿದೆ. ದೇಶದ ವಿವಿಧ ಭಾಗಗಳಿಂದ ಜನರು ಐಟಿ ಉದ್ಯೋಗ ಅರಸಿ ಬೆಂಗಳೂರಿಗೆ ಬರುತ್ತಿದ್ದಾರೆ.

ಈ ಹೊತ್ತಿನಲ್ಲಿ ರಾಜ್ಯದ ನಾನ ಭಾಗಗಳಲ್ಲಿ ವಿದ್ಯಾಭ್ಯಾಸ ಪಡೆದು ತಮ್ಮ ಅಭಿರುಚಿಗೆ ಸರಿಹೊಂದುವ ಐಟಿ ಉದ್ಯೋಗವನ್ನು ಹುಡುಕುತ್ತಿರುವ ಕನ್ನಡಿಗರಿಗೆ "ಉದ್ಯೋಗ ಮಾರ್ಗದರ್ಶನ ಶಿಬಿರ"ದ ಮೂಲಕ ಮಾರ್ಗದರ್ಶನವನ್ನು ನೀಡುವುದು ಕರ್ನಾಟಕ ರಕ್ಷಣಾ ವೇದಿಕೆಯ "ಐಟಿ ಘಟಕ"ದ ಧ್ಯೇಯೋದ್ದೇಶಗಳಲ್ಲಿ ಒಂದಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಐಟಿ ಘಟಕದ ಉಪಾಧ್ಯಕ್ಷರಾದ ಅಮರನಾಥ್ ಶಿವಶಂಕರ್ ಹೇಳಿದ್ದಾರೆ.

Karnataka Rakshana Vedike 6th Free Career guidance Camp, Bengaluru
ಇದೀಗ 6 ನೇ ಉದ್ಯೋಗ ಮಾರ್ಗದರ್ಶನ ಶಿಬಿರವನ್ನು ಆಯೋಜಿಸಲಾಗಿದೆ. ಅದರ ವಿವರಗಳು ಹೀಗಿವೆ:

ದಿನಾಂಕ: ಏಪ್ರಿಲ್ 23 , 2016, ಶನಿವಾರ

ಸ್ಥಳ:
ಬಿ.ಎಂ.ಶ್ರೀ ಸ್ಮಾರಕ ಪ್ರತಿಷ್ಠಾನ , 3 ನೇ ಮುಖ್ಯ ರಸ್ತೆ, ಏನ್.ಆರ್.ಕಾಲೋನಿ , ಬಸವನಗುಡಿ, ಬೆಂಗಳೂರು

ಸಮಯ:
ಬೆಳಿಗ್ಗೆ 10:00 ರಿಂದ ಮಧ್ಯಾಹ್ನ 1:30 ರವರೆಗೆ

ನೊಂದಣಿ:
ಈ ಕೊಂಡಿಯಲ್ಲಿ ನೊಂದಾಯಿಸಿಕೊಂಡವರಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ದೊರೆಯುತ್ತದೆ. ಈ ಲಿಂಕ್ ಕ್ಲಿಕ್ ಮಾಡಿ

ಐಟಿ ಘಟಕದ ಧ್ಯೇಯೋದೇಶಗಳು:

1. ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗ ಮಾರ್ಗದರ್ಶನ ನೀಡುವುದು.

2. ಉದ್ಯೋಗಾಕಾಂಕ್ಷಿಗಳಿಗೆ ಸಹಕಾರಿಯಾಗುವಂತಹ ಉದ್ಯೋಗ ಮಾಹಿತಿ ಕೇಂದ್ರವನ್ನು ಸ್ಥಾಪಿಸುವುದು.

3. ಐಟಿ ಉದ್ಯೋಗ ಅರಸಿ ನಾಡಿಗೆ ಹಲವು ಪರಭಾಷಿಕರು ಬರುತ್ತಿದ್ದಾರೆ. ಅವರನ್ನು ಮುಖ್ಯವಾಹಿನಿಗೆ ತರಲು "ಕನ್ನಡ ಕಲಿ" ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು.

ಇದು ಕರ್ನಾಟಕ ರಕ್ಷಣಾ ವೇದಿಕೆಯ ಐಟಿ ಘಟಕವು ಕನ್ನಡಿಗರ ಅನುಕೂಲಕ್ಕೋಸ್ಕರ ಉಚಿತವಾಗಿ ಆಯೋಜಿಸುತ್ತಿರುವ ಶಿಬಿರವಾಗಿದೆ. (ಒನ್ ಇಂಡಿಯಾ ಸುದ್ದಿ)

English summary
Information Technology unit of Karnataka Rakshana Vedike has organised a free Career Guidance Camp for the job aspirants for the 6th time. The event will be held at IIWC, BP Wadia road, Basavanagudi, Bengaluru on April 23. Interested can register their names at the earliest.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X